ತಂದೆ ಕಾರು ಚಾಲಕ, ತಾಯಿ ಮನೆಗೆಲಸದಾಕೆ, ಮಗಳು ಪಿಯುಸಿ ಟಾಪರ್

1 min read

 

 

 

 

 

ತುಮಕೂರು ನ್ಯೂಸ್.ಇನ್ (ಜು.15) tumkurnews.in

ಸಾಧನೆಗೆ ಬಡತನ ಅಡ್ಡಿಯಾಗಬಾರದು, ಮೆಟ್ಟಿಲಾಗಬೇಕು ಎಂಬುದನ್ನು ತುಮಕೂರು ನಗರದ ಪ್ರೇರಣಾ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಅನುಶ್ರೀ ಸಾಧಿಸಿ ತೋರಿಸಿದ್ದಾರೆ.
ಇವರು ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಶೇ.94 ರಷ್ಟು ಅಂಕಗಳನ್ನು ಗಳಿಸಿದ್ದಾರೆ.
ಇವರ ತಂದೆ ಸಾಮಾನ್ಯ ಟ್ಯಾಕ್ಸಿ ಚಾಲಕ ಆಗಿ ಕೆಲಸ ಮಾಡುತ್ತಾರೆ. ತಾಯಿ ಮನೆಗೆಲಸ ಮಾಡುತ್ತಾರೆ. ಅನುಶ್ರೀ ಯ ಪ್ರತಿಭೆಯನ್ನು ಗಮನಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಬಸವಣ್ಣನವರು ತಮ್ಮ ಕಾಲೇಜಿಗೆ ದಾಖಲಾತಿ ಮಾಡಿಕೊಂಡು ಎರಡು ವರ್ಷಗಳ ಕಾಲದ ಪಿ.ಯು.ಸಿ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟರು ಎಂದು ಅನುಶ್ರೀ ತಿಳಿಸಿದರು.
ತರಗತಿಯಲ್ಲಿ ಶ್ರದ್ಧೆಯಿಂದ ಕೇಳುವುದರೊಂದಿಗೆ ಶಿಕ್ಷಕರು ಮಾಡಿದ ಪಾಠಗಳನ್ನು ಅಂದೇ ಓದಿ ಮುಗಿಸಿದರೆ ಸಾಕು ನಾವು ಹೆಚ್ಚು ಅಂಕಗಳನ್ನು ತೆಗೆಯಬಹುದು ಎಂದು ಹೇಳುತ್ತಾರೆ ಅನುಶ್ರೀ.
ಅನುಶ್ರೀ, ಮುಂದೆ ಡಾಕ್ಟರ್ ಆಗಬೇಕೆಂಬ ಆಕಾಂಕ್ಷೆ ಹೊಂದಿದ್ದು, ಆ ನಿಟ್ಟಿನಲ್ಲಿ ಅಭ್ಯಾಸ ಮಾಡುತ್ತಿರುವುದಾಗಿ ತಿಳಿಸಿದರು.
ಈ ಬಗ್ಗೆ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ಎಸ್ ಬಸವಣ್ಣನವರು ತಮ್ಮ ಕಾಲೇಜಿನ ಪ್ರಥಮ ಬ್ಯಾಚ್‍ನಲ್ಲಿ ಶೇ.90 ರಷ್ಟು ಫಲಿತಾಂಶ ಬಂದಿದ್ದು, ಮತ್ತೊಬ್ಬ ವಿದ್ಯಾರ್ಥಿಯಾದ ಧೀಮಂತ್ ಯಾದವ್ ಪಿ.ಸಿ.ಎಂ.ಬಿ ವಿಭಾಗದಲ್ಲಿ ಶೇ. 94 ರಷ್ಟು ಅಂಕ ಪಡೆದಿದ್ದಾರೆ ಎಂದು ತಿಳಿಸಿದರು.

You May Also Like

More From Author

+ There are no comments

Add yours