ತುಮಕೂರು: ನಿವೇಶನ ರಹಿತರಿಗೆ ಸಿಹಿ ಸುದ್ದಿ! 1450 ಮನೆಗಳ ಹಂಚಿಕೆಗೆ ಪ್ಲಾನ್!

1 min read

 

ಸಚಿವ ವಿ.ಸೋಮಣ್ಣ ಆದೇಶ: 1450 ಮನೆಗಳ ಹಂಚಿಕೆ: ಶಾಸಕ ಜ್ಯೋತಿಗಣೇಶ್

ಪೌರಕಾರ್ಮಿಕರಿಗೆ ವಸತಿ ವಂಚಿತ ಅಲೆಮಾರಿಗಳಿಗೆ ಶೀಘ್ರ ಮನೆಗಳ ನಿರ್ಮಾಣ: ಶಾಸಕ ಜಿ.ಬಿ.ಜ್ಯೋತಿಗಣೇಶ್

Tumkurnews
ತುಮಕೂರು: ವಿ.ಸೋಮಣ್ಣ ಅವರ ಆದೇಶದಂತೆ ತುಮಕೂರು ನಗರದಲ್ಲಿ ನಿವೇಶನ ರಹಿತರಿಗೆ 1450 ಮನೆಗಳ ಹಂಚಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಶಾಸಕ ಜಿ.ಬಿ ಜ್ಯೋತಿಗಣೇಶ್ ತಿಳಿಸಿದ್ದಾರೆ.
2022ರಲ್ಲಿ ಅಂದಿನ ವಸತಿ ಸಚಿವರಾಗಿದ್ದ ವಿ.ಸೋಮಣ್ಣ ಅವರ ಆದೇಶದ ಮೇರೆಗೆ ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ 1450 ಮನೆಗಳನ್ನು ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ನೀಡಲಾಗಿತ್ತು.

ತುಮಕೂರು: ನಿವೇಶನ ರಹಿತರಿಗೆ ಶುಭ ಸುದ್ದಿ: ಜಿಲ್ಲಾಡಳಿತದಿಂದ ಮಹತ್ವದ ಹೆಜ್ಜೆ
ಈ ಯೋಜನೆಯಡಿ ಪೌರಕಾರ್ಮಿಕರಿಗೆ ಮತ್ತು ತುಮಕೂರು ನಗರದ ಕುಮುಟಯ್ಯ ಬಡಾವಣೆ ಪಾರ್ಕ್‌ನಲ್ಲಿ ವಾಸಿಸುತ್ತಿರುವ ಅಲೆಮಾರಿಗಳಿಗೆ ಹಾಗೂ ಅಮಾನಿಕೆರೆಯ ಕೋಡಿಹಳ್ಳದಲ್ಲಿರುವ ವಸತಿ ವಂಚಿತರಿಗೆ ವಸತಿ ವ್ಯವಸ್ಥೆ ಮಾಡಲು ಶಾಸಕರು ಸರ್ಕಾರಿ ಭೂಮಿಯನ್ನು ಗುರುತಿಸುವಂತೆ ಸೂಚನೆ ನೀಡಿದ್ದರು.
ಆಗ ವಾರ್ಡ್ ನಂ.11ರ ಹೊನ್ನೇನಹಳ್ಳಿ ಗ್ರಾಮದ ಸರ್ವೆ ನಂ.44ರಲ್ಲಿ 1 ಎಕರೆ 39 ಗುಂಟೆ ಸರ್ಕಾರಿ ಜಾಗವಿದ್ದು, ಇಲ್ಲಿ ಮನೆಯನ್ನು ನಿರ್ಮಿಸಬಹುದಾಗಿದೆ ಎಂದು ಸದರಿ ವಾರ್ಡ್ ಮಹಾನಗರಪಾಲಿಕೆ ಸದಸ್ಯೆ ನಳಿನ ಇಂದ್ರಕುಮಾರ್ ಅವರು ನಗರ ಶಾಸಕರ ಗಮನಕ್ಕೆ ತಂದಿದ್ದರು.

ತುಮಕೂರು: KSRTC ಹೊಸ ಬಸ್ ನಿಲ್ದಾಣದಲ್ಲಿ ಜನವೋ ಜನ! ವಿಡಿಯೋ
ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ 194 ಮನೆಗಳನ್ನು ನಿರ್ಮಾಣ ಮಾಡಲು ಯೋಜನೆಯನ್ನು ರೂಪಿಸಿ ಕೆಲಸ ಪ್ರಾರಂಭವಾಗಿದ್ದು, ಅತೀ ಶೀಘ್ರದಲ್ಲಿ ಮನೆಗಳ ನಿರ್ಮಾಣ ಮಾಡಲಾಗುವುದು. ಮನೆಗಳ ನಿರ್ಮಾಣದ ನಂತರವೇ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಶಾಸಕ ಜಿ.ಬಿ ಜ್ಯೋತಿಗಣೇಶ್ ತಿಳಿಸಿದ್ದಾರೆ.
ಮನೆ ಸಂಬಂಧವಾಗಿ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ್ ಅವರ ಗಮನಕ್ಕೆ ತಂದು, ಅರ್ಹ ಫಲಾನುಭವಿಗಳ ಪಟ್ಟಿಯನ್ನು ಆಶ್ರಯ ಸಮಿತಿಯ ಸಭೆಯಲ್ಲಿ ಅನುಮೋದನೆಗೊಂಡ ನಂತರ ಮನೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುವುದು.

ತುಮಕೂರು: ಕಿಕ್ಕಿರಿದು ತುಂಬಿದ್ದ ಬಸ್ ನಿಲ್ದಾಣ ಹತ್ತೇ ನಿಮಿಷದಲ್ಲಿ ಖಾಲಿ! ವಿಡಿಯೋ
ಈ ಮಧ್ಯೆ ಅರ್ಜಿದಾರರು, ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳು ನಾವೇ ಮನೆಯನ್ನು ಕೊಡಿಸುವುದಾಗಿ ಆಮಿಷ ಒಡ್ಡಿದರೆ ಹಾಗೂ ಮುಗ್ದ ನಾಗರೀಕರಿಂದ ಹಣ ವಸೂಲಿ ಮಾಡಿದರೆ ದಿಕ್ಕು ತಪ್ಪಿಸುವ ಕಾರ್ಯಗಳು ಕಂಡು ಬಂದರೆ, ಪೊಲೀಸ್ ಠಾಣೆಗೆ ದೂರು ನೀಡಬಹುದು ಹಾಗೂ ಸಾರ್ವಜನಿಕರು ನೇರವಾಗಿ ಶಾಸಕರ ಕಚೇರಿಯನ್ನು ಸಂಪರ್ಕಿಸಬಹದಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆ: ಸಮಸ್ಯೆ ಪರಿಹಾರಕ್ಕೆ ಸಹಾಯವಾಣಿ ಸ್ಥಾಪನೆ

About The Author

You May Also Like

More From Author

+ There are no comments

Add yours