ತುಮಕೂರು: ಜಿಲ್ಲೆಯ ಅಪಘಾತ ಸ್ಥಳಗಳಿವು: ಎಚ್ಚರ

1 min read

 

ರಸ್ತೆ ಅಪಘಾತಗಳು ಹೆಚ್ಚಿದಲ್ಲಿ ಅಧಿಕಾರಿಗಳ ಮೇಲೆ ಕ್ರಮ: ಶುಭ ಕಲ್ಯಾಣ್

Tumkurnews
ತುಮಕೂರು: ಜಿಲ್ಲೆಯಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ರಸ್ತೆ ಅಪಘಾತಗಳು ಸಂಭವಿಸದಂತೆ  ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚಿಸಿದರು.

ತುಮಕೂರು: KSRTC ಹೊಸ ಬಸ್ ನಿಲ್ದಾಣದಲ್ಲಿ ಜನವೋ ಜನ! ವಿಡಿಯೋ

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ  ಸೇರಿದ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯರಸ್ತೆಗಳಲ್ಲಿ ಒಟ್ಟು 41 ಅಪಘಾತ ಸ್ಥಳಗಳನ್ನು ಗುರುತಿಸಲಾಗಿದೆ. ಅಪಘಾತ ಸ್ಥಳಗಳಲ್ಲಿ ಎಚ್ಚರಿಕೆ-ಸೂಚನಾ ಫಲಕಗಳು, ಸ್ಪೀಡ್ ಬ್ರೇಕರ್, ಮಾರ್ಗ ಸೂಚಕಗಳನ್ನು  ಅಳವಡಿಸಿ ಅಪಘಾತ ಪ್ರಮಾಣ ತಗ್ಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಂತರ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ, ಜಿಲ್ಲೆಯ  ರಾಷ್ಟ್ರೀಯ ಹೆದ್ದಾರಿಗಳಲ್ಲಿ  ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಸಮರ್ಪಕ ರೀತಿಯಲ್ಲಿ ನಿರ್ವಹಿಸದ ಕಾರಣ ಹಾಗೂ ವಾಹನ ದಟ್ಟಣೆ ಹೆಚ್ಚಾಗುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ ಎಂದು ತಿಳಿಸಿದರು.
ರಾಜ್ಯದ ವಿವಿಧ ಜಿಲ್ಲೆಯ ಸಾರಿಗೆಗಳು ಜಿಲ್ಲೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಮಾರ್ಗವಾಗಿ ಹೋಗುವುದರಿಂದ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ  ಸರ್ವಿಸ್ ರಸ್ತೆ ಮತ್ತು ಮಾರ್ಗ ಸೂಚಿಗಳನ್ನು ಅಳವಡಿಸಿ ಶೀಘ್ರವಾಗಿ ಕಾಮಗಾರಿಗಳನ್ನು  ಪೂರ್ಣಗೊಳಿಸುವಂತೆ ಸೂಚಿಸಿದರು.

