ತುಮಕೂರು: ಸ್ವಾತಂತ್ರ್ಯ ದಿನಾಚರಣೆ ವೇಳೆ ಪ್ಯಾಲಸ್ಥೈನ್ ಬಾವುಟ ಹಾರಿಸಿದ ಕಿಡಿಗೇಡಿಗಳ ಬಂಧನ: ಶಾಸಕ ರಂಗನಾಥ್ ಖಂಡನೆ

1 min read

 

ಸ್ವಾತಂತ್ರ್ಯ ದಿನಾಚರಣೆ ವೇಳೆ ಪ್ಯಾಲಸ್ಥೈನ್ ಬಾವುಟ ಹಾರಿಸಿದ ಕಿಡಿಗೇಡಿಗಳ ಬಂಧನ: ಶಾಸಕ ರಂಗನಾಥ್ ಖಂಡನೆ

Tumkurnews
ಕುಣಿಗಲ್: ತಾಲೂಕಿನ ಜಿಕೆಬಿಎಂಎಸ್ ಆವರಣದಲ್ಲಿ ಗುರುವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕೆಲವು ಕಿಡಿಗೇಡಿಗಳು ಪ್ಯಾಲೆಸ್ಥೈನ್ ದೇಶದ ಬಾವುಟವನ್ನು ಹಾರಿಸಿದ್ದಾರೆ.
ಏಳೆಂಟು ಪುಂಡರ ಗುಂಪು ಪ್ಯಾಲಸ್ಥೈನ್ ಬಾವುಟ ಹಿಡಿದು ಹಾರಿಸಿದ್ದಾರೆ. ಆಗ ಅಲ್ಲಿದ್ದ ಕೆಲವರು ಅದನ್ನು ವಿರೋಧಿಸಿದ್ದು, ಅನ್ಯ ದೇಶದ ಬಾವುಟ ಹಾರಿಸದಂತೆ ಎಚ್ಚರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತುಮಕೂರು: ಇನ್ಮುಂದೆ ರಾತ್ರಿ 1 ಗಂಟೆವರೆಗೆ: ದಿನದ 24 ಗಂಟೆ ವ್ಯಾಪಾರ ಮಾಡಬಹುದು! ಸರ್ಕಾರದ ಆದೇಶ
ಶಾಸಕ ಖಂಡನೆ: ಪ್ಯಾಲಸ್ಥೈನ್ ಬಾವುಟ ಹಾರಿಸಿದ ಪ್ರಕರಣವನ್ನು ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಡಿ ರಂಗನಾಥ್ ಖಂಡಿಸಿದ್ದಾರೆ. “ಕೃತ್ಯ ಅಕ್ಷಮ್ಯ ಅಪರಾಧ, ಅವರನ್ನು ಈಗಾಗಲೇ ಬಂಧಿಸಲಾಗಿದೆ, ನಾನು ಈ ಅಪರಾಧವನ್ನು ಖಂಡಿಸುತ್ತೇನೆ, ನಮ್ಮ ದೇಶದ ರಾಷ್ಟ್ರ ಧ್ವಜ ನಮ್ಮ ಹೆಮ್ಮೆಯ ಪ್ರತೀಕ, ಅದನ್ನು ಗೌರವಿಸುವುದು ನಮ್ಮ ಕರ್ತವ್ಯ, ನಮ್ಮ ಜೀವನದ ಪ್ರತಿ ಕಣ ಕಣದಲ್ಲೂ ರಾಷ್ಟ್ರ ಹಾಗೂ ರಾಷ್ಟ್ರಧ್ವಜದ ಬಗ್ಗೆ ಗೌರವ ಇದೆ’ ಎಂದು ಅವರು ತಿಳಿಸಿದ್ದಾರೆ.

ಲಂಡನ್ ನೆನಪಿಸುವ ತುಮಕೂರಿನ ಹೊಸ ಬಸ್ ನಿಲ್ದಾಣ!: ಜನಾಕರ್ಷಣೆ ಎಸ್ಕಲೇಟರ್! ವಿಡಿಯೋ

About The Author

You May Also Like

More From Author

+ There are no comments

Add yours