ತುಮಕೂರು: ಬೀದಿಬದಿ ವ್ಯಾಪಾರಿಗಳು ಸ್ಥಳಾಂತರಗೊಳ್ಳಲು ಸೂಚನೆ

1 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

ಬೀದಿಬದಿ ವ್ಯಾಪಾರಿಗಳು ಸ್ಥಳಾಂತರಗೊಳ್ಳಲು ಸೂಚನೆ

Tumkurnews
ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಬಿ.ಹೆಚ್ ರಸ್ತೆ, ಎಸ್.ಎಸ್.ಪುರಂ, ಪಿ.ಎನ್.ಟಿ ಕ್ವಾಟ್ರಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಾರ ಮಾಡುತ್ತಿರುವ ಬೀದಿಬದಿ ವ್ಯಾಪಾರಿಗಳು ಸ್ಮಾರ್ಟ್ ಸಿಟಿ ವತಿಯಿಂದ ವಾರ್ಡ್ 26ರ ದೋಬಿಘಾಟ್, ವಾರ್ಡ್ 31ರ ಜಯನಗರದಲ್ಲಿ ನಿರ್ಮಿಸಿರುವ ವೆಂಡಿಂಗ್ ಜೋನ್‍ಗಳಿಗೆ 7 ದಿನಗಳ ಒಳಗಾಗಿ ಸ್ಥಳಾಂತರಗೊಳ್ಳಬೇಕು ಎಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಮಕೂರು ಜಿಲ್ಲಾ ಬಂದ್: ಶಾಲಾಕಾಲೇಜುಗಳಿಗೆ ರಜೆ ಇಲ್ಲ: ಜಿಲ್ಲಾಧಿಕಾರಿ

ಪಾಲಿಕೆ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ಅನಾಥ, ನಿಷ್ಕ್ರಿಯ ತಳ್ಳುವ ಗಾಡಿ ಮತ್ತು ವಾಹನಗಳಿದ್ದು, ಸಾರ್ವಜನಿಕರಿಗೆ ಓಡಾಡಲು ತುಂಬಾ ತೊಂದರೆ ಆಗುತ್ತಿರುವುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಈ ಅನಾಥ, ನಿಷ್ಕ್ರಿಯ ತಳ್ಳುವ ಗಾಡಿ ಮತ್ತು ವಾಹನಗಳ ಮಾಲೀಕರು 7 ದಿನಗಳ ಒಳಗಾಗಿ ತೆರವುಗೊಳಿಸಬೇಕು. ತಪ್ಪಿದ್ದಲ್ಲಿ ಪಾಲಿಕೆ ವತಿಯಿಂದ ನಿಯಮಾನುಸಾರ ಕ್ರಮವಹಿಸಲಾಗುವುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಮಕೂರು: ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರ ಹುದ್ದೆಗೆ ಅರ್ಜಿ ಆಹ್ವಾನ

About The Author

You May Also Like

More From Author

+ There are no comments

Add yours