ತುಮಕೂರು; ಜಿಲ್ಲೆಯ 10 ಗ್ರಾ.ಪಂ.ಗಳಲ್ಲಿ ಪಿಂಚಣಿ ಅದಾಲತ್
Tumkurnews
ತುಮಕೂರು; ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ನವೆಂಬರ್ 20ರಂದು ಜಿಲ್ಲೆಯ 10 ಗ್ರಾಮ ಪಂಚಾಯತಿಗಳಲ್ಲಿ ಪಿಂಚಣಿ ಅದಾಲತ್ ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ಈ ಅದಾಲತ್‍ನಲ್ಲಿ ಪಿಂಚಣಿಗೆ ಸಂಬಂಧಿಸಿದಂತೆ ಫಲಾನುಭವಿಗಳ ಕುಂದು-ಕೊರತೆಗಳನ್ನು ಆಲಿಸಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ನವೆಂಬರ್ 20ರಂದು ಜಿಲ್ಲೆಯ ಶಿರಾ ತಾಲೂಕಿನ ಚಿನ್ನೇನಹಳ್ಳಿ; ತಿಪಟೂರು ತಾಲೂಕಿನ ಗುಂಗರಮಳೆ; ಮಧುಗಿರಿ ತಾಲೂಕಿನ ಹೊಸಕೆರೆ; ತುಮಕೂರು ತಾಲೂಕಿನ ಅರಕೆರೆ; ಚಿಕ್ಕನಾಯಕನಹಳ್ಳಿ ತಾಲೂಕಿನ ಮಲ್ಲೀಗೆರೆ; ಕುಣಿಗಲ್ ತಾಲೂಕಿನ ನಡೆಮಾವಿನಪುರ ಹಾಗೂ ಜೋಡಿಹೊಸಹಳ್ಳಿ; ಕೊರಟಗೆರೆ ತಾಲೂಕಿನ ಕೋಳಾಲ; ಪಾವಗಡ ತಾಲೂಕಿನ ಪೋತಗಾನಹಳ್ಳಿ; ಗುಬ್ಬಿ ತಾಲೂಕಿನ ಇರಕಸಂದ್ರ ಗ್ರಾಮ ಪಂಚಾಯಿತಿಗಳಲ್ಲಿ ಪಿಂಚಣಿ ಅದಾಲತ್ ನಡೆಯಲಿದ್ದು, ಪಿಂಚಣಿದಾರರು ಅದಾಲತ್‍ನಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಸಲ್ಲಿಸಿ ಪರಿಹರಿಸಿಕೊಳ್ಳಬಹುದು ಎಂದು ಅವರು ಮನವಿ ಮಾಡಿದ್ದಾರೆ.
+ There are no comments
Add yours