ಯುಟರ್ನ್ ಕುಮಾರ ಕಾಣೆಯಾಗಿದ್ದಾರೆ!

1 min read

 

Tumkur News
ತುಮಕೂರು: ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಅಡ್ಡಮತದಾನ ಮಾಡಿದ್ದಾರೆ ಎಂಬ ಹೇಳಿಕೆ ನೀಡಿದ್ದ ಕುಮಾರಸ್ವಾಮಿ ವಿರುದ್ಧ ಎಸ್.ಆರ್. ಶ್ರೀನಿವಾಸ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗಂಡ್ಸಾದ್ರೆ ನನ್ನ ವಿರುದ್ಧ ಸ್ಪರ್ಧೆ ಮಾಡಲಿ; ಎಚ್ಡಿಕೆಗೆ ಸವಾಲೆಸೆದ ಎಸ್.ಆರ್. ಶ್ರೀನಿವಾಸ್

ಇತ್ತೀಚೆಗೆ ಜೆಡಿಎಸ್ ಕಾರ್ಯಕರ್ತರು ಎಸ್.ಆರ್. ಶ್ರೀನಿವಾಸ್ ತಿಥಿ ಕಾರ್ಡ್ ಮಾಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ ಪ್ರತಿಯಾಗಿ  ಎಸ್.ಆರ್. ಶ್ರೀನಿವಾಸ್ ಅಭಿಮಾನಿಗಳು ಕುಮಾರಸ್ವಾಮಿ ತಿಥಿಕಾರ್ಡ್ ಮಾಡಿಸಿ ಫೇಸ್ ಬುಕ್ ನಲ್ಲಿ ಹರಿಬಿಟ್ಟರು.

ಶಾಸಕರ ತಿಥಿ ಕಾರ್ಡ್ ಗೆ ಪ್ರತಿಯಾಗಿ ಎಚ್ಡಿಕೆ ಕೈಲಾಸ ಸಮಾರಾಧನೆ ಕಾರ್ಡ್!

ಇಂದು ಎಸ್.ಆರ್. ಶ್ರೀನಿವಾಸ್ ಅಭಿಮಾನಿಗಳು ಕುಮಾರಸ್ವಾಮಿ ಕಾಣೆಯಾಗಿದ್ದಾರೆ ಎಂಬ ಕಾರ್ಡ್ ತಯಾರಿಸಿ ಎಸ್.ಆರ್. ಶ್ರೀನಿವಾಸ್ ಗುಬ್ಬಿ ಎಂಎಲ್‌ಎ ಫ್ಯಾನ್ಸ್ ಫೇಸ್ ಬುಕ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ.

ಅವನೇನು‌ ಕತ್ತೆ ಕಾಯುತಿದ್ನಾ?; ಎಚ್ಡಿಕೆಗೆ ಎಸ್.ಆರ್. ಶ್ರೀನಿವಾಸ್ ತರಾಟೆ

ಎಸ್.ಆರ್. ಶ್ರೀನಿವಾಸ್ ಬೆಂಬಲಿಗರು ಯುಟರ್ನ್ ಕುಮಾರ ಕಾಣೆಯಾಗಿದ್ದಾರೆ ಎಂದು ಸಾಲು ಬರೆದು ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್ ಅಗಿದೆ.

ಗುಬ್ಬಿ ಶಾಸಕ ಶ್ರೀನಿವಾಸ್ ಖಾಲಿ ಮತಪತ್ರವನ್ನು ಮತಪೆಟ್ಟಿಗೆ ಹಾಕಿದ್ದಾರೆ; ಎಚ್ಡಿಕೆ ಆರೋಪ

ಅಷ್ಟೇ ಅಲ್ಲದೇ, ವಾಟ್ಸಾಪ್ ಗ್ರೂಪ್ ಗಳಾದ ಜೆಡಿಎಸ್ ಗ್ರೂಪ್ ಹಾಗೂ ವಾಸು ಅಭಿಮಾನಿಗಳ ಬಳಗಗಳಲ್ಲಿ ಹರಿಬಿಟ್ಟಿದ್ದು, ಎಚ್.ಡಿ.ಕೆ. ವಿರುದ್ಧ ಆಕ್ರೋಶ ಹೊರಹಾಕುತ್ತಿದರು.

You May Also Like

More From Author

+ There are no comments

Add yours