ಜಿಲ್ಲೆಯಲ್ಲಿ ಹೊಸದಾಗಿ 15 ಕೊರೋನಾ ಪಾಸಿಟಿವ್, ಒಂದು ಸಾವು

1 min read

 

 

 

 

 

ತುಮಕೂರು ನ್ಯೂಸ್.ಇನ್
Tumkurnews.in(ಜು.16)

ಇಬ್ಬರು ಪೊಲೀಸರು ಸೇರಿದಂತೆ
ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ 15 ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 612ಕ್ಕೆ ಏರಿದೆ.
*
ತಾಲೂಕುವಾರು‌ ವಿವರ:
ತುಮಕೂರು- 12
ಶಿರಾ- 1
ತಿಪಟೂರು- ‌1
ಗುಬ್ಬಿ- 1
ಉಳಿದ ತಾಲ್ಲೂಕುಗಳಲ್ಲಿ ಹೊಸ ಪ್ರಕರಣವಿಲ್ಲ.
*
ವೃದ್ಧ ಸಾವು: ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ ಮತ್ತೊಂದು ಬಲಿಯಾಗಿದೆ. ಗುಬ್ಬಿ ತಾಲೂಕು ಯಲಚಿಹಳ್ಳಿ ಗ್ರಾಮದ 72 ವರ್ಷದ ವೃದ್ಧ ಜು.15 ರಂದು ಸಾವನ್ನಪ್ಪಿದ್ದಾರೆ.
*
ಜಿಲ್ಲೆಯಲ್ಲಿ ಗುರುವಾರ 5 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ 222 ಮಂದಿ ಗುಣವಾಗಿದ್ದು, ಒಟ್ಟು 372 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 18 ಮಂದಿ ಸಾವನ್ನಪ್ಪಿದ್ದಾರೆ.

You May Also Like

More From Author

+ There are no comments

Add yours