Tumkur News
ತುಮಕೂರು: ಸದ್ದಿಲ್ಲದೆ ಬಂದ ಚಿರತೆ ಕುರಿ ರೊಪ್ಪದಲ್ಲಿ ಹೊಕ್ಕು ನಾಲವತ್ತು ಕುರಿಗಳ ಪೈಕಿ ಹತ್ತು ಕುರಿಗಳನ್ನು ಕೊಂದ ಘಟನೆ ತಾಲೂಕಿನ ಉರ್ಡಿಗೆರೆ ಹೋಬಳಿಯ ಗಿಡಗನಹಳ್ಳಿಯಲ್ಲಿ ನಡೆದಿದೆ.
ಅಕ್ಕ – ತಂಗಿಯ ಜಗಳ; ಆತ್ಮಹತ್ಯೆಯಲ್ಲಿ ಅಂತ್ಯ
ಬೆಳಗಿನ ಜಾವ 5:20ರ ಸುಮಾರಿಗೆ ಚಿರತೆ ದಾಳಿ ಮಾಡಿದ್ದು, ಧನಂಜಯ ಎಂಬುವವರಿಗೆ ಸೇರಿದ ಕುರಿಗಳ ದಾರುಣ ಸಾವು ಆಗಿವೆ. ಇದರಿಂದ ಸುಮಾರು ಒಂದು ಲಕ್ಷ ರೂಪಾಯಿ ನಷ್ಟ ಅನುಭವಿಸುವಂತಾಗಿದೆ. 3 ದಿನಗಳ ಹಿಂದಷ್ಟೆ ಗ್ರಾಮದ ಸುತ್ತಮುತ್ತ ಚಿರತೆ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆಗೆ ಮಾಹಿತಿ ಕೊಟ್ಟರು ಯಾವುದೇ ಕ್ರಮಕೈಗೊಂಡಿರಲಿಲ್ಲ. ದೇವರಾಯನದುರ್ಗದ ಕಾಡಿನ ಕಡೆಯಿಂದ ಊರಿಗೆ ನುಗ್ಗಿದೆ ಎನ್ನಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು, ರಾಜಕೀಯ ಮುಖಂಡರ ಭೇಟಿನೀಡಿ ಪರಿಶೀಲನೆ ನಡೆಸಿದರು.
+ There are no comments
Add yours