ಮಗಳು ಕಾಣೆ: ತಾಯಿಯಿಂದ ದೂರು ದಾಖಲು
Tumkur news
ತುಮಕೂರು: ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿ ಊರ್ಡಿಗೆರೆ ಗ್ರಾಮದ ಮಂಗಳಮ್ಮ ಎಂಬ ಮಹಿಳೆಯು ಠಾಣೆಗೆ ಹಾಜರಾಗಿ ನನ್ನ ಮಗಳು ಮಂಜುಳ ಹಾಗೂ ನನ್ನ ಮನೆಯಲ್ಲಿಯೇ ಇದ್ದ ನಮ್ಮ ಸಂಬಂಧಿ ಮಂಜುನಾಥ್ ಸೇರಿ ಇಬ್ಬರೂ ಜನವರಿ 1ರಂದು ಮನೆಯಿಂದ ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾರೆ ಎಂದು ಠಾಣೆಗೆ ದೂರು ನೀಡಿದ್ದಾಳೆ.
ಕಾಣೆಯಾದ ಮಂಜುಳ 29ವರ್ಷ ವಯೋಮಾನದವಳಾಗಿದ್ದು, 5.3 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾಳೆ. ಕಾಣೆಯಾದ ಸಂದರ್ಭದಲ್ಲಿ ಹಸಿರು ಬಣ್ಣದ ಚೂಡಿದಾರ್ ಧರಿಸಿದ್ದಳು.
ಕಾಣೆಯಾದ ಮಂಜುನಾಥ 30 ವರ್ಷ ವಯೋಮಾನದವನಾಗಿದ್ದು, 5.5 ಅಡಿ ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಕಾಣೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಅಂಗಿ ಧರಿಸಿದ್ದನು.
ಕಾಣೆಯಾದ ಇವರುಗಳ ಬಗ್ಗೆ ಸುಳಿವು ಸಿಕ್ಕಲ್ಲಿ ಕೂಡಲೇ ದೂ.ವಾ.ಸಂ.0816-2281124/ 2272451/ 2281120 ಮೊ.ಸಂ.9480802952-00ಯನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.
+ There are no comments
Add yours