ರಾಜ್ಯದಲ್ಲಿ 5 ರೈಲ್ವೆ ಮೇಲ್ಸೇತುವೆ ನಿರ್ಮಾಣ: 350 ಕೋಟಿ ವೆಚ್ಚ: ಸಚಿವ ವಿ.ಸೋಮಣ್ಣ

1 min read

 

ಸಿದ್ದಗಂಗಾ ಮಠಕ್ಕೆ ಸಚಿವ ಸೋಮಣ್ಣ ಭೇಟಿ

Tumkurnews
ತುಮಕೂರು: ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ದಂಪತಿ ತಮ್ಮ ಹುಟ್ಟುಹಬ್ಬದ ಅಂಗವಾಗಿ ಇಂದು ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದರು.

ಕೊಬ್ಬರಿ ಬೆಳೆಗಾರರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸಚಿವ ವಿ ಸೋಮಣ್ಣ
ಶ್ರೀಗಳೊಂದಿಗೆ ಕೆಲ ಸಮಯ ಸಮಾಲೋಚನೆ ನಡೆಸಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಟ್ಟುಹಬ್ಬದ ದಿನದಂದ ಶ್ರೀ ಮಠಕ್ಕೆ ಬಂದು ಆಶಿರ್ವಾದ ಪಡೆದಿದ್ದೇನೆ. ಪಕ್ಷ ನನಗೆ ಕೊಟ್ಟಿರುವ ಜವಾಬ್ದಾರಿ ಖುಷಿ ತಂದಿದೆ. ವರಿಷ್ಠರು ಕೊಡುತ್ತಿರುವ ಸಹಕಾರ ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ನೀಡಿದೆ ಎಂದರು.

ತುಮಕೂರು: ರೈಲು ಹಳಿಗೆ ತಲೆ ಇಟ್ಟು ಪೊಲೀಸ್ ಆತ್ಮಹತ್ಯೆ
ದೇಶದ ಪ್ರಧಾನಿ ನರೇಂದ್ರ ಮೋದಿಯವರು ನನಗೆ ಟ್ವೀಟ್ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಆ ಟ್ವಿಟ್ ಓದಿದರೆ ನಿಜಕ್ಕೂ ಖುಷಿಯಾಗುತ್ತದೆ. ದೇಶ ಮೊದಲು ಎನ್ನುವ ಅವರ ಹೇಳಿಕೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಎಲ್ಲದಕ್ಕಿಂತ ದೊಡ್ಡದ್ದು ದೇಶ ಎನ್ನುವುದು. ಅವಕಾಶ ಸಿಕ್ಕಿ, ನನ್ನ ಸಂಪುಟದಲ್ಲಿ ನೀವು ಇದ್ದೀರಾ, ನಿಮಗೆ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯ ಕೆಲಸವನ್ನು ದೇಶಕ್ಕಾಗಿ ಮಾಡಿ, ಈ ದೇಶದ ಮುಂದಿನ ಪೀಳಿಗೆಗೆ ಏನಾದರು ಕೊಡುಗೆ ಕೊಡಿ ಎಂದು ಟ್ವಿಟ್ ಮಾಡಿದ್ದಾರೆ ಎಂದು ಸಚಿವ ಸೋಮಣ್ಣ ಹೇಳಿದರು.

