ವಿದ್ಯಾರ್ಥಿ ಬಸ್ ಪಾಸ್ ಗೆ ಏನು ಮಾಡುವುದು?; ಇಲ್ಲಿದೆ KSRTC ಮಾಹಿತಿ

1 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

ಬೆಂಗಳೂರು; ಮೇ 16ರಿಂದ ರಾಜ್ಯದಲ್ಲಿ 2022-23ನೇ ಸಾಲಿನ ತರಗತಿಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಸಾಲಿನ ವಿದ್ಯಾರ್ಥಿ ಬಸ್ ಪಾಸುಗಳನ್ನೇ ಬಳಸಿ ಪ್ರಯಾಣ ಮಾಡಲು ಕೆ.ಎಸ್.ಆರ್.ಟಿ.ಸಿ ಅವಕಾಶ ಮಾಡಿಕೊಟ್ಟಿದೆ.
ಈ ಕುರಿತು ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರಿಂದ ಆದೇಶ ಹೊರ ಬಿದ್ದಿದ್ದು, ಹಳೇಯ ಪಾಸುಗಳನ್ನೇ ಮಾನ್ಯ ಮಾಡುವುದಾಗಿ ತಿಳಿಸಿದೆ.
ಆದೇಶದಲ್ಲಿ ಏನಿದೆ?; ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಪಾಸು ಪಡೆಯಲು ಕಾಲವಕಾಶ ನೀಡುವ ಸಲುವಾಗಿ 2021-22ನೇ ಸಾಲಿನಲ್ಲಿ ಪಡೆದಿರುವ ವಿದ್ಯಾರ್ಥಿ ಬಸ್ ಪಾಸುಗಳು ಜೂನ್ 30,2022 ರವರೆಗೆ ಮಾನ್ಯತಾ ಅವಧಿ ಇರುವುದರಿಂದ ಇದೇ ಪಾಸುಗಳನ್ನು ಬಳಸಿ ಕರಾರಸಾ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ. ಹೊಸ ಬಸ್ ಪಾಸುಗಳ ವಿತರಣಾ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ನಿಗಮ ತಿಳಿಸಿದೆ.

About The Author

You May Also Like

More From Author

+ There are no comments

Add yours