ತುಮಕೂರಿನಲ್ಲಿ ಕೊರೋನಾಗೆ ಐವರು ಬಲಿ, ಸಾವಿರದ ಸಮೀಪದಲ್ಲಿ ಸೋಂಕಿತರು

1 min read

 

 

 

 

 

ತುಮಕೂರು ನ್ಯೂಸ್.ಇನ್
Tumkurnews.in

ತುಮಕೂರು ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ 67 ಜನರಿಗೆ ಕೋವಿಡ್ 19 ಸೋಂಕು ತಗಲಿರುವುದು ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 931ಕ್ಕೆ ಏರಿದೆ ಎಂದು ಡಿಎಚ್ಒ ಡಾ.ನಾಗೇಂದ್ರಪ್ಪ ತಿಳಿಸಿದರು.
*
ತಾಲೂಕುವಾರು ವಿವರ
ತುಮಕೂರು- 26
ಗುಬ್ಬಿ- 9
ಕುಣಿಗಲ್- 5
ಮಧುಗಿರಿ- 7
ಪಾವಗಡ- 6
ಶಿರಾ- 4
ತಿಪಟೂರು- 2
ಚಿಕ್ಕನಾಯಕನಹಳ್ಳಿ- 2 ಕೊರಟಗೆರೆ- 1
ತುರುವೇಕೆರೆ- 5
ಒಟ್ಟು- 67
*
ಐವರು ಸಾವು:
ಜಿಲ್ಲೆಯಲ್ಲಿ ಗುರುವಾರ ಐವರು ಸೋಂಕಿತರು ಸಾವನ್ನಪ್ಪಿದ್ದಾರೆ.
ತುಮಕೂರು ನಗರದ ವಾಲ್ಮೀಕಿ ನಗರದ 45 ವರ್ಷದ ಗಂಡು, ಬಾರ್ ಲೈನ್ ರಸ್ತಯ 26 ವರ್ಷದ ಮಹಿಳೆ, ಮೆಳೆಕೋಟೆಯ 65 ವರ್ಷದ ಮಹಿಳೆ, ದಾ‌ನನಗರದ ಮೆಳೆಕೋಟೆ‌ಯ 65 ವರ್ಷದ ಮಹಿಳೆ ಈ ನಾಲ್ವರು ಚಿಕಿತ್ಸೆ ಫಲಿಸದೆ ಜು.22ರಂದು ಆಸ್ಪತ್ರೆಯಲ್ಲಿ ಸಾವನ್ಬಪ್ಪಿದ್ದಾರೆ.
ತುಮಕೂರಿನ ಎಸ್.ಐ.ಟಿ ಬಡಾವಣೆಯ 64 ವರ್ಷದ ಪುರುಷ ಜು.11ರಂದು ಗಂಟಲುದ್ರವದ ಮಾದರಿಯನ್ನು ಬೆಂಗಳೂರಿನ ಲ್ಯಾಬ್ ನಲ್ಲಿ ಪರೀಕ್ಷೆಗೆ ನೀಡಿದ್ದರು. ವರದಿ ಪಾಸಿಟಿವ್ ಬಂದಿದ್ದು, ಸದರಿ ವ್ಯಕ್ತಿ ಸಾವನ್ಬಪ್ಪಿದ್ದಾರೆ.
*
ಇಂದು 3 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 408 ಮಂದಿ ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗಿನ 488 ಮಂದಿ ಗುಣಮುಖರಾಗಿದ್ದು, 35 ಮರಣ ಸಂಭವಿಸಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಸಮೀಪದಲ್ಲಿ ಇದೆ.

You May Also Like

More From Author

+ There are no comments

Add yours