ತುಮಕೂರು: ಟಿ.ಜಿ.ಎಂ.ಸಿ ಬ್ಯಾಂಕ್’ನಲ್ಲಿ 200 ಕೋಟಿ ರೂ. ಅವ್ಯವಹಾರ!

1 min read

 

ತುಮಕೂರು: ಟಿ.ಜಿ.ಎಂ.ಸಿ ಬ್ಯಾಂಕ್’ನಲ್ಲಿ 200 ಕೋಟಿ ರೂ. ಅವ್ಯವಹಾರ!

Tumkur news
ತುಮಕೂರು: ನಗರದ ಟಿ.ಜಿ.ಎಂ.ಸಿ ಬ್ಯಾಂಕ್’ನಲ್ಲಿ 20 ಖಾತೆಗಳಿಂದ ಸುಮಾರು 200 ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿ.ಎಸ್.ಬಸವರಾಜು ಎಂಬುವವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಟಿ.ಜಿ.ಎಂ.ಸಿ ಬ್ಯಾಂಕಿನ 20 ಖಾತೆಗಳಲ್ಲಿ 200 ಕೋಟಿ ರೂ. ಅವ್ಯವವಹಾರ ನಡೆದಿರುವ ಬಗ್ಗೆ ಹಲವಾರು ದೂರುಗಳನ್ನು ಸಹಕಾರ ಇಲಾಖೆಗೆ ನೀಡಲಾಗಿದೆ. ಸಹಕಾರ ಸಂಘಗಳ ನಿಬಂಧಕರು ಆರ್.ಸಿ.ಎಸ್/ಯು.ಬಿ.ಸಿ-1/ ಸೆಕ್ಷನ್ 64/2022-23 ದಿನಾಂಕ 02/05/2023ರ ಆದೇಶದಲ್ಲಿ ತನಿಖೆ ಮತ್ತು ವರದಿ ಮಾಡಲು ಸಹಕಾರ ಸಂಘಗಳ ಉಪ ರಿಜಿಸ್ಟರ್ ಅವರಿಗೆ ಆದೇಶಿಸಿದ್ದಾರೆ.
ಈ ಸಂಬಂಧ ಟಿ.ಜಿ.ಎಂ.ಸಿ ಬ್ಯಾಂಕ್ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಸಿಇಓ, ಸಹಕಾರ ಸಂಘಗಳ ಉಪನಿಬಂಧಕರು ಮತ್ತು ಇತರರು ಸಂಚು ರೂಪಿಸಿ ದಾಖಲೆ ಪೋರ್ಜರಿ ಮಾಡಿಸಿ ವಿಚಾರಣೆಗೆ ಹಾಜರುಪಡಿಸುವ ದಾಖಲೆಯನ್ನು ಹಿಂದಿನ ತಾರೀಖು ಹಾಕಿ ಪೋರ್ಜರಿ ಮಾಡಿ ಆರೋಪಿತರನ್ನು ರಕ್ಷಿಸಿ ಕಾನೂನು ದಂಡನೆಯಿಂದ ತಪ್ಪಿಸಲು ಸುಳ್ಳು ಸಾಕ್ಷಿ ರಚಿಸಿ ಬ್ಯಾಂಕಿನಲ್ಲಿ ನಡೆದಿರುವ ಸುಮಾರು 200 ಕೋಟಿ ರೂ. ಹಣ ವಂಚನೆ ಬಗ್ಗೆ ಮುಚ್ಚಿಹಾಕುವ ಪ್ರಯತ್ನ ಮಾಡಿದ್ದಾರೆ ಎಂದು ಜಿ.ಎಸ್.ಬಸವರಾಜು ದೂರಿನಲ್ಲಿ ಆರೋಪಿಸಿದ್ದಾರೆ.
30/10/2023ರಂದು ಡಿ.ಆರ್.ಸಿ.ಎಸ್.ಗೆ ನೀಡಿರುವ ಟಿಜಿಎಂಸಿ.ಬಿ/ಆಡಳಿತ/421/2023-24ರಲ್ಲಿ ಟಿ.ಜಿ.ಎಂ.ಸಿ ಬ್ಯಾಂಕಿನಿಂದ ಬರೆದ ಪತ್ರಕ್ಕೆ ಅಧ್ಯಕ್ಷರು ಮತ್ತು ನಿರ್ದೇಶಕರು ಸಹಿ ಹಾಕಿದಂತಿದೆ. ಈ ಉತ್ತರದಲ್ಲಿ ಯಾವುದೇ ದಾಖಲೆಗಳಿಲ್ಲದೆ ಲಿಖಿತ ವಿವರಣೆಯನ್ನು ಅವರಿಗೆ ಬೆಂಬಲವಾಗಿ ನೀಡಿದೆ. ನಿರ್ದೇಶಕ ಜಿ.ಸಿ.ಬಸವರಾಜು ಅವರ 2015-20ರ ಅವಧಿ ಮುಗಿದಿದ್ದು, 2023ರಲ್ಲಿ ಅವರ ಸಹಿಯನ್ನು ನಕಲು ಮಾಡಲಾಗಿದೆ. ಅವರ ಹೆಸರನ್ನು ಜಿ.ಎಸ್.ಬಸವರಾಜು ಎಂದು ತಪ್ಪಾಗಿ ತೋರಿಸಲಾಗಿದೆ ಎಂದು ಹೇಳಿದ್ದಾರೆ.
ಟಿ.ಜಿ.ಎಂ.ಸಿ ಬ್ಯಾಂಕಿನಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಜಿ.ಎಸ್.ಬಸವರಾಜು ಅವರು ತಮ್ಮ ದೂರಿನಲ್ಲಿ ಪೊಲೀಸರಿಗೆ ಮನವಿ ಮಾಡಿದ್ದಾರೆ.

About The Author

You May Also Like

More From Author

+ There are no comments

Add yours