Tumkur News
ತುಮಕೂರು: ಸರ್ಕಾರದ ಆದೇಶದ ಮಾರ್ಗಸೂಚಿಯಂತೆ ಜೂ. 21 ರಂದು ಮನುಕುಲಕ್ಕಾಗಿ ಯೋಗ ಎಂಬ ಘೋಷವಾಕ್ಯದೊಂದಿಗೆ 8ನೇ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದರು.
ಬಂಧಿತ 24 NSUI ಕಾರ್ಯಕರ್ತರಿಗೆ ಮುಕ್ತಿ
ನಗರದ ಜಿಲ್ಲಾಧಿಕರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ ದೇಶಾದ್ಯಂತ 75 ಸ್ಥಳಗಳಲ್ಲಿ ಸರ್ಕಾರವು ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ತುಮಕೂರಿನ ಜ್ಯೂನಿಯರ್ ಕಾಲೇಜು ಮೈದಾನ, ಕೊರಟಗೆರೆ ತಾಲ್ಲೂಕಿನ ಸಿದ್ದರಬೆಟ್ಟ, ಮತ್ತು ತಿಪಟೂರು ಕಲ್ಪತರು ಕಾಲೇಜಿನ ಆವರಣದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮಹಾನಾಯಕರ ವಿಚಾರಗಳನ್ನು ಸುಡಲು ಪ್ರಯತ್ನಿಸಿದವರ ಚಡ್ಡಿ ಸುಟ್ಟಿದ್ದೇವೆ: ಕೀರ್ತಿಗಣೇಶ್
ಜೂ. 21ರಂದು ಬೆಳಗ್ಗೆ ನಿಗಧಿತ ಸ್ಥಳದಲ್ಲಿ ಆಸಕ್ತ ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಬೇಕು. 6 ಗಂಟೆಯಿಂದ 8 ಗಂಟೆಯವರೆಗೆ ಯೋಗಾಭ್ಯಾಸ ನಡೆಯಲಿದೆ ಎಂದ ಅವರು, ಯೋಗದ ಮಹತ್ವದ ಬಗ್ಗೆ ನುರಿತ ತಜ್ಞರಿಂದ ಉಪನ್ಯಾಸ ನೀಡಲು ಅಗತ್ಯ ಕ್ರಮಕೈಗೊಳ್ಳುವಂತೆ ಡಾ. ಸಂಜೀವ ಮೂರ್ತಿ ಅವರಿಗೆ ಸೂಚಿಸಿದರು.
ಗ್ರಾಮೀಣ ಬ್ಯಾಂಕ್ ಉದ್ಯೋಗ ಆಸಕ್ತರಿಗೆ ಸಿಹಿ ಸುದ್ದಿ; 8,106 ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ ವಿದ್ಯಾಕುಮಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ವಾಡ್, ನೆಹರು ಯುವ ಕೇಂದ್ರ, ಎನ್ಸಿಸಿ, ಬ್ರಹ್ಮಕುಮಾರಿ ಸಮಾಜದ ಪದಾಧಿಕಾರಿಗಳು ಭಾಗಿಯಾಗಿದ್ದರು.
+ There are no comments
Add yours