ತುಮಕೂರು: ಸರ್ವರ್ ಹ್ಯಾಕ್ ಮಾಡಿ 34 ಕೋಟಿ ಮೌಲ್ಯದ ಬಿಟ್ ಕಾಯಿನ್ ಕಳವು: ಬಂಧನ

1 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

ತುಮಕೂರು: ಸರ್ವರ್ ಹ್ಯಾಕ್ ಮಾಡಿ ಬಿಟ್ ಕಾಯಿನ್ ಕಳವು: ಬಂಧನ

Tumkurnews
ಬೆಂಗಳೂರು: ತುಮಕೂರಿನ ಯೂನೊಕಾಯಿನ್ ಟೆಕ್ನಾಲಜೀಸ್ ಕಂಪನಿಯ ಸರ್ವರ್ ಹ್ಯಾಕ್ ಮಾಡಿ 60.6 ಬಿಟ್ ಕಾಯಿನ್ (ಈಗಿನ ಮಾರುಕಟ್ಟೆ ಮೌಲ್ಯ 34.82 ಕೋಟಿ ರೂ.) ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ರಾಜಸ್ಥಾನದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ರಾಬಿನ್ ಖಂಡೇನ್‌ವಾಲ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.

ತುಮಕೂರು: ಪ್ರಜ್ವಲ್ ರೇವಣ್ಣ ಬಂಧನಕ್ಕೆ ಒತ್ತಾಯಿಸಿ ಹಾಸನ ಚಲೋ
‘ಪಶ್ಚಿಮ ಬಂಗಾಳದ ರಾಬಿನ್ ಖಂಡೇನ್‌ವಾಲ, ಕರೆನ್ಸಿ ವಿನಿಮಯ ಕೆಲಸ ಮಾಡುತ್ತಿದ್ದರು. ‘ರಾಬಿನ್ ಆನ್‌ಲೈನ್ ಸರ್ವೀಸ್’ ಹೆಸರಿನಲ್ಲಿ ಕಂಪನಿಯೊಂದನ್ನು ನಡೆಸುತ್ತಿದ್ದರು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಅಂತರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ (29)ಯಿಂದ ಬಿಟ್ ಕಾಯಿನ್’ಗಳನ್ನು ಪಡೆದುಕೊಂಡು, ಅದನ್ನು ರಾಬಿನ್ ಖಂಡೇನ್’ವಾಲ ರೂಪಾಯಿಗೆ ವಿನಿಮಯ ಮಾಡುತ್ತಿದ್ದರು ಎನ್ನಲಾಗಿದೆ.

ಗೃಹ ಸಚಿವ ಡಾ.ಜಿ ಪರಮೇಶ್ವರ್’ಗೆ ಜನರ ಬಗ್ಗೆ ಕಳಕಳಿ ಇದ್ದರೆ ಕೂಡಲೇ ರಾಜೀನಾಮೆ ನೀಡಲಿ
ತುಮಕೂರಿನ ಕಂಪನಿ: ತುಮಕೂರಿನಲ್ಲಿರುವ ಯೂನೊಕಾಯಿನ್ ಟೆಕ್ನಾಲಜೀಸ್ ಕಂಪನಿಯ ಸರ್ವರ್ ಹ್ಯಾಕ್ ಮಾಡಿ 60.6 ಬಿಟ್ ಕಾಯಿನ್’ಗಳನ್ನು ಕಳ್ಳತನ ಮಾಡಲಾಗಿತ್ತು. ಈ ಕುರಿತು ಕಂಪನಿಯ ಡೈರೆಕ್ಟರ್ ಬಿ.ವಿ ಹರೀಶ್ ಅವರು ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಟೆಕ್ನಿಕಲ್ ಎವಿಡೆನ್ಸ್ ಆಧಾರದ ಮೇಲೆ ಶ್ರೀಕಿಯನ್ನು ಬಂಧಿಸಿದ್ದರು. ಇದೀಗ ಪ್ರಕರಣದಲ್ಲಿ ರಾಜಾಸ್ಥಾನದಲ್ಲಿ ತಲೆ ಮರೆಸಿಕೊಂಡಿದ್ದ ರಾಬಿನ್’ನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

ಮೊಬೈಲ್ ಕಳೆದುಕೊಂಡರೆ ಹೀಗೆ ಮಾಡಿ: 70 ಮೊಬೈಲ್ ಪತ್ತೆ ಮಾಡಿದ ಚಿಕ್ಕಮಗಳೂರು ಪೊಲೀಸ್

About The Author

You May Also Like

More From Author

+ There are no comments

Add yours