1,918
ತುಮಕೂರು(ಜು.11) tumkurnews.in
ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕು ಹೀಚನೂರು ಕೆರೆಕೋಡಿಯಿಂದ ಕರಡಾಳು ಸಂತೆ ಮೈದಾನಕ್ಕೆ ಹೋಗುವ ಹೇಮಾವತಿ ನಾಲೆ ಪಕ್ಕದ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಡಾಂಬಾರು ಕಾಣದ ಕಚ್ಚಾ ರಸ್ತೆ ಇದಾಗಿದ್ದು, ಮಳೆ ಬಂದ ಬಳಿಕ ಸಂಚಾರವೇ ಕಷ್ಟಕರವಾಗಿದೆ.
ನಾಲೆಗೆ ತಡೆಗೋಡೆ ಇಲ್ಲದ ಕಾರಣ ವಾಹನ ಸವಾರರು ಪ್ರಾಣ ಭೀತಿಯಿಂದ ಸಂಚಾರ ಮಾಡುತ್ತಿದ್ದಾರೆ. ಕೆಸರು ತುಂಬಿದ ರಸ್ತೆಯಲ್ಲಿ ವಾಹನಗಳು ಜಾರಿ ನಾಲೆಗೆ ಉರುಳಿ ಬಿದ್ದರೆ ಗತಿ ಏನು ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ.
ಈ ರಸ್ತೆಯಲ್ಲಿ ಕೋಡಿಹಳ್ಳಿ ಕಾವಲಿನ ಕೆಎಂಎಫ್ ಡೈರಿ ಇದ್ದು, ಹಾಲಿನ ವಾಹನ ಹಾಗೂ ಕೋಡಿಹಳ್ಳಿ ಕಾವಲಿನ ನೂರಾರು ಜನರು ಓಡಾಡಲು ಕಷ್ಟವಾಗಿದೆ. ಈ ವಿಷಯದ ಬಗ್ಗೆ ಸ್ಥಳೀಯರು ಹಲವು ಬಾರಿ ಹೇಮಾವತಿ ಇಂಜಿನಿಯರ್ ಗಮನಕ್ಕೆ ತಂದಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ಜನರು ಹೇಮಾವತಿ ನಾಲೆ ಅಧಿಕಾರಿಗಳು, ಶಾಸಕರ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಶಾಸಕ, ಸಂಸದರು, ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ.
**********
ಓದುಗ ವರದಿಗಾರ:
ಎಚ್.ಎನ್ ಭರತ್, ಕೋಡಿಹಳ್ಳಿ ಕಾವಲು.