ತುಮಕೂರು: ಹೇಮಾವತಿ ನಾಲೆಗೆ ನೀರು: ಸಾರ್ವಜನಿಕರಿಗೆ ಡಿಸಿ ಮನವಿ

1 min read

 

ಹೇಮಾವತಿ ನಾಲೆಗೆ ನೀರು: ಸಾರ್ವಜನಿಕರು ಎಚ್ಚರಿಕೆಯಿಂದಿರಲು ಜಿಲ್ಲಾಧಿಕಾರಿ ಮನವಿ

Tumkurnews
ತುಮಕೂರು: ಹೇಮಾವತಿ ಜಲಾಶಯದಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ ಹಾಗೂ ಕೆರೆ ಕೆಟ್ಟೆಗಳನ್ನು ತುಂಬಿಸಲು ನೀರು ಹರಿಸಲಾಗಿದ್ದು, ಕೆಲವೇ ದಿನಗಳಲ್ಲಿ ಜಿಲ್ಲೆಯ ಹೇಮಾವತಿ ನಾಲೆಗಳಿಗೆ ಹರಿಯಲಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.

ಉಚಿತ ಲ್ಯಾಪ್ ಟಾಪ್’ಗೆ ಅರ್ಜಿ ಆಹ್ವಾನ
ಜಲಾಶಯದ ಒಳಹರಿವಿನ ಪ್ರಮಾಣ ಯಾವುದೇ ಸಮಯದಲ್ಲಾದರೂ ಏರಿಕೆಯಾಗುವ ಸಂಭವವಿದ್ದು, ಹೆಚ್ಚುವರಿ ನೀರನ್ನು ನಾಲೆಗೆ ಬಿಡುವುದರಿಂದ ಸಾರ್ವಜನಿಕರು ನಾಲೆಯ ಅಕ್ಕ-ಪಕ್ಕ ಸುಳಿದಾಡಬಾರದು ಹಾಗೂ ಈಜಲು, ಜಾನುವಾರುಗಳಿಗೆ ನೀರು ಕುಡಿಸಲು, ಬಟ್ಟೆ ಒಗೆಯಲು, ಮತ್ತಿತರ ಕಾರಣಗಳಿಗಾಗಿ ನಾಲೆ ಬಳಿಗೆ ಹೋಗಬಾರದೆಂದು ಅವರು ಮನವಿ ಮಾಡಿದ್ದಾರೆ.
ಹೇಮಾವತಿ ಜಲಾಶಯದಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯವು ಜುಲೈ 18ರಂದು 28.66 ಟಿಎಂಸಿ.ಗಳಷ್ಟಿದ್ದು, ಹೇಮಾವತಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಬರುವ ನೀರಿನ ಒಳಹರಿವು ಏರಿಕೆಯಾಗಿ ಜಲಾಶಯ ತುಂಬುವ ಸಾಧ್ಯತೆಯಿರುತ್ತದೆ.

ಶಿರಾ: ಜಿಲ್ಲಾಧಿಕಾರಿ ಶುಭಕಲ್ಯಾಣ್ ಅನಿರೀಕ್ಷಿತ ಭೇಟಿ: ಅಧಿಕಾರಿಗಳು ತಬ್ಬಿಬ್ಬು
ಈ ಹಿನ್ನೆಲೆಯಲ್ಲಿ ಹೇಮಾವತಿ ಜಲಾಶಯದಿಂದ ನದಿ ಮತ್ತ ಯೋಜನಾ ವ್ಯಾಪ್ತಿಯ ಎಲ್ಲಾ ನಾಲೆಗಳಿಂದ ಜುಲೈ 19ರಿಂದ ನೀರು ಹರಿಸಲಾಗುವುದರಿಂದ ಯೋಜನಾ ವ್ಯಾಪ್ತಿಯಲ್ಲಿರುವ ಎಲ್ಲಾ ಅಧಿಕಾರಿಗಳು ನೀರು ಪೋಲಾಗದಂತೆ ತುರ್ತು ಕ್ರಮಗಳನ್ನು ಕೈಗೊಂಡು ಸಾರ್ವಜನಿಕರು ಮತ್ತು ರೈತರಿಗೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಸೂಕ್ತ ತಿಳುವಳಿಕೆ ನೀಡಬೇಕು.
ಸುಗಮ ನೀರು ನಿರ್ವಹಣೆ ಸಂಬಂಧ ಯೋಜನಾ ವ್ಯಾಪ್ತಿಯ ಜನರು ಹಾಗೂ ಅಚ್ಚುಕಟ್ಟುದಾರರು ಇಲಾಖಾಧಿಕಾರಿಗಳೊಂದಿಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಕೊಬ್ಬರಿ ಬೆಳೆಗಾರರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸಚಿವ ವಿ ಸೋಮಣ್ಣ

About The Author

You May Also Like

More From Author

+ There are no comments

Add yours