ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ: ಪ್ರಭು ಜಿ
Tumkurnews
ತುಮಕೂರು: ಆರೋಗ್ಯ ತುಮಕೂರು ಅಭಿಯಾನದ ಅಂಗವಾಗಿ ಜಿಲ್ಲಾ ಪಂಚಾಯತಿ ವತಿಯಿಂದ ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಜಿ. ತಿಳಿಸಿದರು.
ತುಮಕೂರು: ಶಿಕ್ಷಕರಿಗೆ ಜಿಪಂ ಸಿಇಒ ತರಾಟೆ
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ಎನ್ಜಿಒ ಪ್ರತಿನಿಧಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಆರೋಗ್ಯ ತುಮಕೂರು ಅಭಿಯಾನದಡಿ ಉಚಿತ ಕಣ್ಣಿನ ತಪಾಸಣಾ ಶಿಬಿರಗಳನ್ನು ಆಯೋಜನೆ ಮಾಡಲಾಗಿದ್ದು, 5500 ಜನರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇರುವುದು ಕಂಡು ಬಂದಿದ್ದು, ಆಗಸ್ಟ್ ಮಾಹೆಯಲ್ಲಿ ಶಿಬಿರಗಳನ್ನು ಆಯೋಜಿಸುವ ಮೂಲಕ 1000 ಮಂದಿಯ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆರೋಗ್ಯ ತುಮಕೂರು ಅಭಿಯಾನದ ಭಾಗವಾಗಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಈಗಾಗಲೇ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಅಭಿಯಾನದಡಿ ಕಳೆದ ಡಿಸೆಂಬರ್ನಿಂದ ಈವರೆಗೆ 5,11,026 ಜನರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಈ ಪೈಕಿ 30 ವರ್ಷ ಮೇಲ್ಪಟ್ಟ 3,75,695 ಜನರನ್ನು ತಪಾಸಣೆ ಮಾಡಲಾಗಿದೆ ಎಂದು ಹೇಳಿದರು.
ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ: ಇಲಾಖೆಗಳಿಗೆ ಜವಾಬ್ದಾರಿ ಹಂಚಿದ ಜಿಲ್ಲಾಧಿಕಾರಿ
ಅಭಿಯಾನಡಿ 31,066 ಮಂದಿಯಲ್ಲಿ ಮಧುಮೇಹ ಹಾಗೂ 37,965 ಜನರಲ್ಲಿ ಅಧಿಕ ರಕ್ತದೊತ್ತಡ ಇರುವುದು ಕಂಡುಬಂದಿದೆ. ಸಂಶಯಾತ್ಮಕವಾಗಿ 182 ಬಾಯಿ ಕ್ಯಾನ್ಸರ್, 67 ಸ್ತನ ಕ್ಯಾನ್ಸರ್, 79 ಗರ್ಭಕಂಠ ಕ್ಯಾನ್ಸರ್, 5555 ಕಣ್ಣಿನ ಪೊರೆ, 2978 ದೃಷ್ಠಿದೋಷ, 570 ರಕ್ತ ಹೀನತೆ, 849 (ಕಫ ಸಂಗ್ರಹಿಸಿರುವ) ಕ್ಷಯ, 974 ದಂತ ಜೋಡಣೆ, 187 ಕುಷ್ಠ ರೋಗಿಗಳ ಸಂಖ್ಯೆ ಇರುವುದು ತಪಾಸಣೆಯಲ್ಲಿ ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.
ಗೃಹಲಕ್ಷ್ಮಿ ಯೋಜನೆ: ಸಮಸ್ಯೆ ಪರಿಹಾರಕ್ಕೆ ಸಹಾಯವಾಣಿ ಸ್ಥಾಪನೆ
ಶ್ರದ್ಧಾ ಐ ಕೇರ್, ಮೋದಿ ಕಣ್ಣಿನ ಆಸ್ಪತ್ರೆ, ಶಂಕರ್, ಸಿದ್ದಗಂಗಾ, ಶ್ರೀದೇವಿ, ಸಿದ್ಧಾರ್ಥ, ವೆಸ್ಟ್ ಲಯನ್ಸ್, ಶಾರದ ದೇವಿ, ಎಂ ಎಸ್ ರಾಮಯ್ಯ, ಕಿಮ್ಸ್, ಏಮ್ಸ್, ನೇತ್ರದೀಪ್ ಸೇರಿ ಒಟ್ಟು 13 ಎನ್ಜಿಒ ಪ್ರತಿನಿಧಿಗಳು ಸೇರಿದಂತೆ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
+ There are no comments
Add yours