ಮಗಳೊಂದಿಗೆ ತಾಯಿ ನಾಪತ್ತೆ
Tumkur news
ತುಮಕೂರು: ಜಿಲ್ಲೆಯ ಶಿರಾ ನಗರ ಪೊಲೀಸ್ ಠಾಣೆ ವ್ಯಾಪ್ತಿ ಮಾನಂಗಿ ತಾಂಡದ ಸುಮಾರು 35 ವರ್ಷದ ವಿನೋದ ಎಂಬ ಮಹಿಳೆಯು ಮೇಘಶ್ರೀ ಎಂಬ 12 ವರ್ಷದ ತನ್ನ ಮಗಳೊಂದಿಗೆ 2024ರ ಜೂನ್ 1 ರಿಂದ ಕಾಣೆಯಾಗಿದ್ದಾಳೆ ಎಂದು ಈಕೆಯ ಪತಿ ಹನುಮಂತರಾಯಪ್ಪ ಠಾಣೆಗೆ ದೂರು ನೀಡಿದ್ದಾರೆ.
ಕಾಣೆಯಾದ ಮಹಿಳೆಯು 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಮತ್ತು ಲಂಬಾಣಿ ಭಾಷೆ ಮಾತನಾಡುತ್ತಾಳೆ. ಮೇಘಶ್ರೀಯು 3.6 ಅಡಿ ಎತ್ತರ, ಸಾಧಾರಣ ಮೈಕಟ್ಟು ಹೊಂದಿದ್ದು, 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಈಕೆಯು ಕನ್ನಡ ಮತ್ತು ಲಂಬಾಣಿ ಭಾಷೆ ಮಾತನಾಡುತ್ತಾಳೆ.
ಕಾಣೆಯಾದವರ ಬಗ್ಗೆ ಸುಳಿವು ಸಿಕ್ಕಲ್ಲಿ ಕೂಡಲೇ ದೂ.ವಾ.ಸಂ. ೦೮೧೩೫-೨೭೫೨೩೭, ೦೮೧೬-೨೨೭೨೪೫೧ನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮನವಿ ಮಾಡಿದ್ದಾರೆ.
+ There are no comments
Add yours