ತುಮಕೂರು ಕೋರ್ಟ್’ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

1 min read

 

ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Tumkurnews
ತುಮಕೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾನೂನು ನೆರವು ಅಭಿರಕ್ಷಕರ ಕಚೇರಿಯಲ್ಲಿ ಖಾಲಿಯಿರುವ 2 ಕಚೇರಿ ಸಹಾಯಕ, ಗುಮಾಸ್ತ ಹಾಗೂ 2 ಜವಾನ(ಮುನ್ಸಿ/ಅಟೆಂಡೆಂಟ್) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಚೇರಿ ಸಹಾಯಕ, ಗುಮಾಸ್ತ ಹುದ್ದೆಗೆ ಅರ್ಜಿ ಸಲ್ಲಿಸುವವರು ಯಾವುದೇ ಪದವಿಯೊಂದಿಗೆ ಮೂಲದ ಸಂಸ್ಕರಣ ಕೌಶಲ್ಯಗಳು ಮತ್ತು ಕಾರ್ಯನಿರ್ವಹಿಸುವ ಸಾಮರ್ಥ್ಯ , ಕಂಪ್ಯೂಟರ್ ಮತ್ತು ಡೇಟಾ ಫೀಡ್ ಮಾಡುವ ಕೌಶಲ್ಯ, ಅರ್ಜಿಗಳ ಸರಿಯಾದ ಪುಟ ಜೋಡಣೆಯೊಂದಿಗೆ ಉತ್ತಮ ಟೈಪಿಂಗ್ ವೇಗ, ಉಕ್ತಲೇಖನ ತೆಗೆದುಕೊಳ್ಳುವ ಮತ್ತು ನ್ಯಾಯಾಲಯಗಳಲ್ಲಿ ಪ್ರಸ್ತುತಿಗಾಗಿ ಕಡತಗಳನ್ನು ಸಿದ್ಧಪಡಿಸುವ ಸಾಮರ್ಥ್ಯ, ಕಡತ ನಿರ್ವಹಣೆ ಪ್ರಕ್ರಿಯೆ ಜ್ಞಾನವನ್ನು ಹೊಂದಿರಬೇಕು. ಈ ಹುದ್ದೆಗೆ ಮಾಸಿಕ 19,695 ರೂ.ಗಳ ವೇತನ ನಿಗದಿಪಡಿಸಲಾಗಿದೆ.
ಜವಾನ(ಮುನ್ಸಿ/ಅಟೆಂಡೆಂಟ್) ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿರಬೇಕು. ಆಯ್ಕೆಯಾದವರಿಗೆ ಮಾಹೆಯಾನ 15,884 ರೂ.ಗಳ ವೇತನ ಪಾವತಿ ಮಾಡಲಾಗುವುದು.
ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಅಕ್ಟೋಬರ್ 3ರೊಳಗಾಗಿ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾನೂನು ನೆರವು ಅಭಿರಕ್ಷಕರ ಕಚೇರಿಗೆ ಮಾನವ ಸಂಪನ್ಮೂಲ ವ್ಯಕ್ತಿ ನೇಮಕಾತಿ ಸಮಿತಿ, ನೆಲ ಮಹಡಿ, ಹೊಸ ನ್ಯಾಯಾಲಯಗಳ ಸಂಕೀರ್ಣ, ತುಮಕೂರು ಇವರಿಗೆ ಸಲ್ಲಿಸಬಹುದಾಗಿದೆ.

ತುಮಕೂರು; ಜಿಲ್ಲೆಯ ನ್ಯಾಯಾಲಯಗಳಲ್ಲಿ ಉದ್ಯೋಗ; ಅರ್ಜಿ ಆಹ್ವಾನ
ನಿಗದಿತ ಅರ್ಜಿ ನಮೂನೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಃ 0816–2255133 ಅಥವಾ ಇ-ಮೇಲ್ ವಿಳಾಸ dlsatumkur1@gmail.com ಅಥವಾ ಜಾಲತಾಣ https://tumakuru.dcourts.gov.in ಅನ್ನು ಸಂಪರ್ಕಿಸಬಹುದು.
ಹುದ್ದೆಗಳ ನೇಮಕಾತಿಯು ಸಂಪೂರ್ಣವಾಗಿ ತಾತ್ಕಲಿಕವಾಗಿದ್ದು, 6 ತಿಂಗಳ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ. ಕರ್ತವ್ಯ ಸಾಮರ್ಥ್ಯ ತೃಪ್ತಿಕರವಾದಲ್ಲಿ ವಿಸ್ತರಣೆಗೆ ಅವಕಾಶವಿರುತ್ತದೆ. ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆ, ಕಂಪ್ಯೂಟರ್ ಜ್ಞಾನದ ದಾಖಲೆ ಪ್ರತಿಗಳು, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿಗಳನ್ನು ಅರ್ಜಿಗೆ ಲಗತ್ತಿಸಬೇಕು. ನೇಮಕಾತಿ ಪ್ರಾಧಿಕಾರ ಕೋರಿದಾಗ ಮೂಲ ದಾಖಲೆಗಳನ್ನು ಹಾಜರುಪಡಿಸತಕ್ಕದ್ದು. ಗಣಕ ಯಂತ್ರ, ಬೆರಳಚ್ಚು ಜ್ಞಾನ ಕುರಿತು ಕೌಶಲ್ಯ ಪರೀಕ್ಷೆ ನಡೆಸಲಾಗುವುದು ಹಾಗೂ ಅರ್ಹತೆಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ತಿಳಿಸಿದ್ದಾರೆ.

KSRTC ವಿದ್ಯಾರ್ಥಿ ಬಸ್ ಪಾಸ್ ಚಾಲನೆ: ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

About The Author

You May Also Like

More From Author

+ There are no comments

Add yours