ವಿದೇಶದಲ್ಲಿ ಉನ್ನತ ವ್ಯಾಸಂಗ: ಸಾಲ ಸೌಲಭ್ಯಕ್ಕಾಗಿ ಅರ್ಜಿ ಅಹ್ವಾನ

1 min read

 

ವಿದೇಶದಲ್ಲಿ ಉನ್ನತ ವ್ಯಾಸಂಗ: ಸಾಲ ಸೌಲಭ್ಯಕ್ಕಾಗಿ ಅರ್ಜಿ ಅಹ್ವಾನ

Tumkurnews
ತುಮಕೂರು: ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮವು ವಿದೇಶಿ ಉನ್ನತ ವ್ಯಾಸಂಗಕ್ಕಾಗಿ ನೇರ ಸಾಲದ ಯೋಜನೆಯಡಿ ಸಾಲ ಸೌಲಭ್ಯ ನೀಡಲು ಜಿಲ್ಲೆಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಉಂಡೆ ಕೊಬ್ಬರಿ ಖರೀದಿ: ನಫೆಡ್ ಸಂಸ್ಥೆಯಿಂದ ಏಜೆನ್ಸಿಗಳಿಗೆ ಮರುಪಾವತಿಗೆ ಕೇಂದ್ರಕ್ಕೆ ಮನವಿ
ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ ಜನಾಂಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ೧೮ ರಿಂದ ೩೮ ವರ್ಷದೊಳಗಿನವರಾಗಿದ್ದು, ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಹಿಂದಿನ ವರ್ಷದಲ್ಲಿ ಕನಿಷ್ಟ ಶೇ.೬೦ ಅಂಕ ಹಾಗೂ ವಿದೇಶಿ ವಿಶ್ವ ವಿದ್ಯಾಲಯದಿಂದ ಆಫರ್ ಲೆಟರ್ ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯ ೮ ಲಕ್ಷ ರೂ. ಮೀರಿರಬಾರದು. ಈ ಸಾಲ ಸೌಲಭ್ಯ ಪಡೆಯುವ ಅರ್ಜಿದಾರರು ಸರ್ಕಾರವು ಅಂಗೀಕರಿಸಿದ ಅಲ್ಪಸಂಖ್ಯಾತ ವರ್ಗಗಳ ಪ್ರವರ್ಗ-೧, ೨ಬಿ, ಮತ್ತು ೩ಬಿ ಗುಂಪಿಗೆ ಸೇರಿದವರಾಗಿರಬೇಕು. ಈ ಹಿಂದೆ ನಿಗಮದ ಯೋಜನೆಗಳಲ್ಲಿ ಸಾಲ ಸೌಲಭ್ಯ ಪಡೆದವರಿಗೆ ಮತ್ತೊಮ್ಮೆ ಸಾಲ ಸೌಲಭ್ಯ ಪಡೆಯಲು ಅರ್ಹತೆ ಇರುವುದಿಲ್ಲ. ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಆಸ್ತಿ(ಕಟ್ಟಡ/ಜಮೀನು)ಯನ್ನು ನಿಗಮದ ಹೆಸರಿಗೆ ಅಡಮಾನ ಇಟ್ಟರೆ ಮಾತ್ರ ಸಾಲ ಸೌಲಭ್ಯ ಕಲ್ಪಿಸಲಾಗುವುದು(ಆಸ್ತಿಯ ಮೌಲ್ಯವು ಸಾಲದ ಮೊತ್ತಕ್ಕಿಂತ ಕಡಿಮೆ ಇರಬಾರದು).

ತುಮಕೂರು: ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಂದ ತಪ್ಪು ಮಾಹಿತಿ: ಪರಮೇಶ್ವರ್ ಅಸಮಾಧಾನ
ಅಭ್ಯರ್ಥಿಗಳು ಜಾಲತಾಣ www.kmdconline.karnataka.gov.in ಮೂಲಕ ಆಗಸ್ಟ್ ೩೧ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಮೌಲಾನಾ ಆಜಾದ್ ಭವನ, ಇಂದಿರಾ ಕಾಲೇಜು ಮುಂಭಾಗ, ಉಪ್ಪಾರಹಳ್ಳಿ, ತುಮಕೂರು ಇವರ ಕಚೇರಿ ಅಥವಾ ದೂ.ವಾ.ಸಂ.೦೮೧೬-೨೨೮೧೦೨೩ನ್ನು ಸಂಪರ್ಕಿಸಬೇಕೆಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಮಕೂರು: ತೆಂಗು ಪಾರ್ಕ್ ಸ್ಥಾಪನೆಗೆ ಒಲವು: ಹೂ, ತರಕಾರಿ, ಸೊಪ್ಪು ಬೆಳೆಗೆ ಆರ್ಥಿಕ ಸಹಾಯ

About The Author

You May Also Like

More From Author

+ There are no comments

Add yours