ತುಮಕೂರು: ಮಹಾನಗರ ಪಾಲಿಕೆಯಿಂದ ಮಹತ್ವದ ಸೂಚನೆ: ತಪ್ಪಿದಲ್ಲಿ ಬೀಳುತ್ತೆ ದಂಡ!
ಕಟ್ಟಡದ ಪಾರ್ಕಿಂಗ್, ಸೆಲ್ಲರ್ ಜಾಗದಿಂದ ಉದ್ದಿಮೆಯನ್ನು ಸ್ಥಳಾಂತರಿಸಲು ಸೂಚನೆ
Tumkur news
ತುಮಕೂರು: ಮಹಾನಗರ ಪಾಲಿಕೆಯ 35 ವಾರ್ಡ್’ಗಳ ವ್ಯಾಪ್ತಿಯ ಉದ್ದಿಮೆದಾರರು ಕಟ್ಟಡದ ಪಾರ್ಕಿಂಗ್, ಸೆಲ್ಲರ್ ಜಾಗದಲ್ಲಿ ಅಂಗಡಿ ಮಳಿಗೆಗಳನ್ನು ನಿರ್ಮಿಸಿ ಉದ್ದಿಮೆ ನಡೆಸುತ್ತಿದ್ದು, ತಮ್ಮ ಉದ್ದಿಮೆಯನ್ನು ಸ್ಥಳಾಂತರಿಸಲು ಮಹಾನಗರಪಾಲಿಕೆ ಆಯುಕ್ತೆ ಬಿ.ವಿ ಅಶ್ವಿಜ ಸೂಚಿಸಿದ್ದಾರೆ.
ಬೆಂಗಳೂರಿನ ಲೋಕಾಯುಕ್ತ ಜಿ.ಆರ್. ಸುಧೀಂದ್ರ ಅವರಿಗೆ ದೂರು ಸಲ್ಲಿಸಿರುವ ಮೇರೆಗೆ ದೂರಿನ ಕುರಿತು ಸೂಕ್ತ ಕ್ರಮಕೈಗೊಳ್ಳಲು ಅವರು ಆದೇಶಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದ 7 ದಿನಗಳೊಳಗಾಗಿ ತಮ್ಮ ಉದ್ದಿಮೆಯನ್ನು ಕಟ್ಟಡದ ಪಾರ್ಕಿಂಗ್, ಸೆಲ್ಲರ್ ಜಾಗದಿಂದ ಸ್ಥಳಾಂತರಿಸಬೇಕು. ತಪ್ಪಿದ್ದಲ್ಲಿ ತಮ್ಮ ಉದ್ದಿಮೆ ಪರವಾನಗಿಯನ್ನು ರದ್ದುಗೊಳಿಸುವ, ಖಾಲಿಗೊಳಿಸುವ ನಿಟ್ಟಿನಲ್ಲಿ ಕೆ.ಎಂ.ಸಿ.ಕಾಯ್ದೆ 1976 ಕಲಂ 377 ರಂತೆ ನಿಯಮಾನುಸಾರ ಕ್ರಮವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
+ There are no comments
Add yours