ಜಿಲ್ಲೆಯಲ್ಲಿ 3 ಸಾವು, 46 ಹೊಸ ಪಾಸಿಟಿವ್ ಪ್ರಕರಣ

1 min read

 

 

 

 

 

ತುಮಕೂರು ನ್ಯೂಸ್. ಇನ್
Tumkurnews.in

ಜಿಲ್ಲೆಯಲ್ಲಿ ಭಾನುವಾರ ಒಂದೇ ದಿನ 46 ಜನರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 699ಕ್ಕೆ ಏರಿದೆ.
*
ತಾಲೂಕುವಾರು ವಿವರ:
ಚಿಕ್ಕನಾಯಕನಹಳ್ಳಿ 4
ಗುಬ್ಬಿ 1
ಕೊರಟಗೆರೆ 2
ಕುಣಿಗಲ್ 3
ಮಧುಗಿರಿ 3
ಪಾವಗಡ 4
ಶಿರಾ 3
ತುಮಕೂರು 25
ತುರುವೇಕೆರೆ 1
ತಿಪಟೂರು 0
*
ಇಂದು ತುಮಕೂರು ತಾಲ್ಲೂಕಿನ 61, ಗುಬ್ಬಿ 3, ಕೊರಟಗೆರೆ 3, ತುರುವೇಕೆರೆ 4 ಸೇರಿ 71 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
*
3 ಸಾವು: ಜಿಲ್ಲೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಸೋಂಕಿತರ ಸಂಪರ್ಕದಲ್ಲಿದ್ದ ಕಾರಣ ಹೋಂ ಕ್ವಾರಂಟೈನ್ ‌ನಲ್ಲಿದ್ದ
ಪಾವಗಡ ತಾಲ್ಲೂಕಿನ ಹೊಸಹಳ್ಳಿ ತಂಡ ಗ್ರಾಮದ 60 ವರ್ಷದ ಪುರುಷ ಜು.16 ರಂದು ಮೃತಪಟ್ಟಿದ್ದಾರೆ.
ತುಮಕೂರು ತಾಲ್ಲೂಕು ಭೀಮಸಂದ್ರದ 62 ವರ್ಷದ ಪುರುಷ ಜು.17 ರಂದು ಹಾಗೂ
ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಗ್ರಾಮದ 55 ವರ್ಷದ ಪುರುಷ ಜು.18 ರಂದು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಭಾನುವಾರ ಡಿಎಚ್ಒ ಡಾ.ನಾಗೇಂದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 23 ಸಾವು ಸಂಭವಿಸಿದೆ. ಸದ್ಯ 318 ಸಕ್ರಿಯ ಪ್ರಕರಣಗಳಿವೆ.

You May Also Like

More From Author

+ There are no comments

Add yours