ತುಮಕೂರು: ಮಹಾನಗರ ಪಾಲಿಕೆಯಲ್ಲಿ ಹುದ್ದೆ: ಅರ್ಜಿ ಆಹ್ವಾನ

1 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

ತುಮಕೂರು: ಮಹಾನಗರ ಪಾಲಿಕೆಯಲ್ಲಿ ಹುದ್ದೆ: ಅರ್ಜಿ ಆಹ್ವಾನ

Tumkurunews
ತುಮಕೂರು: ಮಹಾನಗರ ಪಾಲಿಕೆಯ ಡೇ-ನಲ್ಮ್ ಅಭಿಯಾನ ಅನುಷ್ಟಾನಕ್ಕಾಗಿ 2 ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳನ್ನು ಗೌರವಧನ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಸ್ವ-ಸಹಾಯ ಗುಂಪುಗಳಲ್ಲಿ ಸದಸ್ಯತ್ವ ಹೊಂದಿರುವ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಪ್ರಕಟಣೆ ಹೊರಡಿಸಿದ 7 ದಿನಗಳೊಳಗಾಗಿ ಅರ್ಜಿ ನಮೂನೆ ಜೊತೆಗೆ ಅಗತ್ಯ ದಾಖಲಾತಿಗಳನ್ನು ಆಯುಕ್ತರು, ತುಮಕೂರು ಮಹಾನಗರಪಾಲಿಕೆ, ತುಮಕೂರು ಇವರಿಗೆ ಸಲ್ಲಿಸತಕ್ಕದ್ದು.

ತುಮಕೂರು: ಅಟ್ಟಿಕಾ ಬಾಬು ಬಂಧನ: ಕೇಸ್ ಏನು ಗೊತ್ತೇ?
ಅರ್ಜಿದಾರರು 18 ರಿಂದ 45 ವರ್ಷ ವಯೋಮಾನವಾಗಿರಬೇಕು, ಕನಿಷ್ಠ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು. ಡೇ-ನಲ್ಮ್ ಪ್ರದೇಶ ಮಟ್ಟದ ಒಕ್ಕೂಟ, ಸ್ವ-ಸಹಾಯ ಸಂಘದಲ್ಲಿ ಕನಿಷ್ಠ 3 ವರ್ಷಗಳ ಅವಧಿಗೆ ಸದಸ್ಯರಾಗಿರಬೇಕು. ಕಂಪ್ಯೂಟರ್ ನಿರ್ವಹಣೆಯ ಜ್ಞಾನ ಹೊಂದಿರಬೇಕು. ಯಾವುದೇ ಸರ್ಕಾರಿ, ಸರ್ಕಾರೇತರ ಸಂಸ್ಥೆಗಳಲ್ಲಿ ಪೂರ್ಣಾವಧಿ ಅಥವಾ ತಾತ್ಕಾಲಿಕ ಉದ್ಯೋಗಸ್ಥರಾಗಿರಬಾರದು ಎಂದು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಮಕೂರು: ಒಂದು ಮಗು ಅಪಹರಣ ಕೇಸ್ ಹಿಂದೆ ಹೋದ ಪೊಲೀಸರಿಂದ 9 ಮಕ್ಕಳ ರಕ್ಷಣೆ!: ಮಕ್ಕಳ ಕಳ್ಳರ ಜಾಲ ಪತ್ತೆ

About The Author

You May Also Like

More From Author

+ There are no comments

Add yours