ತುಮಕೂರು: ನೋಂದಾಯಿತವಲ್ಲದ ಕೀಟ ನಾಶಕ ಜಪ್ತಿ: ಕೇಸು ದಾಖಲು

1 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

ನೋಂದಾಯಿತವಲ್ಲದ ಕೀಟನಾಶಕ ಜಪ್ತಿ

Tumkurnews
ತುಮಕೂರು: ಕೀಟನಾಶಕ ಮಾರಾಟ ಮಳಿಗೆಯೊಂದರ ಮೇಲೆ ಕೃಷಿ ಇಲಾಖೆ ಜಾರಿದಳದ ಅಧಿಕಾರಿಗಳು ದಾಳಿ ನಡೆಸಿದ್ದು, ನೋಂದಾಯಿತವಲ್ಲದ ಕೀಟನಾಶಕವನ್ನು ವಶಪಡಿಸಿಕೊಂಡಿದ್ದಾರೆ.

ಸಿಎಂ ಬರ ಪರಿಶೀಲನೆ ಸಭೆ: ತುಮಕೂರು ಜಿಲ್ಲೆಯ ನಿರ್ವಹಣೆ ಬಗ್ಗೆ ಮೆಚ್ಚುಗೆ
ಸಿರಾ ತಾಲ್ಲೂಕು ಬರಗೂರಿನ ಶ್ರೀ ವಿನಾಯಕ ಫರ್ಟಿಲೈಸರ್ಸ್ ಕೀಟನಾಶಕ ಮಾರಾಟ ಮಳಿಗೆ ಮೇಲೆ ದಾಳಿ ನಡೆಸಿದ್ದು, ನಿಯಮಾನುಸಾರ ಪರಿಶೀಲನೆ ನಡೆಸಿದಾಗ ನೋಂದಾಯಿತವಲ್ಲದ ಕೀಟನಾಶಕ ಮಾರಾಟ ಮಾಡುತ್ತಿದ್ದುದು ಪತ್ತೆಯಾಗಿದೆ. ಈ ಕೀಟನಾಶಕದ ಮಾದರಿಯನ್ನು ತೆಗೆದು ವಿಶ್ಲೇಷಣಾ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದು, ಪ್ರಯೋಗಾಲಯದಲ್ಲಿ ಇದು ನೋಂದಾಯಿತವಲ್ಲದ ಕೀಟನಾಶಕ ಎಂದು ವರದಿಯಾಗಿದೆ.

ಹಾಗಾಗಿ ಸುಮಾರು 34,300 ರೂ. ಮೌಲ್ಯದ ಈ ಕೀಟನಾಶಕವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಜಾರಿ ದಳದ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದ್ದಾರೆ.
ಸದರಿ ಕೀಟನಾಶಕ ತಯಾರಕರು, ಸರಬರಾಜುದಾರರು ಹಾಗೂ ಮಾರಾಟಗಾರರು ಕೀಟನಾಶಕ ಕಾಯ್ದೆ 1968 ಮತ್ತು ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ತುಮಕೂರು: ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಸೂಚನೆ
ಈ ದಾಳಿಯಲ್ಲಿ ಕೃಷಿ ಇಲಾಖೆ ಜಾರಿ ದಳದ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ, ಕೃಷಿ ಅಧಿಕಾರಿ ಎಚ್.ಜಿ. ಸತ್ಯನಾರಾಯಣ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

About The Author

You May Also Like

More From Author

+ There are no comments

Add yours