ಆರೋಗ್ಯ ಇಲಾಖೆಯ 854 ಹುದ್ದೆಗಳಿಗೆ ನೇರ ನೇಮಕಾತಿ

1 min read

 

Tumkur News
ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಲ್ಯಾಣ ಕರ್ನಾಟಕ ಹಾಗೂ ಉಳಿದ ಮೂಲ ವೃಂದದ ಜೂನಿಯರ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿಸ್ಟ್‌, ಜೂನಿಯರ್ ಹೆಲ್ತ್‌ ಅಸಿಸ್ಟಂಟ್ ಹಾಗೂ ಫಾರ್ಮಸಿ ಆಫೀಸರ್ / ಫಾರ್ಮಸಿಸ್ಟ್‌ ಹುದ್ದೆಗಳು ಸೇರಿ ಒಟ್ಟು 854 ಹುದ್ದೆಗಳಿಗೆ ಪ್ರವೇಶ ಕೋರಿದೆ.

ಅಲ್ಪಸಂಖ್ಯಾತರ ವರ್ಗದವರಿಂದ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ನೇರ ನೇಮಕಾತಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ ಬಿಡುಗಡೆ ಆಗಲಿದೆ. ಒಟ್ಟು 854 ಸ್ಥಾನಗಳಿಗೆ ಸರ್ಕಾರ ನೇಮಕಾತಿಗೆ ಸಂಬಂಧಿಸಿದಂತೆ ನಿಯಮಾವಳಿ ಅಂತಿಮಗೊಳಿಸಿ, ಅಧಿಸೂಚನೆ ಪ್ರಕಟಿಸಿದೆ.

ಇಸಿಐಎಲ್ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಶೈಕ್ಷಣಿಕ ಅರ್ಹತೆಗಳು:
ಜೂನಿಯರ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿಸ್ಟ್‌: ಕಲ್ಯಾಣ ಕರ್ನಾಟಕದ 54, ಉಳಿದ ಮೂಲ ವೃಂದ 150 ಹುದ್ದೆಗಳು ನೇಮಕ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ನಂತರ ಕರ್ನಾಟಕ ಔದ್ಯೋಗಿಕ ಶಿಕ್ಷಣ ಮಂಡಳಿಯಿಂದ ಎರಡು ವರ್ಷಗಳ ಡಿಪ್ಲೊಮ ಪೂರೈಸಿರಬೇಕು. ಅಥವಾ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿ ಕರ್ನಾಟಕ ಅರೆ ವೈದ್ಯಕೀಯ ಮಂಡಳಿಯಿಂದ ಸಂಬಂಧಿಸಿದ ವಿಷಯದಲ್ಲಿ 2 ವರ್ಷ ಡಿಪ್ಲೊಮ ಪಡೆದಿರಬೇಕು.

ಫಾರ್ಮಸಿ ಆಫೀಸರ್ / ಫಾರ್ಮಸಿಸ್ಟ್‌: ಉಳಿಕೆ ಮೂಲ ವೃಂದದ 400, ಹೈದರಾಬಾದ್ ಕರ್ನಾಟಕದ 93 ಹುದ್ದೆಗಳಿವೆ. ಈ ಹುದ್ದೆಗೆ ಅರ್ಜಿ ಹಾಕಲು SSLC ನಂತರ ಫಾರ್ಮಸಿ ಡಿಪ್ಲೊಮ ಪಾಸ್‌ ಮಾಡಿರಬೇಕು ಮತ್ತು ಕರ್ನಾಟಕ ಫಾರ್ಮಸಿ ಕೌನ್ಸಿಲ್‌ನಲ್ಲಿ ನೊಂದಾವಣೆ ಮಾಡಿರಬೇಕು. ಈ ಎರಡು ಹುದ್ದೆಗಳಿಗೆ ಆಯ್ಕೆಯಾದವರಿಗೆ ರೂ.27,650 ರಿಂದ 52,650 ವರೆಗೆ ವೇತನ ಶ್ರೇಣಿ ಪಡೆಯಬಹುದು.

ರೈಲ್ವೆ ಇಲಾಖೆಯಲ್ಲಿ 3ಸಾವಿರಕ್ಕೂ‌ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ಮೇಲಿನ ಹುದ್ದೆಗಳಿಗೆ ಶೀಘ್ರದಲ್ಲಿ ಅಧಿಸೂಚನೆ ಹೊರಡಿಸಲಿದ್ದು, ಆಸಕ್ತರು ಅರ್ಜಿ ಸಲ್ಲಿಸಿ, ಪರೀಕ್ಷೆಗಳಿಗೆ ಹಾಗೂ ನೇಮಕಾತಿ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ಪಾಲ್ಗೊಳ್ಳಲು ಅಗತ್ಯ ತಯಾರಿ ಮಾಡಿಕೊಳ್ಳಬಹುದು.

You May Also Like

More From Author

+ There are no comments

Add yours