ತುಮಕೂರು: ಮಾರ್ಚ್ 17ರಂದು ಉದ್ಯೋಗ ಮೇಳ

1 min read

 

ತುಮಕೂರು: ಮಾರ್ಚ್ 17ರಂದು ಉದ್ಯೋಗ ಮೇಳ

Tumkur news
ತುಮಕೂರು: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ನಿರ್ಮಾಣ್ ಆರ್ಗನೈಜೇಷನ್ ಅಸೋಸಿಯೇಷನ್ ಹಾಗೂ ಅನನ್ಯ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಅವರ ಸಹಯೋಗದಲ್ಲಿ ಮಾರ್ಚ್ 17ರಂದು ನಗರದ ಬಿ.ಹೆಚ್. ರಸ್ತೆ ಟೌನ್ ಹಾಲ್ ಸರ್ಕಲ್ ಬಳಿಯಿರುವ ಅನನ್ಯಾ ಕ್ಯಾಂಪಸ್‌ನಲ್ಲಿ ಬೆಳಿಗ್ಗೆ 10 ಗಂಟೆಗೆ ಉದ್ಯೋಗ ಮೇಳ ಏರ್ಪಡಿಸಲಾಗಿದೆ.
ಮೇಳದಲ್ಲಿ 30ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿದ್ದು, ಯಾವುದೇ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಾಸಾದ ಅಭ್ಯರ್ಥಿಗಳು ತಮ್ಮ ಬಯೋಡೇಟಾ ಹಾಗೂ ಶಾಲಾ ದಾಖಲಾತಿಗಳೊಂದಿಗೆ ಭಾಗವಹಿಸಬಹುದಾಗಿದೆ. ಮೇಳದಲ್ಲಿ 18 ರಿಂದ 35 ವರ್ಷದೊಳಗಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಕಿಶೋರ್ ಕುಮಾರ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ ೦೮೧೬-೨೨೭೮೪೮೮, ೯೦೭೧೦೨೧೧೪೩, ೯೫೧೩೧೩೬೬೪೨, ೯೯೧೬೧೯೩೭೯೭ ಹಾಗೂ ೯೬೩೨೨೨೦೮೯೯ನ್ನು ಸಂಪರ್ಕಿಸಬಹುದಾಗಿದೆ.

 

About The Author

You May Also Like

More From Author

+ There are no comments

Add yours