ಉಂಡೆ ಕೊಬ್ಬರಿ ಖರೀದಿ: ನಫೆಡ್ ಸಂಸ್ಥೆಯಿಂದ ಏಜೆನ್ಸಿಗಳಿಗೆ ಮರುಪಾವತಿಗೆ ಕೇಂದ್ರಕ್ಕೆ ಮನವಿ
ಸಭೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತೆ ಅಶ್ವಿಜ, ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಅಪಘಾತ ಸ್ಥಳಗಳು: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 48ರ ಕ್ಯಾತ್ಸಂದ್ರ ವ್ಯಾಪ್ತಿ ಚಿಕ್ಕಹಳ್ಳಿ, ಹಿರೇಹಳ್ಳಿ, ಪಂಡಿತನಹಳ್ಳಿ ಗೇಟ್, ಮಂಚಲಕುಪ್ಪೆ ವೃತ್ತ, ತುಮಕೂರು ಗ್ರಾಮಾಂತರ ವ್ಯಾಪ್ತಿ ಊರುಕೆರೆ ಜೈನ್ ಪಬ್ಲಿಕ್ ಸ್ಕೂಲ್, ಕೋರಾ ವ್ಯಾಪ್ತಿ ಅಜ್ಜಗೊಂಡನಹಳ್ಳಿ ವೃತ್ತ, ನೆಲಹಾಳ್ ವೃತ್ತ, ಕಳ್ಳಂಬೆಳ್ಳ ವ್ಯಾಪ್ತಿ ಜೋಗಿ ಹಳ್ಳಿ, ದೊಡ್ಡ ಆಲದ ಮರ, ಬಾಲೇನಹಳ್ಳಿ ಗೇಟ್, ಶಿರಾ ವ್ಯಾಪ್ತಿ ಶಿವಾಜಿ ನಗರ, ಮಾನಂಗಿ ತಾಂಡಾ ಗೇಟ್, ತಾವರೆಕೆರೆ ವ್ಯಾಪ್ತಿ ದ್ವಾರಾಳು ಬ್ರಿಡ್ಜ್, ತಾವರೆಕೆರೆ; ರಾಷ್ಟ್ರೀಯ ಹೆದ್ದಾರಿ 73ರ ತುಮಕೂರು ಗ್ರಾಮಾಂತರ ವ್ಯಾಪ್ತಿ ಹೆಗ್ಗೆರೆ ಬಸ್ ನಿಲ್ದಾಣ, ತಿಪಟೂರು ಪಟ್ಟಣ ವ್ಯಾಪ್ತಿ ಬಂಡಿಹಳ್ಳಿ ಗೇಟ್-ರೇಣುಕಾ ಡಾಬ; ರಾಷ್ಟ್ರೀಯ ಹೆದ್ದಾರಿ 75ರ ಕುಣಿಗಲ್ ವ್ಯಾಪ್ತಿ ಅಂಚೆಪಾಳ್ಯ ಸರ್ಕಲ್, ಬೇಗೂರು ಸೇತುವೆ, ಹೇರೂರು ಸೇತುವೆ, ಉರ್ಕೇಹಳ್ಳಿ, ಅಮೃತೂರು ವ್ಯಾಪ್ತಿ ನಾಗೇಗೌಡನಪಾಳ್ಯ ಗೇಟ್, ತಿಪ್ಪೂರು ಗೇಟ್, ಮಾಗಡಿ ಪಾಳ್ಯ ಗೇಟ್, ಹೇಮಾವತಿ ಕ್ರಾಸ್, ಚಾಕೇನಹಳ್ಳಿ; ರಾಷ್ಟ್ರೀಯ ಹೆದ್ದಾರಿ 150(ಎ)ರ ತುರುವೇಕೆರೆ ವ್ಯಾಪ್ತಿ ಜೋಡಗಟ್ಟೆ; ರಾಜ್ಯ ಹೆದ್ದಾರಿ 33ರ ಹುಲಿಯೂರು ದುರ್ಗ ವ್ಯಾಪ್ತಿ ಬಿ.ಹೊಸಹಳ್ಳಿ-ಡಿ.ಹೊಸಹಳ್ಳಿ ಗೊಲ್ಲರಹಟ್ಟಿ, ಕೊಡವಂತಿ ಜಂಕ್ಷನ್, ಹಳೆವೂರು ಜಂಕ್ಷನ್, ಐಬಿ ಸರ್ಕಲ್, ಕುಣಿಗಲ್ ವ್ಯಾಪ್ತಿ ಕುರುಡಿಹಳ್ಳಿ, ಜಂಪೇನಹಳ್ಳಿ ಕ್ರಾಸ್, ಜಟ್ಟಿ ಅಗ್ರಹಾರ, ಥರಟಿ; ರಾಜ್ಯ ಹೆದ್ದಾರಿ 3ರ ಮಧುಗಿರಿ ವ್ಯಾಪ್ತಿ ಕೆರೆಗಳ ಪಾಳ್ಯ ಬಸ್ ನಿಲ್ದಾಣದ ಸುತ್ತ ಮುತ್ತ, ಮಿಡಿಗೇಶಿ ವ್ಯಾಪ್ತಿ ಹೊಸಕೆರೆ, ಪಾವಗಡ ವ್ಯಾಪ್ತಿ ರಾಜವಂತಿ ಕೆರೆ, ನಾಗಲಮಡಿಕೆ ಕ್ರಾಸ್, ಪಳವಳ್ಳಿ ಕೆರೆ, ಕೊರಟಗೆರೆ ವ್ಯಾಪ್ತಿ ತುಂಬಾಡಿ, ಜಿ.ನಾಗೇನಹಳ್ಳಿ.

ತುಮಕೂರು: ಜಿಲ್ಲೆಯಲ್ಲಿ ಡೆಂಗ್ಯೂ ಹೆಚ್ಚಳ: ಶಾಲಾ ಮಕ್ಕಳ ಬಗ್ಗೆ ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ

About The Author

You May Also Like

More From Author

+ There are no comments

Add yours