ಭಾರತವು ವಿಶ್ವದ ಗಮನ ಸೆಳೆಯುವ ಮುಂಚೂಣಿ ರಾಷ್ಟ್ರಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ: ಗೃಹ ಸಚಿವ ಪರಮೇಶ್ವರ್

1 min read

 

ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆಯ ಹೋರಾಟಗಾರರನ್ನು ಸ್ಮರಿಸಿದ ಗೃಹ ಸಚಿವ ಜಿ.ಪರಮೇಶ್ವರ್

Tumkurnews
ತುಮಕೂರು: ಭಾರತವು ವಿಶ್ವದ ಗಮನ ಸೆಳೆಯುವ ಮೂಲಕ ಮುಂಚೂಣಿ ರಾಷ್ಟ್ರಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರು.

ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಭಾರತದ 78ನೇ ಸ್ವಾತಂತ್ರೋತ್ಸವ ದಿನಾಚರಣೆಯಲ್ಲಿ ದ್ವಜರೋಹಣ ನೆರವೇರಿಸಿ ಅವರು ಮಾತನಾಡಿದರು.
ಈ ದಿನ ನಮಗೆಲ್ಲರಿಗೂ ವಿಶೇಷವಾಗಿದೆ. ಭಾರತವು ಸ್ವತಂತ್ರಗೊಂಡು 78 ವರ್ಷಗಳಾಗಿದ್ದು, ಈ ದಿನವನ್ನು ಬಹಳ ಸಂಭ್ರಮ, ಸಡಗರದಿಂದ ನಾವಿಂದು ಆಚರಿಸುತ್ತಿದ್ದೇವೆ. ದೇಶದ ಪ್ರತೀ ನಗರ, ಪಟ್ಟಣ, ಗ್ರಾಮಗಳಲ್ಲಿ ಜನರು ತ್ರಿವರ್ಣ ಧ್ವಜ ಹಾರಿಸಿ ಸಿಹಿ ಹಂಚುವ ಮೂಲಕ ದೇಶ ಭಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆ.
ಭಾರತೀಯರಾದ ನಮಗೆ ಇಂದು ಬಹುದೊಡ್ಡ ಸಂಭ್ರಮದ ದಿನ. 1947 ಆಗಸ್ಟ್ 15ರಂದು ಎರಡು ಶತಮಾನಗಳ ಕಾಲದ ಪರಕೀಯರ ಸರ್ವಾಧಿಕಾರ ನಿರಂಕುಶ ಪ್ರಭುತ್ವದ ದಾಸ್ಯದಿಂದ ವಿಮೋಚನೆಗೊಂಡು ಸ್ವತಂತ್ರ ಭಾರತ ಉದಯವಾದ ಅವಿಸ್ಮರಣೀಯ ದಿನವಾಗಿದೆ.

