Tumkur News
ತುಮಕೂರು: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಾರೆ ಎಂಬ ಚರ್ಚೆಗಳು ಎರಡು ಬಣಗಳ ನಡುವಿನ ಕಲಹಕ್ಕೆ ಕಾರಣವಾಗಿದೆ.
ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಕೆ ಮುಂದೂಡಿಕೆ
ಜೆಡಿಎಸ್ ಕಾರ್ಯಕರ್ತರು ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಅವರ ತಿಥಿ ಪೋಸ್ಟರ್ ಮಾಡಿ ಜಾಲತಾಣಗಳಲ್ಲಿ ಹರಿಬಿಟ್ಟರೆ, ಎಸ್.ಆರ್. ಶ್ರೀನಿವಾಸ್ ಬೆಂಬಲಿತ ಕಾರ್ಯಕರ್ತರು ಕುಮಾರಸ್ವಾಮಿಯ ಕೈಲಾಸ ಸಮಾರಾಧನೆ ಪೋಸ್ಟರ್ ಗಳನ್ನು ಹಾಕುತ್ತಿದ್ದಾರೆ.
ಗಂಡ್ಸಾದ್ರೆ ನನ್ನ ವಿರುದ್ಧ ಸ್ಪರ್ಧೆ ಮಾಡಲಿ; ಎಚ್ಡಿಕೆಗೆ ಸವಾಲೆಸೆದ ಎಸ್.ಆರ್. ಶ್ರೀನಿವಾಸ್
ಜೆಡಿಎಸ್ ಕಾರ್ಯಕರ್ತರು ಎಸ್.ಆರ್. ಶ್ರೀನಿವಾಸ್ ಅವರ ಕೈಲಾಸ ಸಮಾರಾಧನೆ ಪೋಸ್ಟರ್ ಮಾಡಿ, ಕೈಲಾಸ ಸಮಾರಾಧನೆಯನ್ನು ಸ್ವಕ್ಷೇತ್ರ ಗುಬ್ಬಿಯಲ್ಲಿ ಅಕ್ಟೋಬರ್ 21ರಂದು ಏರ್ಪಡಿಸಲಾಗಿದೆ. ಕುಟುಂಬ ವರ್ಗ, ಗುಬ್ಬಿ ಕ್ಷೇತ್ರದ ಗ್ರಾಮಸ್ಥರು ಮತ್ತು ಬಂಧುಗಳು ದುಃಖತೃಪ್ತರು ಎಂದು ಕೈಲಾಸ ಸಮಾರಾಧನೆ ಕಾರ್ಡ್ ನಲ್ಲಿ ತಿಳಿಸಲಾಗಿದೆ.
ಸ್ವಕ್ಷೇತ್ರದಲ್ಲೇ ಶಾಸಕ ಎಸ್.ಆರ್. ಶ್ರೀನಿವಾಸ್ ವಿರುದ್ಧ ಆಕ್ರೋಶ!
ಎಸ್.ಆರ್. ಶ್ರೀನಿವಾಸ್ ಬೆಂಬಲಿತ ಕಾರ್ಯಕರ್ತರು ಎಚ್.ಡಿ. ಕುಮಾರಸ್ವಾಮಿ ಅವರ ಕೈಲಾಸ ಸಮಾರಾಧನೆಯ ಪೋಸ್ಟರ್ ಮಾಡಿದ್ದು, ಬಿಡದಿ ತೋಟದಲ್ಲಿ ಜೂ. 22ರಂದು ವೈಕುಂಠ ಸಮಾರಾಧನೆ ಏರ್ಪಡಿಸಲಾಗಿದೆ. ದುಃಖತೃಪ್ತರು ರಾಧಿಕಾ ಕುಮಾರಸ್ವಾಮಿ ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ.
ಅವನೇನು ಕತ್ತೆ ಕಾಯುತಿದ್ನಾ?; ಎಚ್ಡಿಕೆಗೆ ಎಸ್.ಆರ್. ಶ್ರೀನಿವಾಸ್ ತರಾಟೆ
ದಿನೇ ದಿನೇ ಎಚ್ಡಿಕೆ ಹಾಗೂ ಎಸ್.ಆರ್. ಶ್ರೀನಿವಾಸ್ ನಡುವೆ ವಾಗ್ದಾಳಿ ಹೆಚ್ಚುತ್ತಿದೆ. ಒಬ್ಬರನ್ನೊಬ್ಬರು ಏಕವಚನದಲ್ಲಿ ಟೀಕಿಸುವ ಹಂತಕ್ಕೆ ತಲುಪಿದೆ. ಒಂದೇ ಪಕ್ಷದವರಾಗಿ ಈ ರೀತಿ ನಡೆದುಕೊಳ್ಳುತ್ತಿರುವುದು ಪಕ್ಷದ ಹಿನ್ನೆಡೆಗೆ ಕಾರಣವಾಗಲಿದೆ ಎಂದು ರಾಜಕೀಯ ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ.
+ There are no comments
Add yours