ನಾಳೆ ತುಮಕೂರು ಬಂದ್ ನಡೆಯುತ್ತಾ? ಇಲ್ಲಿದೆ ಮಾಹಿತಿ
Tumkurnews
ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಜೂನ್ 25 ಮಂಗಳವಾರ ತುಮಕೂರು ಬಂದ್ ಕರೆ ನೀಡಲಾಗಿದೆ.
ಮಾಜಿ ಸಚಿವ ಸೊಗಡು ಶಿವಣ್ಣ ನೇತೃತ್ವದಲ್ಲಿ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿ ಹೋರಾಟ ಸಮಿತಿಯಿಂದ ಸ್ವಯಂ ಪ್ರೇರಿತ ಬಂದ್ ಕರೆ ನೀಡಲಾಗಿದೆ.
ಹೇಮಾವತಿ ಕೆನಾಲ್ ವಿರೋಧಿಸಿ ವಿಧಾನಸೌಧ ಚಲೋ, ಡಿಸಿ ಕಚೇರಿ ಎದುರು ಧರಣಿ, ಜಿಲ್ಲಾ ಬಂದ್ ನಿರ್ಧಾರ
ತುಮಕೂರು ಬಂದ್’ಗೆ ಕನ್ನಡಸೇನೆ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು, ಹೋಟೆಲ್ ಮಾಲಿಕರ ಸಂಘ, ಆಟೊ ಚಾಲಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಮಂಗಳವಾರ ನಡೆಯಲಿರುವ ಹೋರಾಟದಲ್ಲಿ ಪಾಲ್ಗೊಳ್ಳಲಿವೆ.
ಜೂ.25ರಂದು ತುಮಕೂರು ಬಂದ್ ಅಂಗವಾಗಿ ನಗರದ ಟೌನ್ ಹಾಲ್ ವೃತ್ತದಿಂದ ಎಂ.ಜಿ ರಸ್ತೆ ಮಾರ್ಗವಾಗಿ ಸಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಸ್ಥಗಿತಗೊಳಿಸುವಂತೆ ಮನವಿ ಸಲ್ಲಿಸಲಾಗುವುದು ಎಂದು ಹೋರಾಟ ಸಮಿತಿಯು ತಿಳಿಸಿದೆ.
ಜೂ.25ರಂದು ತುಮಕೂರು ಬಂದ್ ನಡೆಯುತ್ತದೆಯೇ ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಬಂದ್ ಕರೆಗೆ ಈಗಾಗಲೇ ಹೋಟೆಲ್ ಮಾಲೀಕರ ಸಂಘ, ಆಟೊ ಚಾಲಕರ ಸಂಘ, ಚಿನ್ನಬೆಳ್ಳಿ ವ್ಯಾಪಾರಿಗಳ ಸಂಘವು ಬೆಂಬಲ ಸೂಚಿಸಿವೆ. ಜೊತೆಗೆ ಲಾರಿ ಚಾಲಕರ ಸಂಘ, ವಿವಿಧ ಕನ್ನಡ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಬಂದ್ ಬಹುತೇಕ ಯಶಸ್ವಿಯಾಗುವ ನಿರೀಕ್ಷೆ ಇದೆ.
+ There are no comments
Add yours