ನಾಲ್ವರು ಅಂತರರಾಜ್ಯ ಅಕ್ರಮ ಮದ್ಯ ಸಾಗಣೆದಾರರ ಬಂಧನ

1 min read

 

 

 

 

 

ತುಮಕೂರು(ಜು.11) tumkurnews.in

ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ನಾಲ್ಕು ಮಂದಿ ಅಂತರರಾಜ್ಯ ಅಕ್ರಮ ಮದ್ಯ ಸಾಗಣೆದಾರರನ್ನು ಪೊಲೀಸರು ಬಂಧಿಸಿದ್ದಾರೆ.
ಜು.10 ರಂದು ಪಾವಗಡ ತಾಲ್ಲೂಕು ತಿರುಮಣಿ ಪೊಲೀಸ್ ಠಾಣೆ ವ್ಯಾಪ್ತಿಯ ಹುಸೇನ್ ಪುರ ಗ್ರಾಮದ ಬಳಿ ನಾಗೇನಹಳ್ಳಿ ಕ್ರಾಸ್ ತಿರುವಿನಲ್ಲಿ ಶುಕ್ರವಾರ ಮಧ್ಯಾಹ್ನ 1.20 ರ ಸಮಯದಲ್ಲಿ ಬೈಕ್‌ನಲ್ಲಿ ಮದ್ಯ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪಾವಗಡ ತಾಲೂಕು ನಾಗೇನಹಳ್ಳಿ ತಾಂಡದ ರಾಮಾಂಜಿನಾಯ್ಕ, ಲಕ್ಷ್ಮಾನಾಯ್ಕ, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಧರ್ಮವಾರಂನ ಮಾರುತಿ, ವಿಜಯ ಕುಮಾರ್ ಬಂಧಿತರಾಗಿದ್ದು, ಇನ್ನೋರ್ವ ಆರೋಪಿ ಅಲಕಪ್ಪ ಎಂಬಾತ ತಪ್ಪಿಸಿಕೊಂಡಿದ್ದಾನೆ.
ಆರೋಪಿಗಳಿಂದ ಐದು ಬೈಕ್,
81 ಸಾವಿರ ರೂ. ಮೌಲ್ಯದ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.

You May Also Like

More From Author

+ There are no comments

Add yours