ತುಮಕೂರು: ಬಾಡಿಗೆ ಕಟ್ಟಡ: ಮಾಲೀಕರಿಂದ ಅರ್ಜಿ ಆಹ್ವಾನ

1 min read

 

ಬಾಡಿಗೆ ಕಟ್ಟಡ: ಮಾಲೀಕರಿಂದ ಅರ್ಜಿ ಆಹ್ವಾನ

Tumkurnews
ತುಮಕೂರು: ತುಮಕೂರು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಡಿ.ದೇವರಾಜ ಅರಸು ಮೆಟ್ರಿಕ್ ನಂತರ ಬಾಲಕಿಯರ, ಬಾಲಕರ ವಿದ್ಯಾರ್ಥಿನಿಲಯಗಳಿಗೆ 4 ಬಾಡಿಗೆ ಕಟ್ಟಡಗಳು ಬೇಕಾಗಿದ್ದು, ಅರ್ಹ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ.

2026ರ ವೇಳೆಗೆ ತುಮಕೂರು-ರಾಯದುರ್ಗ ರೈಲ್ವೆ ಯೋಜನೆ ಸಮರ್ಪಣೆ: ಕೇಂದ್ರ ಸಚಿವ ವಿ.ಸೋಮಣ್ಣ
ಲೋಕೋಪಯೋಗಿ ಇಲಾಖೆಯವರು ನಿಗದಿಪಡಿಸುವ ಬಾಡಿಗೆಗೆ ಒಪ್ಪುವ ಸೂಕ್ತ ಕಟ್ಟಡವು ಬೇಕಾಗಿದ್ದು, ಈ ಕಟ್ಟಡದಲ್ಲಿ 100-125 ವಿದ್ಯಾರ್ಥಿಗಳು ವಾಸಿಸಲು ಸುಮಾರು 15 ರಿಂದ 20 ವಾಸದ ಕೊಠಡಿ, ಸ್ನಾನಗೃಹ, ಶೌಚಾಲಯಗಳು ಮತ್ತು ಸ್ವಂತ ಬೋರ್‍ವೆಲ್ ನೀರಿನ ವ್ಯವಸ್ಧೆ ಹಾಗೂ ಇನ್ನಿತರೆ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿರಬೇಕು ಎಂದು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You May Also Like

More From Author

+ There are no comments

Add yours