ಶಾಲಾ ಮಕ್ಕಳೊಂದಿಗೆ ಸಿಎಂ ಸಂವಾದ; ಮಕ್ಕಳು ಏನೇನು ಪ್ರಶ್ನೆ ಕೇಳಿದ್ದಾರೆ ನೋಡಿ

1 min read

 

Tumkurnews
ತುಮಕೂರು; 2022-23ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಇಂದಿಲ್ಲಿ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಅದರ ಸಾರಾಂಶ ಇಲ್ಲಿದೆ.
ಎಂಪ್ರೆಸ್ ಶಾಲೆಯ ನಿಶ್ಮಿತಾ; ಕಳೆದ ಎರಡು ವರ್ಷಗಳಿಂದ ವಿದ್ಯಾಭ್ಯಾಸ ಜೊತೆಗೆ ಆಟವಾಡಲು ಕ್ರೀಡಾ ಸಾಮಗ್ರಿಗಳ ಕೊರತೆ ಇರುವುದರಿಂದ ಕ್ರೀಡಾ ಸಾಮಗ್ರಿಗಳನ್ನು ನೀಡಬೇಕು.
ಸಿ.ಎಂ; ಪ್ರತಿ ಬಾರಿ ಕ್ರೀಡಾ ಚಟುವಟಿಕೆಗಳಿಗೆ 5 ಕೋಟಿ ವ್ಯಯ ಮಾಡಲಾಗುತ್ತಿದ್ದು, ಈ ವರ್ಷ ಕ್ರೀಡಾ ಚಟುವಟಿಕೆಗಳಿಗೆ 10 ಕೋಟಿ ವೆಚ್ಚಮಾಡಿ ಕ್ರೀಡಾ ಸಾಮಗ್ರಿಗಳನ್ನು ಕೊಡಿಸಲು ವಿಶೇಷವಾದ ವ್ಯವಸ್ಥೆ ಮಾಡಲಾಗುವುದು.
ಕೊರಟಗೆರೆ ಸರ್ಕಾರಿ ಪ್ರೌಢ ಶಾಲೆಯ ರಾಕೇಶ್; ಅಕ್ಷರ ದಾಸೋಹದ ಮೂಲಕ ಪೌಷ್ಟಿಕಾಂಶ ಆಹಾರವನ್ನು ಒದಗಿಸಲಾಗುತ್ತಿದೆ, ಮತ್ತಷ್ಟು ಪೌಷ್ಟಿಕಾಂಶಗಳನ್ನು ನೀಡಬೇಕು.
ಸಿಎಂ; ಪೌಷ್ಟಿಕಾಂಶ ಆಹಾರದ ಕೊರತೆ ಇರುವ ಮಕ್ಕಳಿಗೆ ಈಗಾಗಲೇ ಆಹಾರಗಳನ್ನು ನೀಡಲಾಗುತ್ತಿದೆ. ಈ ವರ್ಷದ ಬಜೆಟ್‍ನಲ್ಲಿ ಮತ್ತಷ್ಟು ಸಿರಿಧಾನ್ಯಗಳನ್ನು ಹೆಚ್ಚಿಸಲಾಗಿದೆ
ಬೆಳ್ಳಾವಿ ಸರ್ಕಾರಿ ಪ್ರೌಢಶಾಲೆ ಅಮೂಲ್ಯ; ಕಳೆದ ಎರಡು ವರ್ಷಗಳಿಂದ ಬೈಸಿಕಲ್ ನೀಡುವ ಯೋಜನೆಯನ್ನು ನಿಲ್ಲಿಸಿರುವುದರಿಂದ ಬೈಸಿಕಲ್ ವಿತರಿಸಬೇಕು.
ಸಿಎಂ; ಕೋವಿಡ್ ಕಾರಣದಿಂದ ಎರಡು ವರ್ಷಗಳಿಂದ ಶಾಲೆಗಳಲ್ಲಿ ಬೈಸಿಕಲ್ ವಿತರಿಸಲಾಗಿಲ್ಲ, ಈ ಬಾರಿ ವಿತರಿಸುತ್ತೇವೆ.
ಚಿಕ್ಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಭರತ್; 4 ಶಾಲಾ ಕೊಠಡಿಗಳಿದ್ದು, ಈ ಪೈಕಿ 2 ಕಟ್ಟಡಗಳು ಸೋರುತ್ತಿವೆ. ಹೊಸ ಶಾಲಾ ಕಟ್ಟಡಗಳನ್ನು ನಿರ್ಮಿಸಿಕೊಡಿ.
ಸಿ.ಎಂ; ಈ ಸಮಸ್ಯೆ ಎಲ್ಲ ಶಾಲೆಗಳಲ್ಲಿಯೂ ಇದೆ. ಸಾಧ್ಯವಾದಷ್ಟು ಬೇಗ ಶಾಲಾ ಕಟ್ಟಡಗಳನ್ನು ನಿರ್ಮಾಣ ಮಾಡಲು ಪ್ರಾರಂಭಿಸಿ ಈ ವರ್ಷದ ಅಂತ್ಯದೊಳಗೆ 6500 ಶಾಲಾ ಕಟ್ಟಡಗಳನ್ನು ಪೂರ್ಣಗೊಳಿಸುವುದು ಎಂದರು.
