ಸರ್ಕಾರಿ ಶಾಲೆ ಜಾಗಕ್ಕಾಗಿ ಕಿತ್ತಾಟ: ಜಿಲ್ಲಾಧಿಕಾರಿ ಮಧ್ಯಪ್ರವೇಶ ಅಗತ್ಯ

1 min read

 

Tumkur News
ತುಮಕೂರು: ಕೃಷ್ಣ ರಾಜೇಂದ್ರ ಒಡೆಯರ್ ಪ್ರಾರಂಭಿಸಿದ ಶಾಲೆಯ ಸ್ಥಿತಿ ಹೇಗಿದೆ ಗೊತ್ತಾ? ಅತ್ತ ದರಿ, ಇತ್ತ ಪುಲಿ ಎಂಬ ಸ್ಥಿತಿಗೆ ಬಂದಿದೆ. ಇಷ್ಟಕ್ಕೂ ಯಾವುದು ಈ ಶಾಲೆ ಅಂತೀರಾ? ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಪ್ರಮೋದ್ ಮುತಾಲಿಕ್ ಅನ್ನು ಬಂಧಿಸಿ, ಕಾನೂನು ಕ್ರಮಕೈಗೊಳ್ಳಿ: ತಾಜುದ್ದೀನ್ ಷರೀಫ್ ಮನವಿ

ಇದು ತುಮಕೂರು ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಮಾದರಿ ಶಾಲೆ. ಕ್ರಿಶ ೧೯೪೬ನೇ ಇಸವಿಯಲ್ಲಿ ಈ ಶಾಲೆಗೆ ಅಡಿಪಾಯ ಹಾಕಿದ್ದು, ಮೈಸೂರು ಅರಸರಾಗಿದ್ದ ಕೃಷ್ಣ ರಾಜೇಂದ್ರ ಒಡೆಯರ್ ಅವರು. ಇಂದಿಗೂ ಈ ಶಾಲೆಗೆ ಕೃಷ್ಣ ರಾಜೇಂದ್ರ ಸರ್ಕಾರಿ ಶಾಲೆ ಎಂಬ ಹೆಸರೇ ಇದೆ. ಆದರೆ ಈ ಶಾಲೆಯ ದುಸ್ಥಿತಿಯನ್ನಂತೂ ಹೇಳ ತೀರದ್ದಾಗಿದೆ. ಹೌದು, ಇವತ್ತು ಈ ಶಾಲೆಗೆ ಸರಿಯಾದ ಕೊಠಡಿಗಳಿಲ್ಲ, ಮಕ್ಕಳು ಆಡೋಕು ಸರಿಯಾದ ಸ್ಥಳವಿಲ್ಲ. ಸುಮಾರು ೪ ಎಕರೆ ೨೦ ಗುಂಟೆಯಷ್ಟು ಜಾಗದಲ್ಲಿ ಪ್ರಾರಂಭವಾದ ಶಾಲೆಗೀಗ ಜಾಗದ ಸಮಸ್ಯೆ ಎದುರಾಗಿದೆ.

ತುಮಕೂರು ಜಿಲ್ಲಾ ಕಾರಾಗೃಹದಲ್ಲಿ ಅವ್ಯವಸ್ಥೆ; ಗೊತ್ತಾದ್ರೆ ನಿಮಗೂ ಆಶ್ಚರ್ಯ!

ಹೌದು, ಈ ರೀತಿ ಶಾಲೆಯ ಮಕ್ಕಳಿಗೆ ಹುಳ ಹಪ್ಪಟೆ ಬಾಧಿಸಬಾರದು ಅಂತ ಕ್ಲೀನ್ ಮಾಡಿಸೋಕೆ ನಗರಸಭೆ ಅರ್ಜಿ ಕೊಟ್ಟಿದ್ದರು. ಅರ್ಜಿ ನೀಡಿದ್ದ ಕಾರಣ ಇಂದು ನಗರಸಭೆ ಜೆಸಿಬಿ ಶಾಲೆ ಮುಂಭಾಗ ಸ್ವಚ್ಚತಾ ಕಾರ್ಯ ಮಾಡುವಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಬಂದು ತಕರಾರು ತೆಗೆದಿದ್ದಾರೆ. ಇಲ್ಲಿ ಯಾವುದೇ ಕೆಲಸ ಮಾಡಿಸಬೇಡಿ, ಇದು ನಮ್ಮ ಜಾಗ ಅಂತ ಗಲಾಟೆ ಮಾಡಿದ್ದಾರೆ.

(ಶಾಲೆ ಸ್ವಚ್ಛತೆಗೆ ಬಂದ ಜೆಸಿಬಿ ಕೆಲಸಕ್ಕೆ ಅಡ್ಡಿ)

ಒಟ್ಟಿನಲ್ಲಿ ಕೃಷ್ಣ ರಾಜೇಂದ್ರ ಒಡೆಯರ್ ರಿಂದ ಪ್ರಾರಂಭವಾದ ಶಾಲೆಗೀಗ ಜಾಗದ ಕಂಟಕ ಎದುರಾಗಿದೆ. ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಎದುರಾಗಿರುವ ಸರ್ಕಾರಿ ಶಾಲೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಡುವಿನ ಜಾಗದ ಜಗಳಕ್ಕೆ ಮುಕ್ತಿ ಕಾಣಿಸುತ್ತಾರಾ? ಕಾದು ನೋಡಬೇಕಿದೆ.

You May Also Like

More From Author

+ There are no comments

Add yours