ಯಡಿಯೂರಪ್ಪ ಬಂಧನ ಸಾಧ್ಯತೆ: ಗೃಹ ಸಚಿವ ಪರಮೇಶ್ವರ್ ಹೇಳಿಕೆ
Tumkurnews
ತುಮಕೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್
ಯಡಿಯೂರಪ್ಪ ಅವರನ್ನು ಬಂಧನ ಮಾಡುವ ಸಾಧ್ಯತೆಯಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರು.
ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಯಡಿಯೂರಪ್ಪರನ್ನು ಬಂಧನ ಮಾಡುವ ಸಾಧ್ಯತೆಯಿದೆ. ಸಿಐಡಿಯವರು ಅವರಿಗೆ ನೋಟೀಸ್ ಕೊಟ್ಟಿದ್ದಾರೆ. ಅವರು ವಿಚಾರಣೆಗೆ ಹಾಜರಾಗಬೇಕಿತ್ತು, ಅಷ್ಟೇ ನನಗೆ ಗೊತ್ತಿರುವುದು ಎಂದು ತಿಳಿಸಿದರು.
ನಟ ದರ್ಶನ್’ಗೆ ಪೊಲೀಸ್ ಕಸ್ಟಡಿ ವಿಧಿಸಿ ಕೋರ್ಟ್ ಆದೇಶ: ಪೊಲೀಸರು ಎಳೆದೊಯ್ಯುತ್ತಿರುವ ವಿಡಿಯೋ
ಯಡಿಯೂರಪ್ಪಗೆ ನೊಟೀಸ್ ಕೊಟ್ಟಿದ್ದಾರೆ. ಪ್ರೊಸಿಜರ್’ನಲ್ಲಿ ಅವರಿಗೆ ಏನು ಮಾಡಬೇಕೊ ಅದನ್ನು ಮಾಡುತ್ತಾರೆ. 15ನೇ ತಾರೀಖಿನ ಒಳಗೆ ಚಾರ್ಜ್ ಶೀಟ್ ಫೈಲ್ ಮಾಡಬೇಕು ಅಂತಾ ಇದೆ. ಅಷ್ಟರೊಳಗೆ ಚಾರ್ಜ್ ಶೀಟ್ ಫೈಲ್ ಮಾಡ್ತಾರೆ ಎಂದರು.
ಈಗ ಪ್ರೊಸಿಜರ್ ಫಾಲೋ ಮಾಡಬೇಕು, ಸ್ಟೇಟ್ಮೆಂಟ್ ತಗೊಬೇಕು. ಅವರನ್ನು ಪ್ರೋಡ್ಯೂಸ್ ಮಾಡಬೇಕು.
ಎಲ್ಲಾ ಪ್ರೋಸಿಜರನ್ನು ಇಲಾಖೆಯವರು ಮಾಡುತ್ತಾರೆ.
ಅವರು ಮಾಡೋದನ್ನು ಅವರು ಮಾಡ್ತಾರೆ, ಪೊಲೀಸನವ್ರು ಮಾಡೋದನ್ನು ಪೊಲೀಸ್ ಮಾಡ್ತಾರೆ ಎಂದು ಮಾಹಿತಿ ನೀಡಿದರು.
ಯಡಿಯೂರಪ್ಪ ಸ್ವಾಭಾವಿಕವಾಗಿ ಜಾಮೀನು ಅರ್ಜಿ ಹಾಕಿಕೊಂಡಿದ್ದಾರೆ. ಅಗತ್ಯಯಿದ್ದರೆ ಅರೆಸ್ಟ್ ಮಾಡ್ತಾರೆ. ಅಗತ್ಯ ಇದೆ ಅಂತಾ ನಾನು ಹೇಳೋಕ್ಕೆ ಹಾಗಲ್ಲ, ಅಗತ್ಯ ಇದೆ ಅಂತಾ ಹೇಳೋದು ಎಸ್.ಐ.ಟಿಯವರು. ಅವರಿಗೆ ಅಗತ್ಯ ಇದೆ ಅಂತ ಅನ್ನಿಸಿದ್ರೆ ಅರೆಸ್ಟ್ ಮಾಡ್ತಾರೆ ಎಂದು ತಿಳಿಸಿದರು.




+ There are no comments
Add yours