ತಬಸುಮ್ ಜಹೇರಾರನ್ನು ಜೈಲಿಗೆ ಕಳುಹಿಸಿದ್ದು ಯಾರು ಗೊತ್ತೇ? ಇವರೇ ನೋಡಿ. ವಿಡಿಯೋ
Tumkurnews
ತುಮಕೂರು: ಕರ್ನಾಟಕ ಲೋಕಾಯುಕ್ತದ ವಿಶೇಷ ಸರ್ಕಾರಿ ಅಭಿಯೋಜಕ ಆರ್.ಪಿ ಪ್ರಕಾಶ್ ಹೆಸರು ಕೇಳಿದರೆ ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಉಂಟಾಗುತ್ತದೆ. ತುಮಕೂರಿನಲ್ಲಿ ಉಪ ವಿಭಾಗಾಧಿಕಾರಿಯಾಗಿದ್ದ ತಬಸುಮ್ ಜಹೇರಾಗೆ ಜೈಲು ಶಿಕ್ಷೆ: ಯಾಕೆ? ಏನಾಯ್ತು?
ಹೌದು ತುಮಕೂರಿನಲ್ಲಿ ಉಪ ವಿಭಾಗಾಧಿಕಾರಿಯಾಗಿದ್ದ ಕೆಎಎಸ್ ಅಧಿಕಾರಿ ತಬಸುಮ್ ಜಹೇರಾ ಅವರು ಲಂಚ ಸ್ವೀಕಾರ ಪ್ರಕರಣದಲ್ಲಿ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾದ ಬೆನ್ನಲ್ಲೇ ಆರ್.ಪಿ ಪ್ರಕಾಶ್ ಅವರ ಹೆಸರು ಪುನಃ ಮುನ್ನೆಲೆಗೆ ಬಂದಿದೆ. ತಬಸುಮ್ ಜಹೇರಾ KAS ಜೈಲಿಗೆ ಹೋಗುತ್ತಿರುವ ದೃಶ್ಯ: ಎಕ್ಸ್’ಕ್ಲೂಸಿವ್ ವಿಡಿಯೋ
ಹೌದು, ಕರ್ನಾಟಕ ಲೋಕಾಯುಕ್ತದ ವಿಶೇಷ ಸರ್ಕಾರಿ ಅಭಿಯೋಜಕ ಆರ್.ಪಿ ಪ್ರಕಾಶ್ ಅವರು ಅನೇಕ ಭ್ರಷ್ಟ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಿದ್ದಾರೆ. ಈ ಪೈಕಿ ತಬಸುಮ್ ಜಹೇರಾ ಕೂಡ ಒಬ್ಬರು.
ತಬಸುಮ್ ಜಹೇರಾ ಹಾಗೂ ಮತ್ತೋರ್ವ ಆರೋಪಿ ಶಬ್ಬೀರ್ ವಿರುದ್ಧ ಅಂದಿನ ಎಸಿಬಿ ಪೊಲೀಸರು ದಾಖಲಿಸಿದ್ದ ಲಂಚ ಸ್ವೀಕಾರ ಪ್ರಕರಣವನ್ನು ಆರ್.ಪಿ ಪ್ರಕಾಶ್ ಅವರು ಸೂಕ್ತ ರೀತಿಯಲ್ಲಿ ನಿರ್ವಹಿಸಿದ್ದಾರೆ. ಒಂದೇ ಜಿಲ್ಲೆ, ಒಂದೇ ಊರಿನಲ್ಲಿ ಐಎಎಸ್, ಐಪಿಎಸ್ ಜೋಡಿ! ಮಾಡಿದೆ ಮೋಡಿ ನ್ಯಾಯಾಲಯದಲ್ಲಿ ಆರೋಪಿಗಳ ವಿರುದ್ಧ ಸಮರ್ಥವಾಗಿ ವಾದ ಮಂಡಿಸಿ, ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ್ದಾರೆ. ಒಟ್ಟಾರೆಯಾಗಿ ತಬಸುಮ್ ಜಹೇರಾ ಲಂಚ ಸ್ವೀಕಾರ ಪ್ರಕರಣದ ಕುರಿತು ಆರ್.ಪಿ ಪ್ರಕಾಶ್ ಮಾತನಾಡಿದ್ದು, ಆ ವಿಡಿಯೋ ಇಲ್ಲಿದೆ. ನೋಡಿ.
                                            
                                            
                                            
                                            
                                            
                                            
                                            
                                            
                                            
                                    
                                    
                                    
                                    


                                    
                                    
                                    
+ There are no comments
Add yours