ಜಿಲ್ಲೆಗೆ ಹೇಮಾವತಿ ನೀರು: ಸಾರ್ವಜನಿಕರು ಎಚ್ಚರಿಕೆಯಿಂದಿರಲು ಡಿಸಿ ಮನವಿ

1 min read

 

ಜಿಲ್ಲೆಗೆ ಹೇಮಾವತಿ ನೀರು: ಸಾರ್ವಜನಿಕರು ಎಚ್ಚರಿಕೆಯಿಂದಿರಲು ಡಿಸಿ ಮನವಿ

Tumkurnews
ತುಮಕೂರು: ಹೇಮಾವತಿ ಜಲಾಶಯದಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ ಹಾಗೂ ಕೆರೆ ಕೆಟ್ಟೆಗಳನ್ನು ತುಂಬಿಸಲು ನೀರು ಹರಿಸಲಾಗಿದ್ದು, ಇಂದು ಮಧ್ಯಾಹ್ನ 3 ಗಂಟೆಗೆ ತುಮಕೂರು ಶಾಖಾ ಕಾಲುವೆಗೆ ನೀರು ಹರಿದಿದ್ದು, ತಿಪಟೂರು ತಾಲ್ಲೂಕು ಗಂಗನಘಟ್ಟವನ್ನು ತಲುಪಿದೆ.

ತುಮಕೂರು: ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ: ತೀವ್ರ ತರಾಟೆ
ಜಲಾಶಯದ ಒಳಹರಿವಿನ ಪ್ರಮಾಣ ಯಾವುದೇ ಸಮಯದಲ್ಲಾದರೂ ಏರಿಕೆಯಾಗುವ ಸಂಭವವಿದ್ದು, ಹೆಚ್ಚುವರಿ ನೀರನ್ನು ನಾಲೆಗೆ ಬಿಡುವುದರಿಂದ ಸಾರ್ವಜನಿಕರು ನಾಲೆಯ ಅಕ್ಕ-ಪಕ್ಕ ಸುಳಿದಾಡಬಾರದು ಹಾಗೂ ಈಜಲು, ಜಾನುವಾರುಗಳಿಗೆ ನೀರು ಕುಡಿಸಲು, ಬಟ್ಟೆ ಒಗೆಯಲು, ಮತ್ತಿತರ ಕಾರಣಗಳಿಗಾಗಿ ನಾಲೆ ಬಳಿಗೆ ಹೋಗಬಾರದೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ ಮಾಡಿದ್ದಾರೆ.

ಗೃಹಲಕ್ಷ್ಮಿ ಯೋಜನೆ: ಸಮಸ್ಯೆ ಪರಿಹಾರಕ್ಕೆ ಸಹಾಯವಾಣಿ ಸ್ಥಾಪನೆ
ಜಿಲ್ಲೆಯ ಹೇಮಾವತಿ ಯೋಜನಾ ವ್ಯಾಪ್ತಿಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ನೀರು ಪೋಲಾಗದಂತೆ ತುರ್ತು ಕ್ರಮಗಳನ್ನು ಕೈಗೊಂಡು ಸಾರ್ವಜನಿಕರು ಮತ್ತು ರೈತರಿಗೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಸೂಕ್ತ ತಿಳುವಳಿಕೆ ನೀಡಬೇಕು. ಸುಗಮ ನೀರು ನಿರ್ವಹಣೆ ಸಂಬಂಧ ಯೋಜನಾ ವ್ಯಾಪ್ತಿಯ ಜನರು ಹಾಗೂ ಅಚ್ಚುಕಟ್ಟುದಾರರು ಇಲಾಖಾಧಿಕಾರಿಗಳೊಂದಿಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ತುಮಕೂರು: ಮಕ್ಕಳು ಕಲಿಕೆಯಲ್ಲಿ ಹಿಂದುಳಿದರೆ ಶಿಕ್ಷಕರ ವೇತನ, ಬಡ್ತಿ ಕಟ್!

 

About The Author

You May Also Like

More From Author

+ There are no comments

Add yours