Tumkurnews
ತುಮಕೂರು; ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರಗೆ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುವ ಟಿಕೆಟ್ ಕೈ ತಪ್ಪಿದ್ದು ಏಕೆ ಮತ್ತು ಯಾರಿಂದ ಎಂಬ ಪ್ರಶ್ನೆ ಪಕ್ಷದ ಕಾರ್ಯಕರ್ತರು ಹಾಗೂ ವಿಜಯೇಂದ್ರ ಅಭಿಮಾನಿಗಳನ್ನು ಕಾಡುತ್ತಿದೆ. ಆ ಪ್ರಶ್ನೆಗೆ ಗೃಹ ಸಚಿವ ಅರಗ ಉತ್ತರ ನೀಡಿದ್ದು, ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಏನು ಹೇಳಿದ್ದಾರೆ?; ವಿಜಯೇಂದ್ರಗೆ ವಿಧಾನ ಪರಿಷತ್ ಟಿಕೆಟ್ ಕೈ ತಪ್ಪಿದ್ದು ಪಕ್ಷದ ನಿರ್ಣಯ, ಅದಕ್ಕೆ ಎಲ್ಲರೂ ತಲೆ ಬಾಗಲೇ ಬೇಕು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ಮೊರಾರ್ಜಿ ದೇಸಾಯಿ ಹೆಣ್ಣು ಮಕ್ಕಳ ವಸತಿ ಕಾಲೇಜು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಪಕ್ಷದ ಆದೇಶ, ಪಕ್ಷದ ನಿರ್ಣಯಕ್ಕೆ ನಾವೆಲ್ಲರೂ ತಲೆಬಾಗಬೇಕು. ಈ ಬಗ್ಗೆ ವಿಜಯೇಂದ್ರ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಅವರು ನಮ್ಮ ಪಕ್ಷದ ಯುವ ನಾಯಕರು, ರಾಜ್ಯ ಉಪಾಧ್ಯಕ್ಷರು, ಸದ್ಯ ವಿಧಾನ ಪರಿಷತ್ ಸ್ಥಾನಕ್ಕಿಂತ ಮೇಲಿದ್ದಾರೆ. ಅವರ ನಿರ್ಣಯ ಏನೆಂದು ಅವರೇ ಹೇಳಿದ್ದಾರೆ. ಯಾರೇ ಒಬ್ಬರಿಗೆ ಟಿಕೆಟ್ ಕೊಡಬೇಕು ಎಂದಾಗ ಪಕ್ಷದಲ್ಲಿ ಬಹಳಷ್ಟು ಜನ ಆಕಾಂಕ್ಷಿಗಳು ಇರುತ್ತಾರೆ. ಇದನ್ನು ಯೋಚನೆ ಮಾಡಿ ನಮ್ಮ ಹೈಕಮಂಡ್ ನಿರ್ಣಯ ಮಾಡಿದೆ ಎಂದರು.
ವಿದ್ಯಾರ್ಥಿ ಬಸ್ ಪಾಸ್ ಗೆ ಏನೇನು ದಾಖಲೆಗಳು ಬೇಕು?; ಇಲ್ಲಿದೆ ಮಾಹಿತಿ
ಟಿಕೆಟ್ ನಿರಾಕರಣೆ ವಿಚಾರದಲ್ಲಿ ವಿಜಯೇಂದ್ರ ಅವರಿಗೆ ಒಪ್ಪಿಗೆ ಇದೆ. ಇದರಲ್ಲಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕುವ ಕ್ರಮ ಎಂಬುವಂತದ್ದೇನು ಇಲ್ಲ. ಯಡಿಯೂರಪ್ಪನವರು ನಮ್ಮ ಮಹಾನ್ ನಾಯಕರು. ಪಕ್ಷ ಬೆಳೆಸಿದವರು, ನಾವು ಅವರನ್ನು ಯಾವುತ್ತೂ ಅಗೌರವಿಸುವಂತ ಯಾವ ಪ್ರಶ್ನೆಯೂ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
ಪಿಯುಸಿ, ಪದವಿ ಓದಿದವರಿಗೆ ಉದ್ಯೋಗ; ನೇರ ಸಂದರ್ಶನ
                                            
                                            
                                            
                                            
                                            
                                            
                                            
                                            
                                            
                                    
                                    
                                    
                                    


                                    
                                    
                                    
+ There are no comments
Add yours