ತುಮಕೂರು: 14 ಶಾಲೆಗಳನ್ನು ಅನಧಿಕೃತವೆಂದು ಘೋಷಣೆ

1 min read

ತುಮಕೂರು: 14 ಶಾಲೆಗಳನ್ನು ಅನಧಿಕೃತವೆಂದು ಘೋಷಣೆ

Tumkurnews
ತುಮಕೂರು: ತಾಲ್ಲೂಕು ವ್ಯಾಪ್ತಿಯಲ್ಲಿ 2024-25ನೇ ಸಾಲಿಗಾಗಿ ಮಾನ್ಯತೆ ನವೀಕರಣ ಪಡೆಯದ, ಶಾಲೆ ಸ್ಥಳಾಂತರಕ್ಕೆ ಅನುಮತಿ ಪಡೆಯದ ಹಾಗೂ ಒಂದೇ ಕಾಂಪೌಂಡ್‍ನಲ್ಲಿ ಕೇಂದ್ರ ಮತ್ತು ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆಯದ 14 ಖಾಸಗಿ ಶಾಲೆಗಳನ್ನು ಅನಧಿಕೃತವೆಂದು ಘೋಷಣೆ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ: ಸೂರ್ಯಕಲಾ ತಿಳಿಸಿದ್ದಾರೆ.
ನಗರದ ರಿಂಗ್ ರಸ್ತೆಯಲ್ಲಿರುವ ಅಕ್ಸ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಚಿಕ್ಕಪೇಟೆ ಭಾರತಿ ಹಿರಿಯ ಪ್ರಾಥಮಿಕ ಶಾಲೆ, ಎಸ್.ಐ.ಟಿ. ಬಡಾವಣೆ ವಾಸವಿ ವಿದ್ಯಾಪೀಠ(ಪ್ರಾಥಮಿಕ ಶಾಲೆ) ಹಾಗೂ ಚಿಕ್ಕಪೇಟೆ ವಾಸವಿ ವಿದ್ಯಾಪೀಠ, ಸದಾಶಿವನಗರದ ಫೆÇ್ಲೀರಾ ಹಿರಿಯ ಪ್ರಾಥಮಿಕ ಶಾಲೆ, ವಿನೋಬನಗರದಲ್ಲಿರುವ ಎಂ.ಇ.ಎಸ್. ಕಿರಿಯ ಪ್ರಾಥಮಿಕ ಶಾಲೆ, ಬನಶಂಕರಿಯಲ್ಲಿರುವ ಎಸ್.ಆರ್.ವಿದ್ಯಾಕೇಂದ್ರ, ಮಾಕನಹಳ್ಳಿ ಉಮಾಮಹೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಕೆಸರುಮಡು ಹೋಲಿಸೆಂಟ್ ಹಿರಿಯ ಪ್ರಾಥಮಿಕ ಶಾಲೆ, ನಾಗವಲ್ಲಿಯಲ್ಲಿರುವ ಡಾ.ರಾಧಾಕೃಷ್ಣ ಪಬ್ಲಿಕ್ ಶಾಲೆ, ವಿನೋಬನಗರದ ನ್ಯಾಷನಲ್ ಆಂಗ್ಲ ಪ್ರಾಥಮಿಕ ಶಾಲೆ, ರಿಂಗ್ ರಸ್ತೆಯಲ್ಲಿರುವ ರೀಡ್ ಪಬ್ಲಿಕ್ ಉರ್ದು ಕಿರಿಯ ಪ್ರಾಥಮಿಕ ಶಾಲೆ, ಹೆಚ್.ಎಂ.ಟಿ. ಮುಖ್ಯ ದ್ವಾರದ ಎದುರಿನ ಟಿ.ವಿ.ಎಸ್.ಶಾಲೆ(ಇಲಾಖೆ ಅನುಮತಿ ಪಡೆಯದೆ ಪಂಡಿತನಹಳ್ಳಿಗೆ ಸ್ಥಳಾಂತರಗೊಂಡಿರುವ ಶಾಲೆ) ಹಾಗೂ ಚನ್ನೇನಹಳ್ಳಿಯಲ್ಲಿರುವ ಕಿಡ್ಸ್ ಇಂಟರ್ ನ್ಯಾಷನಲ್ ಪ್ರೌಢಶಾಲೆ(ಇಲಾಖೆ ಅನುಮತಿ ಪಡೆಯದೆ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆ) ಸೇರಿದಂತೆ 14 ಶಾಲೆಗಳನ್ನು ಅನಧಿಕೃತವೆಂದು ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours