ತುಮಕೂರು: ಜೂನ್ 11ರಂದು ಉದ್ಯೋಗಕ್ಕಾಗಿ ನೇರ ಸಂದರ್ಶನ

1 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

ಜೂನ್ 11ರಂದು ಉದ್ಯೋಗಕ್ಕಾಗಿ ನೇರ ಸಂದರ್ಶನ

Tumkurnews
ತುಮಕೂರು: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಎ.ಐ.ಎಂ ಸ್ಕಯರ್ ಕಾರ್ಪೊರೇಷನ್, ಪೋದಾರ್ ಜಂಬೋ ಕಿಡ್ಸ್ ಮತ್ತು ಮುತ್ತೂಟ್ ಪೈನಾನ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಉದ್ಯೋಗ ನೀಡುವ ಸಂಬಂಧ ಅಭ್ಯರ್ಥಿಗಳಿಗೆ ಜೂನ್ 11ರಂದು ನೇರ ಸಂದರ್ಶನ ನಡೆಯಲಿದೆ.
ಎಸ್‍ಎಸ್‍ಎಲ್‍ಸಿ, ಪಿಯುಸಿ, ಡಿಎಡ್, ಬಿಎಡ್, ಯಾವುದೇ ಪದವಿ ಪಾಸಾದ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಜೂನ್ 11ರಂದು ಬೆಳಿಗ್ಗೆ 10ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಡಿ.ಸಿ.ಸಿ. ಬ್ಯಾಂಕ್ ಎದುರು, ಚರ್ಚ್ ಸರ್ಕಲ್ ಹತ್ತಿರ ತಮ್ಮ ಬಯೋಡೇಟಾದೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0816-2278488, 9071021143ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours