ಊರುಕೆರೆ, ಸೋರೆಕುಂಟೆ ಪಂಚಾಯ್ತಿ ವ್ಯಾಪ್ತಿಯ ನರೇಗಾ ಕಾಮಗಾರಿಗಳ ಪರಿಶೀಲನೆ

1 min read

 

ನರೇಗಾ ಯೋಜನೆ ಅನುಷ್ಠಾನ: ಕಡತಗಳ ಸಮರ್ಪಕ ನಿರ್ವಹಣೆಗೆ ಸೂಚನೆ

Tumkurnews
ತುಮಕೂರು: ತಾಲ್ಲೂಕಿನಲ್ಲಿ ನರೇಗಾ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಡತಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಆಯುಕ್ತಾಲಯದ ಜಂಟಿ ನಿರ್ದೇಶಕ ಶ್ರೀಶೈಲ ದಿಡ್ಡಿಮನಿ(ತೋಟಗಾರಿಕೆ) ಸೂಚನೆ ನೀಡಿದರು.
ತಾಲ್ಲೂಕಿನ ಊರುಕೆರೆ, ಸೋರೆಕುಂಟೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನ ಮಾಡಲಾದ ಕಾಮಗಾರಿ ಸ್ಥಳಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ನರೇಗಾ ಯೋಜನೆಯ ಕಾಮಗಾರಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕೆಂದು ಸೂಚನೆ ನೀಡಿದರು.

ತುಮಕೂರು: ಆ.27ರಂದು ಇಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ: ಡಿಸಿ ಸೂಚನೆ
ಊರುಕೆರೆ ಗ್ರಾಮ ಪಂಚಾಯತಿಯ ಹೆಬ್ಬಾಕ ಗ್ರಾಮದಲ್ಲಿ ಕೈಗೊಂಡ ದನದ ಕೊಟ್ಟಿಗೆ, ಬಾಳೆ ಸಸಿ ನಾಟಿ, ಸೋರೆಕುಂಟೆ ಗ್ರಾಮ ಪಂಚಾಯತಿ ಲಿಂಗನಹಳ್ಳಿ ಗ್ರಾಮದಲ್ಲಿ ದನದ ಕೊಟ್ಟಿಗೆ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದ ಅವರು, ಕಾಮಗಾರಿ ಅನುಷ್ಠಾನದಲ್ಲಿ ಕಂಡು ಬಂದ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಲು ನಿರ್ದೇಶಿಸಿದರು.

ತುಮಕೂರು: ಪ್ರತಿ ಗ್ರಾಪಂಗಳಲ್ಲಿ ಕಡ್ಡಾಯವಾಗಿ ಈ ಕೆಲಸ ಆಗಬೇಕು: ಜಿಪಂ‌ ಸಿಇಒ ಪ್ರಭು ಜಿ ಸೂಚನೆ
ಈ ವೇಳೆ ಸಹಾಯಕ ನಿರ್ದೇಶಕ(ಗ್ರಾಮೀಣ ಉದ್ಯೋಗ) ಎಸ್.ಎಸ್. ಮಂಜುನಾಥ್, ಸಹಾಯಕ ನಿರ್ದೇಶಕ (ತೋಟಗಾರಿಕೆ) ಹರ್ಷ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ರವಿಕುಮಾರ್, ಗಂಗಾಧರ ಆರ್., ತಾಂತ್ರಿಕ ಸಂಯೋಜಕರು, ತಾಲ್ಲೂಕು ಐಈಸಿ ಸಂಯೋಜಕರು, ತಾಂತ್ರಿಕ ಸಹಾಯಕರು, ಗ್ರಾಮ ಪಂಚಾಯತಿ ಸಿಬ್ಬಂದಿ ಹಾಜರಿದ್ದರು.

ಈ ಬಾರಿ ತುಮಕೂರು ದಸರಾ ಹೇಗಿರುತ್ತೆ ಗೊತ್ತೇ? ಜಿಲ್ಲಾಧಿಕಾರಿ ಮಾಹಿತಿ

About The Author

You May Also Like

More From Author

+ There are no comments

Add yours