ಗ್ರಾಪಂಗಳಲ್ಲಿ ಜನನ, ಮರಣ ಪ್ರಮಾಣ ಪತ್ರ ಪಡೆಯುವುದು ಹೇಗೆ? ಶುಲ್ಕ ಎಷ್ಟು? ಇಲ್ಲಿದೆ ಮಾಹಿತಿ

1 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

ಜು.1ರಿಂದ ಗ್ರಾ.ಪಂ.ಗಳಲ್ಲಿ ಜನನ, ಮರಣ ನೋಂದಣಿ

Tumkurnews
ತುಮಕೂರು: ಗ್ರಾಮೀಣ ಪ್ರದೇಶದಲ್ಲಿ ನಾಗರಿಕ ನೋಂದಣಿ ಪದ್ಧತಿಯನ್ನು ಬಲಪಡಿಸಲು ಹಾಗೂ ಘಟಿಸುವ ಶೇ.100ರಷ್ಟು ಜನನ, ಮರಣ ನೋಂದಣಿ ದಾಖಲಿಸಲು ಸರ್ಕಾರವು ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಗಳಿಗೆ ಹೊಸ ಜವಾಬ್ದಾರಿ ನೀಡಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಜುಲೈ 1ರಿಂದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಜನನ ಅಥವಾ ಮರಣ ಘಟನೆ ಸಂಭವಿಸಿದ 30 ದಿನಗಳ ಒಳಗಾಗಿ ನೋಂದಣಿ ಮಾಡಿ ಪ್ರಮಾಣಪತ್ರ ವಿತರಿಸುವ ಕಾರ್ಯವನ್ನು ಆರಂಭ ಮಾಡಲಾಗುವುದು.

ಪಂಚಾಯತಿಯ ಪ್ರತಿಯೊಬ್ಬ ಕಾರ್ಯದರ್ಶಿಯು ನಿಗದಿತ ಅವಧಿಯೊಳಗಾಗಿ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ವಿತರಿಸುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕೆಂದು ಜಿಲ್ಲಾ ಪಂಚಾಯತ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಪ್ರಭು ಸೂಚಿಸಿದ್ದಾರೆ.

ವಾಯು ಸೇನೆಯಲ್ಲಿ ಅಗ್ನಿವೀರ್: ವಾಯು ಹುದ್ದೆಗೆ ಅರ್ಜಿ ಆಹ್ವಾನ
ಜನನ, ಮರಣ ಘಟನೆಗಳು ಸಂಭವಿಸಿದ 30 ದಿನಗಳವರೆಗಿನ ಪ್ರಕರಣಗಳಲ್ಲಿ ನೋಂದಾಯಿಸಲು ಪಂಚಾಯಿತಿ ಕಾರ್ಯದರ್ಶಿ ಹಾಗೂ 30 ದಿನಗಳಿಂದ ಒಂದು ವರ್ಷದವರೆಗಿನ ಪ್ರಕರಣಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳನ್ನು ಜನನ, ಮರಣ ನೋಂದಣಾಧಿಕಾರಿಗಳನ್ನಾಗಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

ತುಮಕೂರು: ಮಹಾನಗರ ಪಾಲಿಕೆಯಲ್ಲಿ ಹುದ್ದೆ: ಅರ್ಜಿ ಆಹ್ವಾನ
ಜನನ, ಮರಣ ನಡೆದ 21 ದಿನಗಳ ಒಳಗಾಗಿ ನೋಂದಣಿ ಮಾಡಿ ಪ್ರಮಾಣಪತ್ರವನ್ನು ಉಚಿತವಾಗಿ, 21 ದಿನಗಳಿಂದ 30 ದಿನಗಳ ನಡುವೆ ನೋಂದಣಿ ಮಾಡಿದರೆ 2 ರೂ. ವಿಳಂಬ ಶುಲ್ಕ, 30 ದಿನಗಳಿಂದ ಒಂದು ವರ್ಷದವರೆಗಿನ ಪ್ರಕರಣಗಳಲ್ಲಿ 5 ರೂ. ಗಳ ಶುಲ್ಕ ಪಡೆದು ನೋಂದಣಿ ಮಾಡಬಹುದು.
ಕರ್ನಾಟಕ ಜನನ, ಮರಣ ನೋಂದಣಿ ನಿಯಮಗಳ ಪ್ರಕಾರ 1 ವರ್ಷದ ಬಳಿಕ ನೋಂದಣಿ ಮಾಡಿದರೆ ಪ್ರಥರ್ಮ ದರ್ಜೆ ದಂಡಾಧಿಕಾರಿ ಅವರ ಆದೇಶದ ಜೊತೆಗೆ 10 ರೂ. ವಿಳಂಬ ಶುಲ್ಕ ಪಡೆದು ನೋಂದಣಿ ಮಾಡಬೇಕು.
ಹೆಚ್ಚಿನ ವಿವರಗಳಿಗೆ ಇ-ಮೇಲ್ ವಿಳಾಸ crbdkar@gmail.com ಅಥವಾ ಇ-ಜನ್ಮ ಸಹಾಯವಾಣಿ ಸಂಖ್ಯೆ : 1800-425-6578ನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ತುಮಕೂರು: ಪ್ರತಿ ಗ್ರಾಪಂಗಳಲ್ಲಿ ಕಡ್ಡಾಯವಾಗಿ ಈ ಕೆಲಸ ಆಗಬೇಕು: ಜಿಪಂ‌ ಸಿಇಒ ಪ್ರಭು ಜಿ ಸೂಚನೆ

About The Author

You May Also Like

More From Author

+ There are no comments

Add yours