ಲಂಡನ್ ನೆನಪಿಸುವ ತುಮಕೂರಿನ ಹೊಸ ಬಸ್ ನಿಲ್ದಾಣ!: ಜನಾಕರ್ಷಣೆ ಎಸ್ಕಲೇಟರ್! ವಿಡಿಯೋ
ಬ್ರಿಟೀಷರಿಂದ ಸ್ವತಂತ್ರಗೊಂಡ ನಂತರ ಭಾರತ ದೇಶ ಹಲವು ಹೊಸತುಗಳನ್ನು ಕಂಡಿದೆ. ಹಲವು ಸಾಧನೆಗಳಿಗೆ ಸಾಕ್ಷಿಯಾಗಿದೆ. ಈ ಸಾಧನೆ ಅಭಿವೃದ್ಧಿಗಳೊಂದಿಗೆ ಭಾರತವು ವಿಶ್ವದ ಗಮನ ಸೆಳೆಯುವ ಮೂಲಕ ಮುಂಚೂಣಿ ರಾಷ್ಟ್ರಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕರ್ನಾಟಕ ಸರ್ಕಾರದ ಗೃಹ ಸಚಿವನಾಗಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವನಾಗಿ 78ನೇ ಸ್ವತಂತ್ರ ಭಾರತದ ದ್ವಜಾರೋಹಣವನ್ನು ಅತ್ಯಂತ ಗೌರವದಿಂದ ನೆರವೇರಿಸಲು ಹೆಮ್ಮೆ ಪಡುತ್ತಿದ್ದೇನೆ ಎಂದರು.
ಸುಮಾರು ಎರಡು ಶತಮಾನಗಳ ಕಾಲ ಪೋರ್ಚುಗೀಸರು, ಡಚ್ಚರು, ಬ್ರಿಟೀಷರು ಮುಂತಾದ ಪರಕೀಯರು ವ್ಯಾಪಾರದ ವಿಸ್ತರಣೆಗಾಗಿ ಭಾರತಕ್ಕೆ ಆಗಮಿಸಿ ವಸಾಹತುಗಳನ್ನು ಸ್ಥಾಪಿಸಿಕೊಂಡು ಭಾರತೀಯರನ್ನು ಗುಲಾಮಗಿರಿಗೆ ತಳ್ಳಿ ಭಾರತದ ಎಲ್ಲಾ ಸಂಪತ್ತನ್ನು ಕೊಳ್ಳೆ ಹೊಡೆದರು. ಬ್ರಿಟೀಷರು ಅನೇಕ ಕಾಯ್ದೆಗಳನ್ನು ರೂಪಿಸಿಕೊಂಡು ನಿರಂಕುಶ ಪ್ರಭುತ್ವವನ್ನು ಭಾರತದಲ್ಲಿ ಸ್ಥಾಪಿಸಿ ಪ್ರಜೆಗಳ ಮೇಲೆ ದರ್ಪ, ದೌರ್ಜನ್ಯ, ದಬ್ಬಾಳಿಕೆಗಳನ್ನು ಎಸಗಿ ನಮ್ಮನ್ನು ಗುಲಾಮರನ್ನಾಗಿಸಿದ್ದರು.

ತುಮಕೂರು: ಇನ್ಮುಂದೆ ರಾತ್ರಿ 1 ಗಂಟೆವರೆಗೆ: ದಿನದ 24 ಗಂಟೆ ವ್ಯಾಪಾರ ಮಾಡಬಹುದು! ಸರ್ಕಾರದ ಆದೇಶ
ಗುಲಾಮಗಿರಿಯಿಂದ ಮುಕ್ತಿ ಹೊಂದಲು ಪರಕೀಯರ ವಿರುದ್ಧ ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ ೧೯೪೭ರವರೆಗೆ ನಡೆದ ಹೋರಾಟದಲ್ಲಿ ಅನೇಕ ಮಹನೀಯರು ತಮ್ಮ ಪ್ರಾಣ ತ್ಯಾಗ ಮಾಡಿ ನಮ್ಮೆಲ್ಲರ ಸ್ಮೃತಿ ಪಟಲದಲ್ಲಿ ಅಜರಾಮರರಾಗಿದ್ದಾರೆ.
ಮೈಸೂರು ಸಂಸ್ಥಾನದ ಟಿಪ್ಪು ಸುಲ್ತಾನ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ತಾತ್ಯ ಟೋಪಿ, ನಾನಕ್ ಸಾಹೇಬ್, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಚಂದ್ರ ಶೇಖರ್ ಆಜಾದ್, ಮುಂತಾದ ಮಹಾತ್ಮರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮನ್ನು ತಾವು ಅರ್ಪಿಸಿಕೊಂಡು ಹುತಾತ್ಮರಾದ ಸಾವಿರಾರು ಮಹನೀಯರ ಸಾಲಿನಲ್ಲಿ ನಿಲ್ಲುತ್ತಾರೆ.
ಬ್ರಿಟೀಷರ ಸರ್ವಾಧಿಕಾರಿ ಧೋರಣೆಯನ್ನು ಕಿತ್ತೊಗೆಯಲು ಪಣ ತೊಟ್ಟು ಭಾರತೀಯರಲ್ಲಿ ಸ್ವಾತಂತ್ರ್ಯದ ಕನಸಿನ ಬೀಜ ಬಿತ್ತಿ, ಸ್ವಾಭಿಮಾನ ಹೋರಾಟದ ಕಿಡಿ ಹೊತ್ತಿಸಿ, ಕ್ರಾಂತಿಯ ಚಳುವಳಿ ರೂಪಿಸಿದ ಸಾವಿರಾರು ಮಹಾತ್ಮರಲ್ಲಿ ಲಾಲ ಲಜಪತರಾಯ್, ಬಾಲಗಂಗಾಧರ ತಿಲಕ್, ಗೋಪಾಲ ಕೃಷ್ಣ ಗೋಕುಲೆ, ಮೌಲಾನ ಅಬ್ದುಲ್ ಕಲಾಂ ಆಜಾದ್, ಸರ್ದಾರ್ ವಲ್ಲಭಬಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ಸರೋಜಿನಿ ನಾಯ್ಡು, ಮುಂತಾದವರು ಒಂದೆಡೆಯಾದರೆ ಮಹಾತ್ಮ ಗಾಂಧೀಜಿಯವರು ಸತ್ಯ ಮತ್ತು ಅಹಿಂಸಾ ಮಾರ್ಗದಲ್ಲಿ ಹೋರಾಡುವ ಮೂಲಕ ರಾಷ್ಟ್ರ ಪಿತರೆನಿಸಿಕೊಂಡರು. ಇವರು ಬ್ರಿಟೀಷರ ವಿರುದ್ಧ ಅಸಹಕಾರ ಚಳುವಳಿ, ಉಪ್ಪಿನ ಸತ್ಯಾಗ್ರಹ, ೧೯೪೨ರ ಭಾರತ ಬಿಟ್ಟು ತೊಲಗಿ ಚಳುವಳಿಗಳ ನಾಯಕತ್ವ ವಹಿಸಿ ಭಾರತೀಯರ ಜನಮಾನಸದಲ್ಲಿ ಚರಿತ್ರಾರ್ಹರಾಗಿ ಉಳಿದಿದ್ದಾರೆ.

