ಕೊಬ್ಬರಿ ಬೆಳೆಗಾರರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸಚಿವ ವಿ ಸೋಮಣ್ಣ
Tumkurnews
ತುಮಕೂರು: ಕೊಬ್ಬರಿ ಬೆಳೆಗಾರ ರೈತರಿಗೆ ಕೇಂದ್ರ ಸಚಿವ ವಿ. ಸೋಮಣ್ಣ ಸಿಹಿ ಸುದ್ದಿ ನೀಡಿದ್ದಾರೆ.
2024ನೇ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರ ನೀಡಿದ್ದ 2,999 ಮೆ.ಟನ್ ಖರೀದಿ ಮಿತಿಯಲ್ಲಿ ರಾಜ್ಯ ಸರ್ಕಾರವು ಕೇವಲ ದಕ್ಷಿಣ ಕನ್ನಡ, ಉಡುಪಿ ಹಾಗೂ ಹಾಸನ ಜಿಲ್ಲೆಗಳಿಂದ ಮಾತ್ರ ಖರೀದಿ ಮಾಡಿತ್ತು. ಇದರಿಂದಾಗಿ ಅತಿಹೆಚ್ಚು ಕೊಬ್ಬರಿ ಬೆಳೆಯುವ ಜಿಲ್ಲೆಗಳ ರೈತರು ಸಂಕಷ್ಟಕ್ಕೆ ಸಿಲುಕಿದ್ದರು.
ತುಮಕೂರು: ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಅಭಿನಂದನಾ ಸಮಾರಂಭ
ಇದನ್ನು ಮನಗಂಡ ಸಂಸದ ವಿ. ಸೋಮಣ್ಣ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ರಾಜ್ಯದ ಕೊಬ್ಬರಿ ಖರೀದಿ ಮಿತಿಯನ್ನು 10,000 ಮೆ.ಟನ್ʼಗೆ ಹೆಚ್ಚಿಸಿದ್ದಾರೆ.
ಸದರಿ ಈ ಆದೇಶದಿಂದ ತುಮಕೂರು, ಮಂಡ್ಯ, ರಾಮನಗರ, ಮೈಸೂರು, ಚಿಕ್ಕಮಗಳೂರು, ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲೆಗಳ ಕೊಬ್ಬರಿ ಬೆಳೆಗಾರ ರೈತರಿಗೆ ಸಹಾಯಕವಾಗಲಿದೆ.
ಬೆಳೆ ಸಮೀಕ್ಷೆ ಬಗ್ಗೆ ಮಾಹಿತಿ ಬೇಕೆ? ಈ ಸಹಾಯವಾಣಿ ಸಂಪರ್ಕಿಸಿ
+ There are no comments
Add yours