ಕೊಬ್ಬರಿ ಖರೀದಿ ಹಣ ಪಾವತಿಸದ ಸರ್ಕಾರ: ರೈತರಿಂದ ಕೊಬ್ಬರಿ ವಾಪಾಸ್ ಪಡೆಯುವ ಚಳುವಳಿಗೆ ಚಾಲನೆ

1 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

ಕೊಬ್ಬರಿ ಖರೀದಿ ಹಣ ಪಾವತಿಸದ ಸರ್ಕಾರ: ರೈತರಿಂದ ಕೊಬ್ಬರಿ ವಾಪಾಸ್ ಪಡೆಯುವ ಚಳುವಳಿಗೆ ಚಾಲನೆ

Tumkurnews
ತುಮಕೂರು: ರೈತರಿಂದ ಬೆಂಬಲ ಬೆಲೆಯಡಿ ಖರೀದಿ ಮಾಡಿರುವ ಕೊಬ್ಬರಿಯನ್ನು ಹಿಂಪಡೆಯುವ ಚಳುವಳಿಗೆ ರೈತರು ಚಾಲನೆ ನೀಡಿದ್ದು, ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿದೆ.

ಸೋಮವಾರ ತುಮಕೂರು ಬಂದ್
ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿ ಮಾಡಿರುವ ಕೊಬ್ಬರಿಗೆ ಸರ್ಕಾರ ಹಣ ಪಾವತಿ ಮಾಡಿಲ್ಲ. ಇದರಿಂದ ತೀವ್ರ ಅಸಮಾಧಾನಗೊಂಡಿರುವ ರೈತರು ನಾವು ಮಾರಾಟ ಮಾಡಿರುವ ಕೊಬ್ಬರಿಯನ್ನು ನಮಗೆ ವಾಪಾಸು ಕೊಡಿ ಎಂದು ಕೇಳುತ್ತಿದ್ದಾರೆ. ರೈತರ ಹಣ ಬಾಕಿ ಉಳಿಸಿಕೊಂಡಿರುವ ಸರ್ಕಾರಕ್ಕೆ ಇದು ತೀವ್ರ ಮುಜುಗರ ತಂದಿದೆ.
ರೈತರಿಂದ ಮನವಿ ಸಲ್ಲಿಕೆ: ಕೊಬ್ಬರಿ ವಾಪಾಸು ಪಡೆಯುವ ಬಗ್ಗೆ ತಿಪಟೂರು ತಾಲ್ಲೂಕಿನ ರೈತರು ಉಪ‌ವಿಭಾಗಾಧಿಕಾರಿಗೆ ಲೇಖಿತ ಮನವಿ ಸಲ್ಲಿಸಿದ್ದಾರೆ.
2024ರ ಏಪ್ರಿಲ್ 1ರಿಂದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯು ರೈತರಿಂದ FAQ ಗುಣಮಟ್ಟದ ಕೊಬ್ಬರಿಯನ್ನು ಖರೀದಿಸುತ್ತಿದೆ.

ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್’ನ ಎಲ್ಲಾ ಕಾಮಗಾರಿಗಳಿಗೆ ತಡೆ: ಜಿಲ್ಲಾಧಿಕಾರಿ ಆದೇಶ
ಆದರೆ, ರೈತರಿಂದ ಕೊಬ್ಬರಿ ಖರೀದಿಸುವ ಸಂಸ್ಥೆಯು, ಮಂಡಳಿಯು ತಾವು ಖರೀದಿಸಿದ ಕೊಬ್ಬರಿಗೆ ಮೂರು ದಿನದೊಳಗೆ ರೈತರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಬೇಕೆಂಬ ನಿಯಮವಿದೆ. ಆದರೆ ಸದರಿ ಖರೀದಿ ಸರ್ಕಾರಿ ಇಲಾಖೆಯು ಈ ನಿಯಮವನ್ನು ಗಾಳಿಗೆ ತೂರಿದ್ದು, ರೈತರಿಗೆ ತಿಂಗಳಾದರೂ ಹಣವನ್ನು ಪಾವತಿಸದೆ ರೈತರಿಗೆ ಮೋಸ ಮಾಡುತ್ತಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 13ರಿಂದ ಇಂದಿನವರೆಗೆ ಖರೀದಿ ಮಾಡಿರುವ ಕೊಬ್ಬರಿಗೆ ಯಾವುದೇ ರೀತಿಯ ಹಣ ಪಾವತಿಯಾಗಿಲ್ಲ. ಈ ವಿಳಂಬ ಧೋರಣೆಯಿಂದ ರೈತರಿಗೆ ತುಂಬಾ ಆರ್ಥಿಕ ಹೊರೆಯಾಗಿದೆ. ಇನ್ನೂ ವಿಳಂಬವನ್ನು ಸಹಿಸಿ ಆರ್ಥಿಕ ಸಂಕಷ್ಟವನ್ನು ಅನುಭವಿಸುವ ಪರಿಸ್ಥಿತಿ ನಮಗಿಲ್ಲ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.

ಇಂದಿನಿಂದ ಶಾಲೆ ಪ್ರಾರಂಭ: ಪೂರ್ವ ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ
ಸರ್ಕಾರವು ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ‘ನಮ್ಮ ಕೊಬ್ಬರಿ, ನಮ್ಮ ಹಣ, ನಮ್ಮ ಹಕ್ಕು’ ಎಂಬ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ನಾವು ಮಾರಾಟ ಮಾಡಿದ ಕೊಬ್ಬರಿಯನ್ನು ಹಿಂಪಡೆಯುವ ನಿರ್ಧಾರ ಮಾಡಿದ್ದೇವೆ. ಸರ್ಕಾರದ ಭಾಗವಾಗಿರುವ ತಾಲ್ಲೂಕು ಆಡಳಿತವು ಮೇಲ್ಕಂಡ ಅಭಿಯಾನದಲ್ಲಿ ಸಹಕರಿಸಿ ರೈತರಿಗೆ ಕೊಬ್ಬರಿ ಹಿಂದಿರುಗಿಸಿ ಕೂಡಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ತಪ್ಪಿದಲ್ಲಿ ರೈತರೇ ಖರೀದಿ ಕೇಂದ್ರದಿಂದ ಕೊಬ್ಬರಿಯನ್ನು ಹಿಂಪಡೆಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ತುಮಕೂರು: ರಾಜೀನಾಮೆಗೆ ವ್ಯಾಪಕ ಒತ್ತಾಯ: ಸಚಿವ ಸ್ಥಾನ ತ್ಯಜಿಸಲು ಸಿದ್ಧ ಎಂದ ಕೆ‌.ಎನ್ ರಾಜಣ್ಣ!

 

About The Author

You May Also Like

More From Author

+ There are no comments

Add yours