ರಾಜ್ಯದಲ್ಲಿ 5 ರೈಲ್ವೆ ಮೇಲ್ಸೇತುವೆ ನಿರ್ಮಾಣ: 350 ಕೋಟಿ ವೆಚ್ಚ: ಸಚಿವ ವಿ.ಸೋಮಣ್ಣ
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಹೆಮ್ಮೆಯ ಕರ್ನಾಟಕದ ಪಾತ್ರವೂ ಮಹತ್ವದ್ದಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಶಿವಪುರದಲ್ಲಿ ೧೯೩೮ ಏಪ್ರಿಲ್ ೧೧ರಲ್ಲಿ ಶಿವಪುರ ಧ್ವಜ ಸತ್ಯಾಗ್ರಹವನ್ನು ಏರ್ಪಡಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಕರೆ ನೀಡಲಾಗಿತ್ತು. ಈ ಹೋರಾಟದ ಮುಂದುವರೆದ ಭಾಗವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ವಿದುರಾಶ್ವತ್ಥದಲ್ಲಿ ೧೯೩೮ರ ಏಪ್ರಿಲ್ ೨೫ರಂದು ಬ್ರಿಟೀಷರು ಮಾಡಿದ ಗೋಲಿಬಾರ್‌ನಲ್ಲಿ ಹಲವಾರು ಸ್ವತಂತ್ರ ಹೋರಾಟಗಾರರು ತಮ್ಮ ಪ್ರಾಣವನ್ನು ತ್ಯಾಗಮಾಡಿದರು. ಈ ಘಟನೆ ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಖ್ಯಾತಿ ಪಡೆದಿದೆ.

