ಪಠ್ಯ ಪುಸ್ತಕ ವಿಚಾರದಲ್ಲಿ ಅಸಹಿಷ್ಣುತೆ ಮೇರೆ ಮೀರುತ್ತಿದೆ; ಆರಗ ಜ್ಞಾನೇಂದ್ರ

1 min read

 

Tumkurnews
ತುಮಕೂರು; ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಅಸಹಿಷ್ಣುತೆ ಮೇರೆ ಮೀರಿ ಪ್ರಕಟವಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಹಿತ್ ಚಕ್ರತೀರ್ಥ ಅವರನ್ನು ಗಡಿಪಾರು ಮಾಡಬೇಕೆಂಬ ಸಾಹಿತಿಗಳ ಆಗ್ರಹದ ಕುರಿತು ಪ್ರತಿಕ್ರಿಯೆ ನೀಡಿದರು.

ರೋಹಿತ್ ಚಕ್ರತೀರ್ಥ ವಿರುದ್ಧ ತೀವ್ರಗೊಂಡ ಆಕ್ರೋಶ; ಒಕ್ಕಲಿಗರ ಪ್ರತಿಭಟನೆ
ಗಡಿಪಾರು ಮಾಡಬೇಕಾದರೇ ಸಾಕಷ್ಟು ನಿಯಮಾವಳಿಗಳು ಇರುತ್ತವೆ. ಈ ರೀತಿ ಹೇಳುವವರಿಗೆ ಅದರ ಬಗ್ಗೆ ತಿಳಿದಿಲ್ಲ. ಯಾರನ್ನಾದರೂ ಗಡಿಪಾರು ಮಾಡಿ ನಾವು ಚಂದ ನೋಡಲು ಆಗುವುದಿಲ್ಲ. ಗಡಿಪಾರು ಮಾಡುವಂತಹ ಯಾವ ಅಪರಾಧ ನಡೆದಿದೆ ಎನ್ನುವುದು ನನ್ನ ಗಮನದಲ್ಲಿಲ್ಲ. ಈಗಾಗಲೇ ಅದರ ಬಗ್ಗೆ ಸಚಿವ ನಾಗೇಶ್ ಅವರು ಮಾತನಾಡಿದ್ದಾರೆ ಎಂದರು.

ತುಮಕೂರಿನ ವಿವಿಧ ನ್ಯಾಯಾಲಯಗಳಲ್ಲಿ ಉದ್ಯೋಗ; ಅರ್ಜಿ ಸಲ್ಲಿಕೆ ಆರಂಭ
ಆದಿಚುಂಚನಗಿರಿ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದಾರೆ, ಎಲ್ಲವೂ ನಡೆಯುತ್ತಿದೆ. ಚರ್ಚೆ ಎಬ್ಬಿಸುತ್ತಿದ್ದಾರೆ. ಅಸಹಿಷ್ಣುತೆ ಮೇರೆ ಮೀರಿ ಪ್ರಕಟೀಕರಣವಾಗುತ್ತಿದೆ.
2017 ರಲ್ಲಿ ನಡೆದಿರುವ ಘಟನೆ ಅದು, ಈಗಾಗಲೇ ಬಿ ರಿಪೋರ್ಟ್ ಕೂಡ ಆಗಿದೆ. ಅದರ ಮೇಲೆ ಯಾವುದೇ ಮೊಕದ್ದಮೆಗಳು‌ ಇಲ್ಲ. ಇದರ ಬಗ್ಗೆ ಯಾವುದೇ ಚರ್ಚೆ ಅಗತ್ಯ ಇಲ್ಲ, ಆದರೂ ಆಗ್ತಾ ಇದೆ ಆಗಲಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ತುಮಕೂರು ಶಿಕ್ಷಣ ಇಲಾಖೆಯಲ್ಲಿ ಉದ್ಯೋಗ; ಇಂದೇ ಅರ್ಜಿ ಸಲ್ಲಿಸಿ

About The Author

You May Also Like

More From Author

+ There are no comments

Add yours