ಇದೇ ವೇಳೆ ಚೈತನ್ಯ ಎಂಬ ಯುವಕ ತನ್ನ ತಂದೆ ತಾಯಿಯರು ಕೋವಿಡ್‍ನಿಂದ ಮೃತ ಪಟ್ಟಿದ್ದು, ಸರ್ಕಾರ ತಿಂಗಳಿಗೆ 3500 ಹಣ ನೀಡುತ್ತಿರುವುದಕ್ಕೆ ಧನ್ಯವಾದಗಳನ್ನು ಹೇಳಿದನು. ಇದಕ್ಕೆ ಪ್ರತಿಕ್ರಿಯೆ ನೀಡಿದ
ಸಿ.ಎಂ, ಕೋವಿಡ್‍ನಿಂದ ಮೃತಪಟ್ಟ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸಕ್ಕೆ ವಿಶೇಷವಾದ ನೆರವನ್ನು ನಮ್ಮ ಸರ್ಕಾರ ನೀಡಲಿದೆ ಎಂದು ತಿಳಿಸಿದರು.
ಕ್ಯಾತ್ಸಂದ್ರ ಸರ್ಕಾರಿ ಪ್ರೌಢಶಾಲೆಯ ಜ್ಯೋತಿ; ಜಿಲ್ಲೆಯ ಮಕ್ಕಳಿಗೆ ಜಿಲ್ಲಾ ದರ್ಶನ ಹಾಗೂ ಕರ್ನಾಟಕ ಪ್ರವಾಸಕ್ಕೆ ಅವಕಾಶ ಮಾಡಿಕೊಡಿ.
ಸಿಎಂ; ಎಸ್‍ಡಿಎಂಸಿ ಆಸಕ್ತಿ ತೆಗೆದುಕೊಂಡಲ್ಲಿ, ಇದಕ್ಕೆ ಅವಕಾಶ ಮಾಡಿಕೊಡಲಾಗುವುದು.
ಸರ್ಕಾರಿ ಪ್ರೌಢಶಾಲೆಯ ಭೂಮಿಕಾ; ನಿಮ್ಮ ಬಾಲ್ಯದ ಶಿಕ್ಷಣ ಅಥವಾ ಇಂದಿನ ಶಿಕ್ಷಣದ ವ್ಯತ್ಯಾಸವೇನು?
ಸಿಎಂ; ಹಿಂದಿನ ವಿದ್ಯಾಭ್ಯಾಸ ಗುರುಕೇಂದ್ರೀಕೃತವಾಗಿತ್ತು. ಸಾಮಾನ್ಯ ಜ್ಞಾನ, ಇತಿಹಾಸ, ಭೌಗೋಳಿಕ ಜ್ಞಾನವನ್ನು ನಾವು ಕತೆಗಳ ಮೂಲಕ ಪಡೆಯುತ್ತಿದ್ದೆವು. ಆದರೆ ಈಗ ಅಂತರ್ಜಾಲ ವ್ಯವಸ್ಥೆ ಇದೆ. ಎರಡೂ ಕಾಲದ ವಿದ್ಯಾಭ್ಯಾಸ ಉತ್ತಮವಾಗಿದೆ. ಅಂದು ಜ್ಞಾನ ಇತ್ತು ಇಂದು ತಂತ್ರಜ್ಞಾನ ಇದೆ ಎಂದರು.
ಬೆಳ್ಳಾವಿ ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಜೀವಿತ; ಶೌಚಾಲಯಗಳಲ್ಲಿ ಶುಚಿತ್ವ ಇಲ್ಲ. ಪರಿಹಾರ ಸೂಚಿಸಿ.
ಸಿಎಂ; ನಿಮ್ಮ ಮುಖ್ಯ ಶಿಕ್ಷಕರ ಬಳಿ ಮಾತನಾಡುತ್ತೇನೆ ಎಂದ ಸಿಎಂ ಬಸವರಾಜ ಬೊಮ್ಮಾಯಿ, ಹೆಣ್ಣು ಮಕ್ಕಳಿಗೆ ಶುಚಿತ್ವ ಪ್ಯಾಡ್, ಶಾಲಾ ಮಕ್ಕಳಿಗೆ ವ್ಯಾಕ್ಸಿನ್, 6ನೇ ತರಗತಿ ಮೇಲ್ಪಟ್ಟ ಹೆಣ್ಣು ಮಕ್ಕಳಿಗೆ ರೆಸ್ಟ್ ರೂಂ, ಶಾಲಾ ಮಕ್ಕಳಿಗೆ ಗುರುತಿನ ಚೀಟಿ, ಇತ್ಯಾದಿ ಸೌಕರ್ಯಗಳನ್ನು ಒದಗಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ಸಂವಾದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ನೀಡಿದರು.

ರಾಜ್ಯದಲ್ಲಿ 2 ವರ್ಷದ ನಂತರ ಶಾಲೆಗಳು ಪ್ರಾರಂಭ; ತುಮಕೂರಿನಲ್ಲಿ ಸಂತಸ ಹಂಚಿಕೊಂಡ ಸಿಎಂ

About The Author

You May Also Like

More From Author

+ There are no comments

Add yours