ಲಂಡನ್ ನೆನಪಿಸುವ ತುಮಕೂರಿನ ಹೊಸ ಬಸ್ ನಿಲ್ದಾಣ!: ಜನಾಕರ್ಷಣೆ ಎಸ್ಕಲೇಟರ್! ವಿಡಿಯೋ
೧೯೪೨ರ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಸ್ವತಂತ್ರ ಗ್ರಾಮವೆಂದು ಘೋಷಿಸಿಕೊಂಡ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಈಸೂರಿನ ದಂಗೆ, ೧೯೩೮ರಲ್ಲಿ ನನ್ನ ಹೆಮ್ಮೆಯ ಜಿಲ್ಲೆಯಾದ ತುಮಕೂರಿನ ಕುಣಿಗಲ್ ಹಾಗೂ ಮಧುಗಿರಿಯಲ್ಲಿ ಧ್ವಜ ಸತ್ಯಾಗ್ರಹ, ೧೯೩೯ರ ಶಿರಾದಲ್ಲಿ ಅರಣ್ಯ ಸತ್ಯಾಗ್ರಹ, ೧೯೪೨ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ ಈ ಜಿಲ್ಲೆಯ ಟಿ.ಎಂ.ಮಹಂತಯ್ಯ, ಎ.ವಿ.ಆಚಾರ್, ಟಿ. ಅನಂತರಾಮ ಶೆಟ್ಟಿ, ಕೆ.ಎನ್ ನರಸಿಂಹಯ್ಯ, ಕೆ.ಆರ್. ನರಸಿಂಹ ಐಯ್ಯಂಗಾರ್, ಅಪ್ಪಾಜಪ್ಪ, ಜಿ.ಆರ್. ಚಂಗಲಾರಾಧ್ಯ, ಚನ್ನಪ್ಪ, ಟಿ.ಆರ್.ಪುಟ್ಟಯ್ಯ, ಬಿ.ರಾಜಪ್ಪ, ಎಮ್.ವಿ.ರಾಮರಾವ್, ಮುಂತಾದವರು ತುಮಕೂರಿನವರು. ಕೊರಟಗೆರೆಯ ಬಸವರಾಧ್ಯ, ಮಂತ್ರಿ ಚನ್ನಿಗರಾಮಯ್ಯ, ಮಧುಗಿರಿಯ ಮಾಲಿ ಮರಿಯಪ್ಪ ಮತ್ತು ಖಾದ್ರಿ, ಪಾವಗಡದ ಬೂಲಪ್ಪ ಪಿ ರಾಮರಾವ್, ಶಿರಾದ ಗೋವಿಂದಪ್ಪ ರಾಮಪ್ಪ, ಗುಬ್ಬಿಯ ಜಿ.ಹೆಚ್.ಆರ್ ದೇವರು, ಗಂಗಾಧರಪ್ಪ ಗೋಪಾಲಯ್ಯ, ಚಿಕ್ಕನಾಯಕನಹಳ್ಳಿಯ ನಾರಾಯಣ ರಾವ್ ಮತ್ತು ಎನ್.ಎಸ್. ಹನುಮಂತರಾವ್, ತುರುವೇಕೆರೆಯ ಅನಂತರಾಮ ಅಯ್ಯಂಗಾರ್, ಟಿ ಸುಬ್ರಹ್ಮಣ್ಯ, ತಿಪಟೂರಿನ ಅನಿವಾಲದ ನಂಜಪ್ಪ, ಟಿ.ಆರ್. ಮಲ್ಲಪ್ಪ, ಕುಣಿಗಲ್‌ನ ಕರಿಯಪ್ಪ, ಜಿ. ತಮ್ಮಣ್ಣ, ಇನ್ನು ಮುಂತಾದ ಮಹಾತ್ಮರು ಸ್ವಾತಂತ್ರಕ್ಕಾಗಿ ಹೋರಾಡಿ ಜೈಲುವಾಸ ಅನುಭವಿಸಿದ್ದರು ಎಂಬುದು ಚರಿತ್ರೆಯಲ್ಲಿ ದಾಖಲಾಗಿದೆ.

