ತುಮಕೂರು(ಜು.3) tumkurnews.in
ತುಮಕೂರು ನಗರದಲ್ಲಿ ಎರಡನೇ ಬಾರಿಗೆ ಒಂದೇ ದಿನ 4 ಕೊರೋನಾ ಪಾಸಿಟಿವ್ ಕಂಡು ಬಂದಿದೆ.
ಎಸ್.ಎಸ್ ಪುರಂ ನಿವಾಸಿ ಎನ್ನಲಾದ ತುಮಕೂರು ಜಿಲ್ಲಾಸ್ಪತ್ರೆಯ ಕೋವಿಡ್ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿ 37 ವರ್ಷದ ಮಹಿಳೆಗೆ ಸೋಂಕು ತಗಲಿದ್ದು, ಈಕೆಯ ಸಂಪರ್ಕದಲ್ಲಿದ್ದ ಮೂವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಿದೆ.
ಎಸ್.ಎಸ್ ಪುರಂ 5ನೇ ಕ್ರಾಸ್ ನಿವಾಸಿ 51 ವರ್ಷದ ಪುರುಷನಿಗೆ ಸೋಂಕು ತಗಲಿದ್ದು, ಸಂಪರ್ಕದಲ್ಲಿದ್ದ ಮೂವರನ್ನು ಕ್ವಾರಂಟೈನ್ ಮಾಡಲಾಗಿದೆ. ಇವರ ಟ್ರಾವೆಲ್ ಹಿಸ್ಟರಿ ಪತ್ತೆ ಮಾಡಲಾಗುತ್ತಿದೆ.
ಅಶೋಕ ನಗರ ನಾಲ್ಕನೇ ಕ್ರಾಸ್ ನಿವಾಸಿ 34 ವರ್ಷದ ಪುರುಷನಿಗೆ ಸೋಂಕು ತಗಲಿದೆ. ಪ್ರಾಥಮಿಕ ಸಂಪರ್ಕದ ಇಬ್ಬರನ್ನು ಸಾಂಸ್ಥಿಕ ಮತ್ತು ದ್ವಿತೀಯ ಸಂಪರ್ಕದ 14 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಇವರ ಪ್ರಯಾಣ ಮಾಹಿತಿಯನ್ನು ಪತ್ತೆ ಮಾಡಲಾಗುತ್ತಿದೆ.
ಶ್ರೀರಾಮ ನಗರದ 40 ವರ್ಷ ವಯಸ್ಸಿನ ಪುರುಷನಿಗೆ ಸೋಂಕು ತಗಲಿದೆ. ಇವರ ಟ್ರಾವೆಲ್ ಹಿಸ್ಟರಿ ಮತ್ತು ಸಂಪರ್ಕದಲ್ಲಿದ್ದವರನ್ನು ಪತ್ತೆ ಮಾಡಲಾಗುತ್ತಿದೆ.
ಶುಕ್ರವಾರ ಪತ್ತೆಯಾದ ನಗರದ ಈ ನಾಲ್ಕು ಪ್ರಕರಣದಲ್ಲಿ ಶ್ರೀರಾಮ ನಗರದ ಸೋಂಕಿಗೆ ವ್ಯಕ್ತಿಗೆ ಮಾತ್ರ ಜ್ವರ, ಉಸಿರಾಟದ ಸಮಸ್ಯೆ ಇತ್ತು. ಉಳಿದವರಿಗೆ ಯಾವುದೇ ಸೋಂಕಿನ ಲಕ್ಷಣಗಳು ಇರಲಿಲ್ಲ.
ಇವು ಸೇರಿದಂತೆ ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 25 ಪಾಸಿಟಿವ್ ಕಂಡು ಬಂದಿದೆ.
+ There are no comments
Add yours