ತುಮಕೂರು: ಜಿಲ್ಲೆಗೆ ಸರ್ಕಾರದಿಂದ ಮತ್ತೊಂದು ಮರ್ಮಾಘಾತ: ಎತ್ತಿನಹೊಳೆ ನೀರಿಗೂ ಕನ್ನ!

1 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

ತುಮಕೂರು ಜಿಲ್ಲೆಗೆ ಸರ್ಕಾರದಿಂದ ಮತ್ತೊಂದು ಮರ್ಮಾಘಾತ

ಜಿಲ್ಲೆಯ ಹೇಮಾವತಿ ನೀರಿಗೆ ಅಷ್ಟೇ ಕುತ್ತು ಬಂದಿಲ್ಲ, ಎತ್ತಿನಹೊಳೆ ನೀರಿಗೂ ಕೂಡ ಕುತ್ತು ಬಂದಿದೆ: ಸೊಗಡು ಶಿವಣ್ಣ

Tumkurnews
ತುಮಕೂರು: ಜಿಲ್ಲೆಯ ಹೇಮಾವತಿ ನೀರಿನ ಹಂಚಿಕೆಯಲ್ಲೇ 70 ಕಿ.ಮೀ ರಿಂದ 35 ಕಿ.ಮೀ ಎಕ್ಸ್ ಪ್ರೆಸ್ ಕೆನಾಲ್ ಪೈಪ್ ಲೈನ್ ಮೂಲಕ ಮಾಗಡಿಗೆ ನೀರು ಕೊಂಡೊಯ್ಯುವ ಯೋಜನೆಗೆ ಜನರು ವಿರೋಧ ಮಾಡುತ್ತಿರುವುದು ಜಿಲ್ಲೆಯ ಗಮನದಲ್ಲಿದೆ. ಈ ಸಮಯದಲ್ಲೇ ತುಮಕೂರು ಜಿಲ್ಲೆಗೆ ಮತ್ತೊಂದು ಆಘಾತ ಎದುರಾಗಿದೆ.

ಎತ್ತಿನಹೊಳೆ ಯೋಜನೆಯಲ್ಲಿ ತುಮಕೂರು ಜಿಲ್ಲೆಗೆ ಹಂಚಿಕೆಯಾಗಿರುವ 25 ಟಿಎಂಸಿ ನೀರಿನಲ್ಲಿ 1.83 ಟಿಎಂಸಿ ನೀರನ್ನು ರಾಮನಗರ, ಮಾಗಡಿ ಹಾಗೂ ಕನಕಪುರ ತಾಲೂಕುಗಳಿಗೆ ತೆಗೆದುಕೊಂಡು ಹೋಗಲು ಯೋಜನೆ ರೂಪಿಸಿಕೊಂಡಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಎಲೆರಾoಪುರಕ್ಕೆ ಭೇಟಿ ನೀಡಿ ಯೋಜನೆಯ ಕಾಮಗಾರಿ ಪರಿಶೀಲಿಸಿ, ವಾಸ್ತವ ಸ್ಥಿತಿ ಅವಲೋಕಿಸಿ, ಸಮಗ್ರ ಮಾಹಿತಿ ಸಂಗ್ರಹಿಸಿರುವುದಾಗಿ ಅವರು ಹೇಳಿದ್ದಾರೆ.