ತುಮಕೂರು: ಜಿಲ್ಲೆಯಲ್ಲಿ ಡೆಂಗ್ಯೂ ಹೆಚ್ಚಳ: ಶಾಲಾ ಮಕ್ಕಳ ಬಗ್ಗೆ ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ
ಸಹಸ್ರ ಸಹಸ್ರ ಭಾರತೀಯರ ತ್ಯಾಗ-ಬಲಿದಾನಗಳ ಮೂಲಕ ಬ್ರಿಟೀಷರ ಆಡಳಿತವನ್ನು ಕೊನೆಗಾಣಿಸಿ ೧೯೪೭ರ ಆಗಸ್ಟ್ ೧೫ರಂದು ಭಾರತ ದೇಶವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸಲಾಯಿತು. ಸ್ವತಂತ್ರ ಭಾರತದ ಪ್ರಧಾನ ಮಂತ್ರಿಯಾಗಿ ಪಂಡಿತ್ ಜವಹಾರ್‌ಲಾಲ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಈ ಅಭೂತಪೂರ್ವ ದಿನವನ್ನು ಅತ್ಯಂತ ಸಂತೋಷ, ಸಂಭ್ರಮ, ಸಡಗರದಿಂದ ೭೮ ವರ್ಷಗಳಿಂದಲೂ ದೇಶಾದ್ಯಂತ ಭಾರತದ ಸ್ವತಂತ್ರ ದಿನಾಚರಣೆಯನ್ನಾಗಿ ಆಚರಿಸುತ್ತಾ ಸ್ವಚ್ಛಂದವಾಗಿ ತ್ರಿವರ್ಣ ಧ್ವಜವನ್ನು ಹಾರಿಸಿ ರಾಷ್ಟ್ರ ಗೀತೆ ಹಾಡಿ ರಾಷ್ಟ್ರ ಪ್ರೇಮವನ್ನು ಮೈಗೂಡಿಸಿಕೊಂಡಿದ್ದೇವೆ.
ಭಾರತದ ಪ್ರತಿ ಪ್ರಜೆಯು ಇಂದು ಶಾಂತಿ, ಅಹಿಂಸೆ, ಸಹನೆ, ಮಾನವೀಯತೆ ಮತ್ತು ಸಹಬಾಳ್ವೆ ಮುಂತಾದ ಮೂಲ ಮಂತ್ರಗಳನ್ನು ಮೈಗೂಡಿಸಿಕೊಂಡು ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸಿ ಶಿಕ್ಷಣ, ವೈದ್ಯಕೀಯ, ತಂತ್ರಜ್ಞಾನ, ಆರ್ಥಿಕತೆ, ಕೃಷಿ, ರಾಜಕೀಯ ಕ್ಷೇತ್ರವೂ ಒಳಗೊಂಡಂತೆ ಹಲವಾರು ಕ್ಷೇತ್ರಗಳ ಅದ್ವಿತೀಯ ಸಾಧನೆಯನ್ನು ಮಾಡುತ್ತಾ, ಬಹುದೊಡ್ಡ ಪ್ರಜಾಪ್ರಭುತ್ವ ಮತ್ತು ಗಣತಂತ್ರದ ವ್ಯವಸ್ಥೆಯನ್ನು ಎತ್ತಿಹಿಡಿಯುತ್ತಾ, ಅಖಂಡ ಭಾರತದ ಸರ್ವ ಪ್ರಜೆಗಳಿಗೂ ವ್ಯಕ್ತಿ ಗೌರವ, ಸ್ವಾತಂತ್ರ್ಯ- ಸಮಾನತೆ, ಸಾಮಾಜಿಕ ನ್ಯಾಯವನ್ನು ವಿಸ್ತರಿಸುತ್ತಾ ಜಗತ್ತೇ ಹೆಮ್ಮೆ ಪಡುವಂತಹ ರೀತಿಯಲ್ಲಿ ಮುಂದುವರೆಯುತ್ತಿರುವ ರಾಷ್ಟ್ರವಾಗಿ ವಿಶ್ವದಲ್ಲಿ ಗುರುತಿಸಿಕೊಂಡಿದೆ.
ಸ್ವತಂತ್ರ ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ಸರ್ಕಾರ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದು ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ ಎಂದರು.

About The Author

You May Also Like

More From Author

+ There are no comments

Add yours