ಕೊಬ್ಬರಿ ಖರೀದಿ ಅವಧಿ ವಿಸ್ತರಣೆ

1 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

ಕೊಬ್ಬರಿ ಖರೀದಿ ಅವಧಿ ವಿಸ್ತರಣೆ

Tumkurnews
ತುಮಕೂರು: ಕೇಂದ್ರ ಕೃಷಿ ಹಾಗೂ ರೈತ ಕ್ಷೇಮಾಭಿವೃದ್ಧಿ ಸಚಿವಾಲಯದ ಆದೇಶದಂತೆ ಜಿಲ್ಲೆಯಲ್ಲಿ ಬೆಂಬಲಬೆಲೆ ಯೋಜನೆಯಡಿ ಉಂಡೆ ಕೊಬ್ಬರಿ ಖರೀದಿ ಅವಧಿಯನ್ನು ಜೂನ್ 29ರವರೆಗೆ ವಿಸ್ತರಿಸಲಾಗಿದೆ.
ನಫೆಡ್ ಸಂಸ್ಥೆಯ ಖರೀದಿ ಕೇಂದ್ರಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರುವ ರೈತರಿಂದ ಕೊಬ್ಬರಿ ಖರೀದಿಸಲು ಈ ಹಿಂದೆ ಜೂನ್ 14ರವರೆಗೆ ಗಡುವು ನೀಡಲಾಗಿತ್ತು. ಖರೀದಿ ಅವಧಿಯನ್ನು ರೈತರ ಅನುಕೂಲಕ್ಕಾಗಿ ಜೂನ್ 29ರವರೆಗೆ ವಿಸ್ತರಿಸಲಾಗಿದ್ದು, ನೋಂದಾಯಿಸಿಕೊಂಡ ರೈತರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೃಷಿ ಉತ್ಪನ್ನ ಮಾರುಕಟ್ಟೆ ಉಪನಿರ್ದೇಶಕ ರಾಜಣ್ಣ ಮನವಿ ಮಾಡಿದ್ದಾರೆ.

About The Author

You May Also Like

More From Author

+ There are no comments

Add yours