ಹೇಮಾವತಿ ಕೆನಾಲ್ ಕಿಚ್ಚು: ಪೈಪ್ ತಂದ ಲಾರಿಗೆ ಅಡ್ಡ ಮಲಗಿ ಪ್ರತಿಭಟನೆ
ಜಿಲ್ಲೆಯ ರಾಜಕಾರಣಿಗಳು , ಜನಪ್ರತಿನಿಧಿಗಳು ರೈತರು ಮತ್ತು ಜನರ ದಿಕ್ಕು ತಪ್ಪಿಸಿ ಈ ಯೋಜನೆಯಿಂದ ಈಗಾಗಲೇ ಕೊರಟಗೆರೆ ತಾಲ್ಲೂಕು ಎಲೆರಾoಪುರದ ಬಳಿ ಬೃಹತ್ ಗಾತ್ರದ ಪಂಪ್ ಹೌಸ್, ಪ್ರತ್ಯೇಕ ಕೆಇಬಿ ಸ್ಟೇಷನ್, ಪೈಪ್ ಲೈನ್ ಕೂಡ ಮಾಡಿಕೊಂಡಿದ್ದಾರೆ. ಈ ನೀರಿಗೂ ಕೂಡ ರಾಮನಗರ ಜಿಲ್ಲೆಯ ರಾಜಕಾರಣಿಗಳ ಕಣ್ಣು ಬಿದ್ದಿದ್ದು, ಇದರಲ್ಲೂ ನಮ್ಮ ನೀರಿಗೆ ಕನ್ನ ಹಾಕಲು ಹೊಂಚು ಹಾಕಿ ನೀರು ತೆಗೆದುಕೊಂಡು ಹೋಗಲು ಈಗಾಗಲೇ ಕಾಮಗಾರಿ ಬಹುತೇಕ ಮುಗಿಯುತ್ತಾ ಬಂದಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಮಕೂರು: ರಾಜೀನಾಮೆಗೆ ವ್ಯಾಪಕ ಒತ್ತಾಯ: ಸಚಿವ ಸ್ಥಾನ ತ್ಯಜಿಸಲು ಸಿದ್ಧ ಎಂದ ಕೆ‌.ಎನ್ ರಾಜಣ್ಣ!
ಜಿಲ್ಲೆಗೆ ಹೇಮಾವತಿ ಎಕ್ಸ್‌ಪ್ರೆಸ್ ಚಾನಲ್ ಮಾಡುವ ಕಾರ್ಯವನ್ನು ಈಗಾಗಲೇ ರಾಜ್ಯ ಸರ್ಕಾರ ಮಾಡುವಲ್ಲಿ ನಿರತವಾಗಿದ್ದು, ಪದೇ ಪದೆ ನಾಗರೀಕರು ಮತ್ತು ರೈತರ ಮೇಲೆ ದಬ್ಬಾಳಿಕೆ ಪ್ರವೃತ್ತಿ ಮುಂದುವರೆದಿದ್ದು , ತುಮಕೂರು ಜಿಲ್ಲೆ ಬರಡಾಗಿ, ಭಾರೀ ಅನ್ಯಾಯವಾಗಲಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕೂಡಲೇ ರಾಜ್ಯ ಸರ್ಕಾರ ಜನ ಮತ್ತು ರೈತ ನಿಲುವು ತಾಳಬೇಕು ಮತ್ತು ನಮ್ಮ ನೀರಿನ ಹಂಚಿಕೆಗೆ ಕನ್ನ ಹಾಕುವುದು ತಕ್ಷಣವೇ ಕೈ ಬಿಡುವಂತೆ ಒತ್ತಾಯಿಸಿ, ಜಿಲ್ಲೆಯನ್ನು ಪ್ರತಿನಿಧಿಸುವ ಮಂತ್ರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಸರ್ಕಾರದ ಮೇಲೆ ಒತ್ತಡ ಹೇರಿ, ಜಿಲ್ಲೆಗೆ ಮರಣ ಶಾಸನವಾಗುವ ಜನವಿರೋಧಿ ಯೋಜನೆಗಳನ್ನು ನಿಲ್ಲಿಸುವಂತೆ ಸೊಗಡು ಶಿವಣ್ಣ ಆಗ್ರಹಿಸಿದ್ದಾರೆ.

ತುಮಕೂರು KSRTC ಹೊಸ ಬಸ್ ನಿಲ್ದಾಣ: ಕಾರ್ಯಾರಂಭಕ್ಕೂ ಮುನ್ನವೇ ಮಳೆ ನೀರು ಸೋರಿಕೆ! ವಿಡಿಯೋ
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಬೆಳಗುoಬ ಪ್ರಭಾಕರ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours