ಅಪರಿಚಿತ ಹೆಂಗಸಿನ ಶವ ಪತ್ತೆ

1 min read

 

Tumkur News

ಗುಬ್ಬಿ: ೩೦ ರಿಂದ ೩೮ ವರ್ಷದ ಅಪರಿಚಿತ ಹೆಂಗಸಿನ ಶವ
ಪತ್ತೆಯಾಗಿದೆ ಎಂದು ಗುರುಶಾಂತ ಬಿನ್ ಲೇಟ್ ರಂಗಯ್ಯ ಠಾಣೆಗೆ ದೂರು ನೀಡಿದ್ದಾರೆ.

ಅನುಮಾನಸ್ಪದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯ ಕಡಬ ಹೋಬಳಿ ಬೋಚಿಹಳ್ಳಿ ಗ್ರಾಮದ ಹೊರವಲಯದ ಹೊನ್ನೆಬಾರೆ ಗಡಿ ರಸ್ತೆ ಬದಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಮೃತಳು ೧೫೫ ಸೆಂ.ಮೀ. ಎತ್ತರ, ಗೋದಿ ಮೈಬಣ್ಣ, ಸಾಧಾರಣ ಶರೀರ, ಮೃತಳ ಎಡಕಾಲಿನ ಮಂಡಿ ಕೆಳಭಾಗ ಶಸ್ತçಚಿಕಿತ್ಸೆ ಮಾಡಿರುವ ಹಳೆಯ ಗುರುತಿದ್ದು, ಶವದ ಮೈಮೇಲೆ ನೀಲಿ ಬಣ್ಣದ ಡಿಸೈನ್ ಟಾಪ್, ಕೆಂಪು ಬಣ್ಣದ ವೇಲ್, ಬೂದು ಬಣ್ಣದ ಚಿತ್ರಗಳಿರುವ ಪ್ಯಾಂಟ್
ಇರುತ್ತದೆ. ವಾರಸುದಾರರಿದ್ದಲ್ಲಿ ಹೆಚ್ಚಿನ ಮಾಹಿತಿಗಾಗಿ ೦೮೧೩೧-೨೨೨೨೨೯/೨೨೨೨೧೦/೦೮೧೩೫-೨೭೫೧೮೪ ಅಥವಾ ೯೪೮೦೮೦೨೯೫೯/೩೫/೨೧/೦೦ಯನ್ನು ಸಂಪರ್ಕಿಸಬೇಕೆಂದು ಸರ್ಕಲ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.

About The Author

You May Also Like

More From Author

+ There are no comments

Add yours