ಗೃಹಲಕ್ಷ್ಮಿ ಯೋಜನೆ: ಸಮಸ್ಯೆ ಪರಿಹಾರಕ್ಕೆ ಸಹಾಯವಾಣಿ ಸ್ಥಾಪನೆ
ಗೃಹ ಸಚಿವ ಅಮಿತ್ ಶಾ ಅವರು ಕೂಡಾ ಪೋನ್ ಮಾಡಿ ಶುಭಾಶಯ ಕೋರಿದರು. ಪೋನ್ ಮಾಡಿದಾಗ ನಿಮಗೆ 73 ವರ್ಷನಾ ಅಂತ ಕೇಳಿದರು. ನನಗೆ 73 ವರ್ಷ ಆಗಿರೋದು ಅವರಿಗೆ ಆಶ್ವರ್ಯ, ನಾನು ಒಳ್ಳೆಯ ಕೆಲಸ ಮಾಡುತ್ತೀನಿ ಎನ್ನುವ ನಂಬಿಕೆ ಅವರಿಗಿದೆ. ಅವರ ನಂಬಿಕೆಗೆ ಪೂರಕವಾಗಿ ನಾನು ಕೆಲಸ ಮಾಡಿ ತೋರಿಸುತ್ತೇನೆ ಎಂದರು.
ಈಗ ಮಳೆಗಾಲ ಆಗಿರುವುದರಿಂದ ರೈಲುಗಳ ಸಂಚಾರದಲ್ಲಿ ಸ್ವಲ್ಪ ವಿಳಂಬ ಆಗುತ್ತಿದೆ. ಎಲ್ಲಾ ರೈಲುಗಳ ಪ್ರಯಾಣದಲ್ಲಿ ವಿಳಂಬ ಆಗಿಲ್ಲ. ಒಂದು ಟ್ರ್ಯಾಕ್ ಮೇಲೆ ಒಂದೇ ಟ್ರೈನ್ ಹೋಗೋಕೆ ಮಾತ್ರ ಆಗೋದು. ಹಾಗಾಗಿ ರೈಲ್ವೆ ಸಂಚಾರದ ವೇಳಾಪಟ್ಟಿಯಲ್ಲಿ ವ್ಯತ್ಯಾಸ ಆಗಿದೆ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಉಚಿತ ಲ್ಯಾಪ್ ಟಾಪ್’ಗೆ ಅರ್ಜಿ ಆಹ್ವಾನ
ಮಳೆಗಾಲ ಆಗಿರುವುದರಿಂದ ತಾಂತ್ರಿಕವಾಗಿ ಸಮಸ್ಯೆ ಆಗಿದೆ ಅಷ್ಟೆ. ಯಾವುದೇ ರೀತಿಯ ಸಮಸ್ಯೆ ಆಗಬಾರದು ಎಂದು ಅಧಿಕಾರಿಗಳು ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರ ಕೊಬ್ಬರಿ ಖರೀದಿಯನ್ನು ಮೂರೇ ಮೂರು ಜಿಲ್ಲೆಗೆ ಸೀಮಿತಗೊಳಿಸಿತ್ತು. ನಾನು ಸ್ವತಃ ಕೃಷಿ ಇಲಾಖೆ ಸಚಿವರು, ಸಹಕಾರ ಸಚಿವರು ಹಾಗೂ ಕಾರ್ಯದರ್ಶಿ ಅಜಯ್ ನಾಗಭೂಷಣ್‍ಗೆ ದೂರವಾಣಿ ಕರೆ ಮಾಡಿ ಮಾತನಾಡಿ ಮತ್ತೆ 7 ಜಿಲ್ಲೆಗಳನ್ನು ಸೇರಿಸಿ ಹೆಚ್ಚುವರಿ ಕೊಬ್ಬರಿ ಖರೀದಿಗೆ ಆದೇಶ ಮಾಡಿಸಲಾಗಿದೆ ಎಂದು ಹೇಳಿದರು.

ಶಿಷ್ಯ ವೇತನಕ್ಕಾಗಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ರಾಜ್ಯದಲ್ಲಿ 5 ರೈಲ್ವೆ ಮೇಲ್ಸೇತುವೆ ನಿರ್ಮಾಣ ಯೋಜನೆಗೆ ಕೇಂದ್ರ ಸರ್ಕಾರ ಸಮ್ಮತಿಸಿದ್ದು, 350 ಕೋಟಿ ರೂ.ಗಳನ್ನು ಈ ಕಾರ್ಯಕ್ಕೆ ಭರಿಸಲಿದೆ. ಈ ಹಿಂದಿನ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಶೇ.50 ರಷ್ಟು ಹಣ ಕೊಡಬೇಕಾಗುತ್ತದೆ. ಆದರೆ ಈಗ ಕೊಡುತ್ತದೋ, ಬಿಡುತ್ತದೋ ನನಗೆ ಗೊತ್ತಿಲ್ಲ ಎಂದು ಅವರು ಮಾರ್ಮಿಕವಾಗಿ ನುಡಿದರು.
ಈ ಸಂದರ್ಭದಲ್ಲಿ ಶಾಸಕ ಬಿ. ಸುರೇಶ್‍ಗೌಡ, ಜಿ.ಬಿ. ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ಭೈರಣ್ಣ ದಿಲೀಪ್ ಗ್ಯಾಸ್ ಬಾಬು ಮತ್ತಿತರರು ಉಪಸ್ಥಿತರಿದ್ದರು.

ಸೈಬರ್ ಅಪರಾಧಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿವೆ: ಗೃಹ ಸಚಿವ ಪರಮೇಶ್ವರ್

About The Author

You May Also Like

More From Author

+ There are no comments

Add yours